ಶರಣಬಸವ ಕೆ. ಗುಡದಿನ್ನಿ ಅವರ ಮೂರನೇ ಕಥಾಸಂಕಲನ ‘ಹುಲಿ ಮನೆ ಆಟ’ ಒಂಬತ್ತು ಕಥೆಗಳನ್ನೊಳಗೊಂಡಿದೆ. ರಾಯಚೂರು ಮೂಲದ ಈ ಲೇಖಕರ ಕಥೆಗಳಲ್ಲಿ ಅಲ್ಲಿನ ಭಾಷೆ, ಸಂಸ್ಕೃತಿ, ಜನಜೀವನ, ನೋವು–ನಲಿವುಗಳ ಜೀವಂತ ಚಿತ್ರಣ ಕಾಣುತ್ತದೆ.

ಈ ಸಂಕಲನದ ಬಹುತೇಕ ಕಥೆಗಳು ಗ್ರಾಮ್ಯಲೋಕದಲ್ಲಿ ಸುತ್ತುತ್ತವೆ. ಶಿಕ್ಷಕರಾಗಿರುವ ಕಾರಣದಿಂದ, ಕೆಲ ಕಥೆಗಳ ಹಿನ್ನೆಲೆ ಮತ್ತು ಪಾತ್ರಗಳು ಶಾಲೆ ಹಾಗೂ ಶಿಕ್ಷಣ ವ್ಯವಸ್ಥೆಯನ್ನು ಸುತ್ತಿಕೊಂಡಿವೆ. ‘ಹುಲಿ ಮನೆ ಆಟ’, ‘ಬಿಜ್ಜಮ್ಮನ ಕೆರೆ’, ‘ಸೈಕಲ್’, ‘ನನಗೆ ರೆಕ್ಕೆಗಳಿಲ್ಲ’ ಕಥೆಗಳು ಶಿಕ್ಷಣ ವ್ಯವಸ್ಥೆಯ ಒಳಮೈ ಜೊತೆಗೆ ಸಮಾಜದ ಇನ್ನೊಂದು ಮುಖವನ್ನೂ ತೀಕ್ಷ್ಣವಾಗಿ ಅನಾವರಣಗೊಳಿಸುತ್ತವೆ.

ಇವುಗಳ ನಡುವೆ ‘ಹುಲಿ ಮನೆ ಆಟ’ ಕಥೆ ತನ್ನ ನಿರೂಪಣಾ ವೈಶಿಷ್ಟ್ಯದಿಂದ ವಿಭಿನ್ನವಾಗಿ ತೋರುತ್ತದೆ. ಕಥೆಯನ್ನು ಹೇಳುವ ಗಡ್ಡ್ಯಾಗನಿಗೆ ಕಣ್ಣೇ ಕಾಣುವುದಿಲ್ಲ; ಅವನು ಕೇಳಿಕೊಂಡ ಅನುಭವಗಳನ್ನು ಓದುಗರಿಗೆ ದಾಟಿಸುತ್ತಾನೆ. ಶಿವರಾಜಪ್ಪ ಮಾಸ್ಟ್ರು ಶಾಲೆಗೆ ಜಾಗ ಕೇಳುವ ಪ್ರಸಂಗ, ದುರುಗಮ್ಮನ ಗುಡಿಯ ಸುತ್ತ ನಡೆಯುವ ಘಟನೆಗಳು ಪೂರ್ಣಚಂದ್ರ ತೇಜಸ್ವಿಯವರ ‘ಕರ್ವಾಲೋ’ ಕಾದಂಬರಿಯ ಕೆಲವು ಸನ್ನಿವೇಶಗಳನ್ನು ನೆನಪಿಗೆ ತರುತ್ತವೆ.

‘ಅಂಗಾಲ ಕಣ್ಣವರು’ ಕಥೆಯಲ್ಲಿ ದೇವರ ಹೆಸರಿನಲ್ಲಿ ನಡೆಯುವ ಬಡವರ ಸುಲಿಗೆಯನ್ನು, ಮನುಷ್ಯ ಸಂಬಂಧಗಳಿಗಿಂತ ‘ದೇವರು’ ಮುಖ್ಯವಾಗುವ ಮನೋಭಾವವನ್ನು ಸೂಕ್ಷ್ಮವಾಗಿ ತೋರಿಸಲಾಗಿದೆ. ‘ಅಹಲ್ಯಾ’ ಕಥೆ ಅಹಲ್ಯಾಬಾಯಿ ಹೋಳ್ಕರ್ ಅವರ ಜೀವನದ ಒಂದು ವಿಭಿನ್ನ ಮಗ್ಗುಲನ್ನು ಪರಿಚಯಿಸುತ್ತದೆ. ‘ನನಗೆ ರೆಕ್ಕೆಗಳಿಲ್ಲ’ ಕಥೆ ನೈಜ ಘಟನೆಯೊಂದರ ಪ್ರೇರಣೆಯಿಂದ ಹುಟ್ಟಿಕೊಂಡಿದ್ದು, ಅದರ ಭಾವನಾತ್ಮಕ ತೂಕ ಓದುಗರನ್ನು ತಟ್ಟುತ್ತದೆ.

ನಮ್ಮ ಸುತ್ತಮುತ್ತಲೇ ನಡೆಯುವ ಘಟನೆಗಳನ್ನು ಒಳಗಣ್ಣಿನಿಂದ ಕಂಡು ಕಥೆಯಾಗಿ ಹೆಣೆದಿರುವುದು ಈ ಸಂಕಲನದ ಪ್ರಮುಖ ಬಲ. ರಾಯಚೂರಿನ ಭಾಷಾ ಸೊಗಡು ಕಥೆಗಳಿಗೆ ನೈಜತೆ ನೀಡುತ್ತದೆ. ಆದರೆ, ಕೆಲವು ಕಥೆಗಳ ನಿರೂಪಣೆಯಲ್ಲಿ ಇನ್ನಷ್ಟು ಕಚ್ಚಿತನ ಮತ್ತು ತೀಕ್ಷ್ಣತೆ ಸಾಧಿಸಬಹುದಾಗಿತ್ತು ಎನ್ನುವ ಭಾವನೆ ಮೂಡುತ್ತದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-51-179520677

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.