ಶಿವಮೊಗ್ಗ: ‘ದ್ವೇಷಕ್ಕೆ ಅಂತ್ಯವಿಲ್ಲ; ಆದರೆ ಅದಕ್ಕೆ ಔಷಧಿಯನ್ನು ಸಾಹಿತ್ಯವೇ ನೀಡಬಲ್ಲದು’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಅಭಿಪ್ರಾಯಪಟ್ಟರು.

ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿಯ ಸಹಯೋಗದಲ್ಲಿ ಈಚೆಗೆ ಆಯೋಜಿಸಿದ್ದ ‘ಮನೆಗೊಂದು ಗ್ರಂಥಾಲಯ’ ಅಭಿಯಾನದ ಕರಪತ್ರ ಬಿಡುಗಡೆ ಹಾಗೂ ಜಿಲ್ಲಾ ಜಾಗೃತ ಸಮಿತಿ ಸದಸ್ಯರಿಗೆ ಅರ್ಹತಾ ಪತ್ರ ವಿತರಿಸಿ ಮಾತನಾಡಿದರು.

‘ಮನೆಗೊಂದು ಗ್ರಂಥಾಲಯ ಅಭಿಯಾನ ಕೇವಲ ಯೋಜನೆಯಲ್ಲ, ಜ್ಞಾನ ಮತ್ತು ಮಾನವೀಯತೆಯ ಬೆಳಕನ್ನು ಪ್ರತಿ ಮನೆಯೊಳಗೆ ತಲುಪಿಸುವ ಸಾಂಸ್ಕೃತಿಕ ಚಳವಳಿ. ಇಂದಿನ ಸಮಾಜದಲ್ಲಿ ಜಾತಿ- ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ದ್ವೇಷ, ಹಿಂಸೆ ಮತ್ತು ಅಸಹಿಷ್ಣುತೆಯಿಂದ ಮಾನವೀಯ ಮೌಲ್ಯಗಳಿಗೆ ಧಕ್ಕೆಯಾಗಿದೆ’ ಎಂದು ಹೇಳಿದರು.

‘ಪದವಿಗಳು, ಪಾಂಡಿತ್ಯಗಳು ಹೆಚ್ಚಾದರೂ ಮನುಷ್ಯತ್ವ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಸಾಹಿತ್ಯ ಓದಿನ ಸಂಸ್ಕೃತಿ ಮನುಷ್ಯನ ಮನಸ್ಸನ್ನು ಮೃದುಗೊಳಿಸಿ, ಸಮಾಜದಲ್ಲಿ ಪ್ರೀತಿ ಮತ್ತು ಸಹಬಾಳ್ವೆಯ ಮನೋಭಾವ ಬೆಳೆಸುತ್ತದೆ’ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಿ. ಮಂಜುನಾಥ ಮಾತನಾಡಿ, ‘ಪುಸ್ತಕ ಸಂಸ್ಕೃತಿಯನ್ನು ಮನೆ–ಮನೆಗೆ ತಲುಪಿಸುವ ಕಾರ್ಯ ಇಂದಿನ ಅವಶ್ಯಕತೆಯಾಗಿದೆ. ಹೊಸ ತಲೆಮಾರಿನಲ್ಲಿ ಓದುವ ಅಭಿರುಚಿ ಬೆಳೆಸುವ ಉದ್ದೇಶದಿಂದ ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಒಳಗೊಂಡಂತೆ ಹತ್ತು ಸದಸ್ಯರ ಜಾಗೃತ ಸಮಿತಿಯನ್ನು ರಚಿಸಿ, ಪುಸ್ತಕ ಖರೀದಿ ಮತ್ತು ಓದುವ ಸಂಸ್ಕೃತಿ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ’ ಎಂದರು.

‘ಮನೆಗೊಂದು ಗ್ರಂಥಾಲಯ ದೇವರ ಮನೆಯಷ್ಟೇ ಪವಿತ್ರವಾದ ಜ್ಞಾನದ ಕೇಂದ್ರವಾಗಬೇಕು. ದಿನಸಿ ಸಾಮಗ್ರಿಗಳ ಪಟ್ಟಿಯಲ್ಲಿ ಪುಸ್ತಕಕ್ಕೂ ಸ್ಥಾನ ಸಿಗಬೇಕು’ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಹೇಳಿದರು.

ಪುಸ್ತಕ ಪ್ರಾಧಿಕಾರದ ಸದಸ್ಯೆ ಅಕ್ಷತಾ ಕೆ. ಹುಂಚದಕಟ್ಟೆ ಮಾತನಾಡಿದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷೆ ಮಹಾದೇವಿ, ಸಾಹಿತಿ ಬಿ. ಚಂದ್ರೇಗೌಡ, ಎಚ್.ಟಿ. ಕೃಷ್ಣಮೂರ್ತಿ, ಷಣ್ಮುಖಾಚಾರ್, ಆರ್. ರತ್ನಯ್ಯ, ರೇವಣಪ್ಪ ಬಿದರಗೆರೆ ಹಾಗೂ ಭದ್ರಾವತಿ ರೇವಣಪ್ಪ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-42-945526709

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.