ಸಿದ್ದಾಪುರ: ಕಥೆಗಾರ ವಾಸ್ತವಿಕ ಚಿತ್ರಗಳನ್ನು ಅರ್ಥಮಾಡಿಕೊಳ್ಳದಿದ್ದರೆ ಬರೆಯಲಾರ. ಸೃಜನಶೀಲತೆ ಆರಂಭಗೊಳ್ಳುವದೇ ಭೌತಿಕ ಪ್ರಪಂಚದ ಅರಿವಿನಿಂದ ಎಂದು ಕಾದಂಬರಿಕಾರ ಶ್ರೀಧರ ಬಳಗಾರ ಹೇಳಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಪಟ್ಟಣದ ಪ್ಯಾಡಿ ಸೊಸೈಟಿಯಲ್ಲಿ ಆಯೋಜಿಸಿದ್ದ ಸಾಹಿತಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಕಥೆ ಎಂಬ ಭಾಷೆ ಎನ್ನುವ ವಿಷಯದ ಕುರಿತು ಮಾತನಾಡಿದರು.

ಭಾಷೆ ಎನ್ನುವುದು ಕೇವಲ ಸಂವಹನದ ಮಾಧ್ಯಮವಲ್ಲ. ಲೌಕಿಕ, ಶಾಬ್ಧಿಕ ಜಗತ್ತಿನ ಜೀವನವಲ್ಲ. ಭಾಷೆ ಎನ್ನುವದು ಮನುಷ್ಯನ, ಸಂಸ್ಕೃತಿಯ ಸಾರ. ಸಾಹಿತ್ಯಿಕ ನೆಲೆಯಲ್ಲಿ ಮಾತಿನಂತೆ ಮೌನವೂ ಭಾಷೆ. ಸಣ್ಣ ಕಥೆ ಕೂಡ ಒಂದು ಭಾಷೆ. ಸಾಹಿತ್ಯಿಕವಾದ ರುಚಿ,ವಾಸನೆ, ಬಣ್ಣ ಎಲ್ಲವೂ ಇದ್ದಾಗ ಕಥೆಯಾಗುತ್ತದೆ. ಸೂಕ್ಷ್ಮವಾದ ಒಳ ನೇಯ್ಗೆಗಳು ಬೇಕು. ವಾಸ್ತವಿಕತೆ ಮತ್ತು ಕಲ್ಪನೆಯನ್ನು ಸುಲಭವಾಗಿ ವಿಭಜಿಸಲಾಗುವದಿಲ್ಲ.ಎಷ್ಟೋ ಬಾರಿ ವಾಸ್ತವ ಎಂದದ್ದು ಅದಾಗಿರುವುದಿಲ್ಲ ಎಂದರು.

ತಾಲ್ಲೂಕು ಕಸಾಪ ಅಧ್ಯಕ್ಷ ಚಂದ್ರಶೇಖರ ಕುಂಬ್ರಿಗದ್ದೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂವಾದದಲ್ಲಿ ತಮ್ಮಣ್ಣ ಬೀಗಾರ, ಟಿ.ಎಂ.ರಮೇಶ, ಗಣೇಶ ಭಟ್ಟ, ಕನ್ನೇಶ ಕೋಲಸಿರ್ಸಿ, ಗಂಗಾಧರ ಕೊಳಗಿ, ಕೆ.ಬಿ.ವೀರಲಿಂಗನಗೌಡ್ರು, ಲಕ್ಷ್ಮಣ ಬಡಿಗೇರ, ವಿಠ್ಠಲ ಅವರಗುಪ್ಪ,ಗಣಪತಿ ಹೆಗಡೆ ಹಿತ್ಲಕೈ, ಸಿ.ಎಸ್.ಗೌಡರ್, ಟಿ.ಕೆ.ಎಂ.ಅಜಾದ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-20-1093211072

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.