ಕನ್ನಡದ ಪ್ರಮುಖ ಜಾನಪದ ವಿದ್ವಾಂಸರಲ್ಲಿ ಒಬ್ಬರಾದ ಟಿ. ಗೋವಿಂದರಾಜು ಅವರ ಅಧ್ಯಯನ ಕ್ಷೇತ್ರ ವಿಶಾಲವೂ ವೈವಿಧ್ಯಮಯವೂ ಆಗಿದೆ. ಒಂದು ಅಗ್ರಹಾರದ ಅಧ್ಯಯನದಿಂದ ಹಿಡಿದು ಗೊಂಬೆ ಆಟಗಳು, ಜಾನಪದ ಚಿತ್ರಕಲೆ, ಪ್ರಾಚೀನ ಶಿಲ್ಪಗಳಲ್ಲಿ ಕಾಣಿಸಿಕೊಳ್ಳುವ ಜಾನಪದ ಅಂಶಗಳು, ನಗರ ಜಾನಪದ–ಹೀಗೆ ಅನೇಕ ಆಯಾಮಗಳ ಕಡೆಗೆ ಗಮನ ಹರಿಸಿ ಅವರು ಗಂಭೀರವಾದ ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ.

ಜಾನಪದ ತಜ್ಞರಾಗಿ ಮಾತ್ರವಲ್ಲದೆ ಸೃಜನಶೀಲ ಲೇಖಕರಾಗಿಯೂ ತಮ್ಮದೇ ಛಾಪು ಮೂಡಿಸಿರುವ ಗೋವಿಂದರಾಜು ಅವರು ಕರ್ನಾಟಕದ ಜಾನಪದ ಅಧ್ಯಯನದಲ್ಲಿ ಮಾರ್ಗಾನುಸಾರಿಯೂ ಮಾರ್ಗಪ್ರವರ್ತಕರೂ ಆಗಿದ್ದಾರೆ. ಇಂತಹ ಮಹತ್ವದ ಲೇಖಕರ ಕೃತಿಗಳ ಪರಿಶೀಲನಾ ಕಾರ್ಯವನ್ನು ಎಸ್.ಪಿ. ಪದ್ಮಪ್ರಸಾದ್ ಅವರು ‘ಜಾನಪದ ಬೆಳಕಿಂಡಿ’ ಗ್ರಂಥದ ಮೂಲಕ ಜಾನಪದಾಸಕ್ತರ ಮುಂದಿಟ್ಟಿದ್ದಾರೆ.

ಈ ಕೃತಿಯನ್ನು ಮೂರು ಭಾಗಗಳಾಗಿ ವಿನ್ಯಾಸಗೊಳಿಸಲಾಗಿದೆ. ಮೊದಲ ಭಾಗದಲ್ಲಿ ಗೋವಿಂದರಾಜು ಅವರ ಕೃತಿಗಳ ಕುರಿತು ವಿವಿಧ ತಜ್ಞರು ಬರೆದ ವಿಮರ್ಶಾ ಲೇಖನಗಳಿವೆ. ಎರಡನೇ ಭಾಗದಲ್ಲಿ ಅವರ ಕೃತಿಗಳ ಬಗ್ಗೆ ಪ್ರಾಜ್ಞರು ವ್ಯಕ್ತಪಡಿಸಿದ್ದ ಅಭಿಪ್ರಾಯಗಳು, ಪ್ರತಿಕ್ರಿಯೆಗಳು, ಮುನ್ನುಡಿಗಳು, ಬೆನ್ನುಡಿಗಳು ಹಾಗೂ ಲೇಖಕರೇ ತಮ್ಮ ಕೃತಿಗಳಿಗೆ ಬರೆದ ಮಾತುಗಳನ್ನು ಸಂಕಲಿಸಲಾಗಿದೆ. ಮೂರನೇ ಭಾಗದಲ್ಲಿ ಗೋವಿಂದರಾಜು ಅವರ ಸೃಜನಶೀಲ ಸಾಹಿತ್ಯದ ಕುರಿತ ಲೇಖನಗಳಿಗೆ ಸ್ಥಾನ ಕಲ್ಪಿಸಲಾಗಿದೆ.

ತಮ್ಮ ಸುತ್ತಮುತ್ತಲಿನ ಜಾನಪದ ಮತ್ತು ಸಾಂಸ್ಕೃತಿಕ ಪರಿಸರದ ಅಂತರಂಗವನ್ನು ಅರಿಯುವ ನಿರಂತರ ಕುತೂಹಲದಿಂದ ಕಳೆದ ನಾಲ್ಕೈದು ದಶಕಗಳಿಂದ ಅಪಾರ ಶ್ರಮ ಮತ್ತು ಆಸಕ್ತಿಯಿಂದ ಅಧ್ಯಯನ ನಡೆಸಿರುವ ಗೋವಿಂದರಾಜು ಅವರ ಕಾರ್ಯಕ್ಷೇತ್ರವನ್ನು ಹಲವಾರು ತಜ್ಞರು ಇಲ್ಲಿ ವಿಶ್ಲೇಷಿಸಿದ್ದಾರೆ. ಜಾನಪದ ಕ್ಷೇತ್ರದಲ್ಲಿ ಅಧ್ಯಯನ ಮತ್ತು ಸಂಶೋಧನೆಯಲ್ಲಿ ತೊಡಗಿರುವವರಿಗೆ ಈ ಕೃತಿ ಉಪಯುಕ್ತವಾದ ಮಾರ್ಗದರ್ಶಕ ಗ್ರಂಥವಾಗುತ್ತದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-51-2106229400

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.