ಬೇಸಿಗೆಯ ರಜೆಯೆಂದರೆ ಅಜ್ಜನ ಮನೆ ಎಂಬ ಕಾಲವೊಂದಿತ್ತು ಎನ್ನುವುದರಿಂದಲೇ ಈಗ ಕತೆಗಳು ಆರಂಭವಾಗುತ್ತವೆ. ವಿಘಟಿತ ಕುಟುಂಬದ ಮಕ್ಕಳಿಗೆ ಅಜ್ಜನ ಮನೆಯ ವಾಸ, ರಜಾ ಮಜಾ ಎಲ್ಲವೂ ದೊರೆಯುವುದು ಈ ಕಾಲದಲ್ಲಿ ತುಸು ಕಠಿಣವಾಗಿದೆ. ಇದನ್ನು ಸರಳಗೊಳಿಸಲು, ಕುಟುಂಬದವರೆಲ್ಲ ಒಟ್ಟುಗೂಡಿ ಒಂದಷ್ಟು ಸಮಯ ಕಳೆಯಲು ಅನುಕೂಲವಾಗುವಂಥ ನಾಲ್ಕು ಮಕ್ಕಳ ಪುಸ್ತಕಗಳು ಪ್ರೇಮ ಮತ್ತು ಶ್ರುತಿ ಪ್ರಕಾಶನದಿಂದ ಪ್ರಕಟವಾಗಿವೆ.

ಮಕ್ಕಳ ಸಾಹಿತ್ಯದಲ್ಲಿ ಕೃಷಿ ಮಾಡುತ್ತಿರುವ ಮತ್ತೂರು ಸುಬ್ಬಣ್ಣ ಅವರಿಗೂ ಈ ಹಳಹಳಿಕೆ ಇದೆ. ಆದರೆ ಹೇಳಬೇಕಿರುವುದನ್ನೆಲ್ಲ ಕತೆಯ ಮೂಲಕವೇ ಹೇಳುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಈ ಕಾಲದ ಮಕ್ಕಳು ತೋರುಬೆರಳಿನಿಂದ ಮೊಬೈಲ್ ಫೋನನ್ನು ಸ್ಕ್ರೋಲ್ ಮಾಡುವುದರಲ್ಲಿಯೇ ನಿರತರಾಗಿರುವಾಗ ಅವರನ್ನು ಕಲ್ಪನಾ ಲೋಕಕ್ಕೆ ಕರೆದೊಯ್ಯಲು ಇವರ ‘ನಾನೂ ವಿಜ್ಞಾನಿಯಾಗುವೆ’ ಪುಸ್ತಕ ಸಹಕಾರಿಯಾಗಿದೆ. ವಿಜ್ಞಾನದ ಸರಳ ಪ್ರಯೋಗಗಳನ್ನು ಮಕ್ಕಳಿಗೆ ಅರ್ಥವಾಗುವಂತೆ ವಿವರಿಸುತ್ತಲೇ ಪಾಠ ಎನಿಸದಂತೆ ಕತೆ ಹೆಣೆದಿದ್ದಾರೆ. ವೈಜ್ಞಾನಿಕ ಹಿನ್ನೆಲೆಯ ಈ ಕತೆಗಳು ಮಕ್ಕಳ ಕುತೂಲಹ ತಣಿಸುವುದರೊಂದಿಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬ ಆತ್ಮವಿಶ್ವಾಸವನ್ನು ನೀಡುತ್ತದೆ. ಮಕ್ಕಳಲ್ಲಿ ಕುತೂಹಲ ಕೆದರಿಸುವಂಥ ಕತೆಗಳೂ ಇದರಲ್ಲಿವೆ.

ಅಜ್ಜ ಅಜ್ಜಿಯರೊಂದಿಗೆ ಇರಬಹುದಾದ ಬಾಂಧವ್ಯವನ್ನೇ ಚಿತ್ರಿಸುವ ‘ಡೀಲ್ ಅಂದ್ರೆ ಡೀಲ್’ ಪುಸ್ತಕದಲ್ಲಿ ಅಜ್ಜ ಅಜ್ಜಿ ಹಾಗೂ ಮೊಮ್ಮಕ್ಕಳ ನಡುವಿನ ಬಾಂಧವ್ಯ ನಗರದ ಜೀವನದಲ್ಲಿ ಛಿದ್ರವಾಗಿರುವುದು ಅರಿವಿಗೆ ತರುತ್ತದೆ. ಮಕ್ಕಳಲ್ಲಿ ಅಜ್ಜ ಅಜ್ಜಿಯರ ಬಗೆಗೆ ಪ್ರೀತಿ ಬೆಳೆಯುವಂತೆಯೂ ಮಾಡುತ್ತದೆ. ಅಜ್ಜನ ಮನೆಯೆಂಬುದು ಪೆಂಡೋರಾ ಬಾಕ್ಸ್ ಇದ್ದಂತೆ. ಪ್ರತಿಸಲವೂ ಸೋಜಿಗವೊಂದನ್ನು ನಿರೂಪಿಸುವಂಥ ಕತೆಗಳು ಇದರಲ್ಲಿವೆ.

ಸಮಕಾಲೀನ ಸಾಮಾಜಿಕ ವ್ಯವಸ್ಥೆಯನ್ನು ವಿವರಿಸುವಂಥ ಕತೆಗಳಿರುವ ಸಂಕಲನ ‘ಮೇಡ್ ಇನ್ ಚೈನಾ ಮತ್ತು ಇತರ ಮಕ್ಕಳ ಕತೆಗಳು’. ‘ಮಕ್ಕಳೇ ಕೇಳಿಸಿಕೊಳ್ಳಿ’ ಎಂಬ ಪುಸ್ತಕದಲ್ಲಿ ಬದುಕನ್ನು ಸ್ವೀಕರಿಸುವ, ಹಿರಿಯರನ್ನು ಆದರಿಸುವಂತೆ ತಿಳಿಹೇಳುವ ಮಾತುಗಳಿವೆ. ಒಂಟಿ ದಾರದೆಳೆಯ ಮೇಲೆ ನಾಜೂಕಾಗಿ ತೂಗಾಡುತ್ತಿರುವ ಬಾಂಧವ್ಯಗಳಿಗೆ ಅಂಟು ಹಾಕಿ ಕೂರಿಸುವ ಕೆಲಸವನ್ನು ಈ ಪುಸ್ತಕಗಳು ಮಾಡುತ್ತವೆ. ಮಕ್ಕಳೊಂದಿಗೆ ಹಿರಿಯರೂ ಓದಿದಾಗ. ಮಲಗುವ ಮುನ್ನ, ಮಕ್ಕಳಿಗೆ ಕತೆ ಓದಿ ಹೇಳಲು, ಮಧ್ಯಾಹ್ನದ ಬಿಸಿಲಿನ ಬೇಗೆ ತಪ್ಪಿಸಲು ಓದಲು ಹೇಳಲು ಈ ಪುಸ್ತಕಗಳ ಸಂಗ್ರಹ ಸಹಕಾರಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.