ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Asian Games | ಈಕ್ವೆಸ್ಟ್ರಿಯನ್: ಫೈನಲ್‌ಗೆ ವಿಪುಲ್

Published 27 ಸೆಪ್ಟೆಂಬರ್ 2023, 14:46 IST
Last Updated 27 ಸೆಪ್ಟೆಂಬರ್ 2023, 14:46 IST
ಅಕ್ಷರ ಗಾತ್ರ

ಹಾಂಗ್‌ಝೌ: ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತದ ಈಕ್ವೆಸ್ಟ್ರಿಯನ್‌ ಸ್ಪರ್ಧಿಗಳ ಉತ್ತಮ ಪ್ರದರ್ಶನ ಮುಂದುವರಿದಿದ್ದು ವಿಪುಲ್‌ ಹೃದಯ್, ಅನುಷ್‌ ಅಗರವಾಲ್‌ ಮತ್ತು ದಿವ್ಯಕೃತಿ ಸಿಂಗ್‌ ಅವರು ಡೆಸಾಜ್‌ ವೈಯಕ್ತಿಕ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ.

ಬುಧವಾರ ನಡೆದ ಅರ್ಹತಾ ಸುತ್ತಿನಲ್ಲಿ ವಿಪುಲ್‌ 73.883 ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನ ಪಡೆದು ಪದಕ ಸುತ್ತು ತಲುಪಿದರು. ಅನುಷ್‌ (71.706) ಮತ್ತು ದಿವ್ಯಕೃತಿ (67.676) ಅವರು ಕ್ರಮವಾಗಿ ನಾಲ್ಕು ಹಾಗೂ 11ನೇ ಸ್ಥಾನ ಪಡೆದು ಫೈನಲ್‌ಗೆ ಅರ್ಹತೆ ಗಳಿಸಿದರು.

ಸುದೀಪ್ತಿ ಹಜೇಲಾ ಅರ್ಹತಾ ಸುತ್ತಿನಲ್ಲೇ ಎಡವಿದರು. ಅಗ್ರ 15 ಸ್ಥಾನಗಳನ್ನು ‍ಪಡೆದ ಸ್ಪರ್ಧಿಗಳು ಗುರುವಾರ ನಡೆಯುವ ಫೈನಲ್‌ನಲ್ಲಿ ಸ್ಥಾನ ಪಡೆದರು.

ಹೃದಯ್‌, ಅನುಷ್‌, ದಿವ್ಯಕೃತಿ ಮತ್ತು ಸುದೀಪ್ತಿ ಅವರು ಮಂಗಳವಾರ ನಡೆದ ಡ್ರೆಸಾಜ್‌ ತಂಡ ವಿಭಾಗದಲ್ಲಿ ಚಿನ್ನ ಗೆದ್ದು ಚಾರಿತ್ರಿಕ ಸಾಧನೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT