ಶಿರಸಿ: ‘ಇತ್ತೀಚಿನ ದಿನಗಳಲ್ಲಿ ಸೃಜನಶೀಲ ಸಾಹಿತ್ಯದ ಕಡೆಗೆ ಜನರ ಒಲವು ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ’ ಎಂದು ಹಿರಿಯ ಪತ್ರಕರ್ತ ಜಯರಾಮ ಹೆಗಡೆ ಅಭಿಪ್ರಾಯಪಟ್ಟರು.

ನಗರದ ನೆಮ್ಮದಿ ಕುಟೀರದಲ್ಲಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್ ಶಿರಸಿ ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಸಾಹಿತಿ ವಾಸುದೇವ ಶಾನುಭಾಗ ಅವರ ಶಿರಸಿಯ ಸಾಧಕರು ಹಾಗೂ ಕಾವ್ಯ ಕುಸುಮಾಂಜಲಿ ಕೃತಿಗಳ ಲೋಕಾರ್ಪಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸೃಜನಶೀಲ ಬರವಣಿಗೆಗಳು ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ಅಂಕಣ ಬರಹಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಬರೆಯುವವರ ಸಂಖ್ಯೆ ಹೆಚ್ಚಿದ್ದರೂ, ಗಂಭೀರವಾಗಿ ಓದುವವರ ಸಂಖ್ಯೆ ತೀರಾ ವಿರಳವಾಗಿದೆ. ಇಂತಹ ಸಂದರ್ಭದಲ್ಲಿ ಶಿರಸಿಯ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ, ಅತ್ಯಂತ ಸರಳ ಭಾಷೆಯಲ್ಲಿ ಜನರಿಗೆ ಪರಿಚಯಿಸಿರುವ ವಾಸುದೇವ ಶಾನುಭಾಗ ಅವರ ಶ್ರದ್ಧೆ ಮೆಚ್ಚುವಂತದ್ದು’ ಎಂದು ಹೇಳಿದರು.

‘ಕಾವ್ಯ ಕುಸುಮಾಂಜಲಿ ಕೃತಿ ಬಿಡುಗಡೆಗೊಳಿಸಿದ ಸಾಹಿತಿ ಭಾಗೀರಥಿ ಹೆಗಡೆ ಮಾತನಾಡಿ, ‘ಲೇಖಕರ ಮಾತೃಭಾಷೆ ಕೊಂಕಣಿಯಾದರೂ ಕನ್ನಡದ ಮೇಲಿನ ಅಭಿಮಾನದಿಂದ ಹಲವು ಕೃತಿಗಳನ್ನು ರಚಿಸಿರುವುದು ಹೆಮ್ಮೆಯ ವಿಷಯ. ಬದುಕಿನಲ್ಲಿ ತನಗೂ ಹಿತವಾಗಿ, ಇತರರಿಗೂ ನೋವಾಗದಂತೆ ಸಾಗುವ ದಾರಿ ಸಾಹಿತ್ಯದಲ್ಲಿಯೂ ಇರಬೇಕು’ ಎಂದರು.

ಹಿರಿಯ ಪತ್ರಕರ್ತ ಅಶೋಕ ಹಾಸ್ಯಗಾರ ಆಶಯ ಮಾತನಾಡಿದರು. ಪರಿಷತ್ ಶಿರಸಿ ಘಟಕದ ಅಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕವಿ ಕೃಷ್ಣ ಪದಕಿ ಹಾಗೂ ಗಣಪತಿ ಭಟ್ ವರ್ಗಾಸರ ಕೃತಿ ಪರಿಚಯ ಮಾಡಿದರು. ಸಾಹಿತಿ ಜಿ.ಎ.ಹೆಗಡೆ ಸೋಂದಾ, ಪತ್ರಕರ್ತ ಶ್ರೀಧರ ಮಂಗಳೂರು ಉಪಸ್ಥಿತರಿದ್ದರು. ವಿ.ಆರ್.ಹೆಗಡೆ ಸ್ವಾಗತಿಸಿದರು. ಬರಹಗಾರ ಕೆ.ಎನ್.ಹೊಸ್ಮನಿ ನಿರ್ವಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-20-646482093

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.