ಸಿಂದಗಿ: ಅಭಿನಂದನಾ ಗ್ರಂಥಗಳಿಗೆ ಘನತೆ, ಗೌರವವಿರಬೇಕು, ವಿದ್ವಾಂಸರ ಲೇಖನಗಳನ್ನು ಒಳಗೊಂಡು ಪರಾಮರ್ಶೆ ಕೃತಿಯಾಗಬೇಕು. ಅಂಥ ಸಾಲಿನಲ್ಲಿ ನೆಲೆ ಅಭಿನಂದನ ಗ್ರಂಥ ವಿಶೇಷತೆ ಪಡೆದಿದೆ. ಈ ಗ್ರಂಥ ಚನ್ನಪ್ಪ ಕಟ್ಟಿಯವರ ಅಸ್ಮಿತೆಯಾಗಿ ಕಂಡು ಬರುತ್ತದೆ. ಅವರ ಸಮಗ್ರ ಸಾಹಿತ್ಯ, ಬದುಕನ್ನು ಒಳಗೊಂಡಿದೆ ಎಂದು ಬೆಂಗಳೂರಿನ ಸಂಸ್ಕೃತಿ ಚಿಂತಕ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಪ್ರಶಂಸಿದರು.

ನಗರದ ಮಾಂಗಲ್ಯಭವನದಲ್ಲಿ ಶುಕ್ರವಾರ ಸಂಜೆ ಚನ್ನಪ್ಪ ಕಟ್ಟಿ ಅಭಿನಂದನಾ ಸಮಿತಿ ಹಮ್ಮಿಕೊಂಡಿದ್ದ ಅಭಿನಂದನ ಸಮಾರಂಭದಲ್ಲಿ ನೆಲೆ ಅಭಿನಂದನ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಚನ್ನಪ್ಪ ಕಟ್ಟಿ ಸಾಹಿತ್ಯಕ, ಸಾಂಸ್ಕೃತಿಕ ರಾಯಭಾರಿಗಳಾಗಿದ್ದಾರೆ. ಚನ್ನಪ್ಪ ಕಟ್ಟಿ ಬಳಗ ಸ್ಥಾಪಿಸಿದ ನೆಲೆ ಪ್ರಕಾಶನ ಉತ್ಕೃಷ್ಟ ಗ್ರಂಥಗಳನ್ನು ನಾಡಿಗೆ ಲೋಕಾರ್ಪಣೆ ಮಾಡಿದೆ ಎಂದು ತಿಳಿಸಿದರು.

ಸಾಂಸ್ಕೃತಿಕ ಗುಲಾಮಗಿರಿ ಮುಕ್ತವಾಗದೇ ದೇಶದ ಅಭಿವೃದ್ಧಿ ಅಸಾಧ್ಯ. ಹೀಗಾಗಿ ವ್ಯಕ್ತಿ ಮಾನಸಿಕ ಗುಲಾಮಗಿರಿಯಿಂದ ಬಿಡುಗಡೆಗೊಳ್ಳಬೇಕು ಎಂದರು.

ಮುಖ್ಯ ಅತಿಥಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಮಾತನಾಡಿ, ಸಾಹಿತ್ಯದ ಶಕ್ತಿ ಅಗಾಧವಾದುದು ಹೃದಯಶ್ರೀಮಂತಿಕೆ ಹೆಚ್ಚಿಸುತ್ತದೆ. ಸಿಂದಗಿ ನಗರ ಸಾಹಿತ್ಯ ಪ್ರೀತಿಗೆ ಮೇಲುಗೈ ಸಾಧಿಸಿದೆ. ಪ್ರತಿಯೊಬ್ಬ ವ್ಯಕ್ತಿ ಕರ್ತವ್ಯದಲ್ಲಿ ಶ್ರೇಷ್ಠತೆ ಮೆರೆಯಬೇಕು. ಶ್ರೇಷ್ಠ ಸಾಧನೆಯಿಂದ ದೇಶವನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯ. ಯುವ ಪೀಳಿಗೆ ನಿಮ್ಮ ರಂಗದಲ್ಲಿ ಶ್ರೇಷ್ಠತೆ ಮೆರೆಯುವ ಮೂಲಕ ಸುಂದರ ಸಮಾಜ ಕಟ್ಟಬೇಕು ಎಂದು ಹೇಳಿದರು.

ವಿಜಯಪುರ ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಎಂ.ಎಸ್.ಮಧಬಾವಿ ಅಭಿನಂದನಾ ನುಡಿ ಆಡಿದರು. ಅಭಿನಂದನ ಗ್ರಂಥದ ಗೌರವ ಸಂಪಾದಕ ಶ್ರೀರಾಮ ಇಟ್ಟಣ್ಣವರ, ಪ್ರಧಾನ ಸಂಪಾದಕ ಎಂ.ಎಂ.ಪಡಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ನೆಲೆ ಪ್ರಕಾಶನದ ಮೂರು ಕೃತಿಗಳು ಬಿಡುಗಡೆಗೊಂಡವು.

ಮಾಜಿ ಶಾಸಕ ರಮೇಶ ಭೂಸನೂರ, ವಿಧಾನಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ, ನಿವೃತ್ತ ಪ್ರಾಧ್ಯಾಪಕ ಅರವಿಂದ ಮನಗೂಳಿ ಅವರು ಚನ್ನಪ್ಪ ಕಟ್ಟಿ ಅವರನ್ನು ಗುಣಗಾನ ಮಾಡಿದರು.

ಚನ್ನಪ್ಪ ಕಟ್ಟಿ ದಂಪತಿಗೆ ಅಭಿಮಾನಿಗಳಿಂದ ಗೌರವ ಸನ್ಮಾನದ ಸುರಿಮಳೆಯೇ ಸುರಿದವು. ಚನ್ನಪ್ಪ ಕಟ್ಟಿ ಋಣ ಸಂಧಾಯದ ಮಾತುಗಳನ್ನಾಡಿ ಅಭಿಮಾನಿಗಳನ್ನು ಅಭಿನಂದಿಸಿದರು.

ಸಾರಂಗಮಠದ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಸರೂರ, ಆಗತೀರ್ಥ ಹಾಲುಮತ ಗುರುಪೀಠದ ರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿ ಸಮ್ಮುಖ ವಹಿಸಿ ಆಶೀರ್ವಚನ ನೀಡಿದರು. ಚಿದಂಬರ ಬಂಡಗಾರ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-26-1362563606

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.