ಬ್ರಹ್ಮಾವರ: ಭಾಷೆ ಮತ್ತು ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳು. ಇವೆರಡು ಒಂದಕ್ಕೊಂದು ಪೂರಕವಾಗಿವೆ ಎಂದು ನಿವೃತ್ತ ಉಪನ್ಯಾಸಕಿ ಪಾರ್ವತಿ ಜಿ. ಐತಾಳ್ ಹೇಳಿದರು.

ಮಿತ್ರಮಂಡಳಿ ಕೋಟ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಸಾಲಿಗ್ರಾಮದ ಚಿತ್ರಪಾಡಿಯ ಮಾರಿಗುಡಿ ಸಮೀಪದಲ್ಲಿ ನಡೆದ ನಂನಮ್ಮೊಳಗೆ ಸಾಹಿತ್ಯಾವಲೋಕನ ಕಾರ್ಯಕ್ರಮದಲ್ಲಿ ಗಿಳಿಯಾರು ಶ್ರೀನಿವಾಸ ಅಡಿಗ ಅವರ ‘ಜೊಡ್ಕೊನಿ ಮ್ಯಾಲೆ ಗಿಣಿರಾಮ’, ಕಾರಬೈಲು ಸೂರ್ಯನಾರಾಯಣ ಅವರ ‘ಜೀವನಯಾನದ ಹೊಂಬೆಳಕು’ ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕುಂದಾಪುರದ ಜನರು ಆತ್ಮೀಯವಾಗಿ ಮಾತನಾಡುವವರು. ಅಪರಿಚಿತರು ಅಥವಾ ಪರಿಚಿತರನ್ನು ಕರೆಯಲು ಬಳಸುವ ‘ಹ್ವಾಯ್’ ಪದದಲ್ಲೇ ಆತ್ಮೀಯತೆ ಇದೆ. ಕುಂದಾಪುರದ ಭಾಷೆಯೇ ಆತ್ಮೀಯತೆಯನ್ನು ಹೆಚ್ಚಿಸುತ್ತದೆ. ಇದು ಭಾಷೆಯ ಮೂಲಕ ತಿಳಿಯುತ್ತದೆ ಎಂದು ಹೇಳಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಪುಸ್ತಕಗಳು ಮನುಷ್ಯನ ಜ್ಞಾನದ ಪಂಚಾಂಗ. ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎನ್ನುವ ನಾಣ್ನುಡಿಯಂತೆ ಪುಸ್ತಕವನ್ನು ಓದುವುದರಿಂದ ಜ್ಞಾನದ ಹರಿವು ಮಿದುಳಿಗೆ ಮೇವನ್ನು ನೀಡುತ್ತದೆ ಎಂದರು. ಕೃತಿಗಳ ಲೇಖಕರು, ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-28-195218713

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.