ಸಿಂದಗಿ: ಸಾಹಿತಿ ಚನ್ನಪ್ಪ ಕಟ್ಟಿ ಸತತ ಅಧ್ಯಯನಶೀಲರು, ಮೌಲ್ಯಾಧಾರಿತ ಬದುಕು ಸಾಗಿಸಿದವರು, ಕೌಶಲಾಧಾರಿತ ಸಮರ್ಥ ಬೋಧನೆ ರೂಢಿಸಿಕೊಂಡವರು ಅಂತೆಯೇ ಸಮಾಜ ಅವರನ್ನು ಗೌರವಿಸುತ್ತದೆ. ಕಟ್ಟಿ ಮೌಲ್ಯಗಳ ಒಕ್ಕೂಟ ಎಂದರೆ ತಪ್ಪಾಗುವದಿಲ್ಲ. ಅವರು ಸಾಹಿತ್ಯ ಲೋಕದ ಅಜಾತಶತೃ ಆಗಿದ್ದಾರೆ ಎಂದು ಮಕ್ಕಳ ಸಾಹಿತಿ ಹ.ಮ.ಪೂಜಾರ ಹೇಳಿದರು.

ನಗರದ ಮಾಂಗಲ್ಯಭವನದಲ್ಲಿ ಶುಕ್ರವಾರ ಚನ್ನಪ್ಪ ಕಟ್ಟಿ ಅಭಿನಂದನ ಸಮಿತಿ ಹಮ್ಮಿಕೊಂಡಿದ್ದ ಚನ್ನಪ್ಪ ಕಟ್ಟಿ ಸಾಹಿತ್ಯ; ಮುಖಾಮುಖಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ವಿಚಾರಸಂಕಿರಣ: ವಿಮರ್ಶಕಿ ಎನ್.ಆರ್.ಲಲಿತಾಂಬಾ ಅವರು ಮಾತನಾಡಿ, ಕಟ್ಟಿಯವರ ಕಾವ್ಯಯಾನ ನಾಲ್ಕು ದಶಕಗಳಿಂದ ಮುಂದುವರೆದು ಆರು ಪರಿಪಕ್ವ ಕವನ ಸಂಕಲನಗಳು ಓದುಗರ ಕೈಯಲ್ಲಿವೆ. ಸಾಮಾಜಿಕ ಜಾಗೃತಿ ಅವರ ಕಾವ್ಯದಲ್ಲಿ ಎದ್ದು ಕಾಣುತ್ತದೆ ಎಂದರು.

ಚನ್ನಪ್ಪ ಕಟ್ಟಿಯವರು ಸಂಶೋಧನಾ ಕ್ಷೇತ್ರದಲ್ಲಿ ಅಪಾರ ಕಾರ್ಯ ಮಾಡಿದ್ದಾರೆ ಎಂದು ಹಂಪಿ ಕನ್ನಡ ವಿ.ವಿ. ಸಂಶೋಧಕ ಎಫ್.ಟಿ.ಹಳ್ಳಿಕೇರಿ ಹೇಳಿದರು.

ಅನುವಾದಕ ಎಸ್.ಗಂಗಾಧರಯ್ಯ ಮಾತನಾಡಿ, ಕಟ್ಟಿಯವರ ಅನುವಾದ ಸಾಹಿತ್ಯ ಮರುಸೃಷ್ಠಿಯಾಗಿವೆ ಎಂದು ಹೇಳಿದರು.

ಕತೆಗಾರ ಬಾಳಾಸಾಹೇಬ ಲೋಕಾಪುರ ಮಾತನಾಡಿ, ಚನ್ನಪ್ಪ ಕಟ್ಟಿಯವರು ಹದಕ್ಕಾಗಿ ಕಾಯುವವರು, ಸಾಹಿತ್ಯ ಲೋಕದಲ್ಲಿ ಯಾವುದೇ ಜಂಜಾಟದಲ್ಲಿ ಸಿಕ್ಕಿಕೊಂಡಿಲ್ಲ. ಅವರದು ದೇಶಿ ನೆಲೆಯ ಬರವಣಿಗೆಯಾಗಿದೆ ಎಂದು ಮಾತನಾಡಿದರು.

ವಿಜಯಪುರ ಚಾಣಕ್ಯ ಕರಿಯರ ಅಕಾಡೆಮಿ ಸಂಸ್ಥಾಪಕ ಎನ್.ಎಂ.ಬಿರಾದಾರ ಅತಿಥಿಗಳಾಗಿ ಇದ್ದರು. ದೇವೂ ಮಾಕೊಂಡ, ರವಿ ಗೋಲಾ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-26-688629615

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.