ಉಡುಪಿ: ‘ವಿಮರ್ಶೆ ಅನ್ನುವುದು ದೊಡ್ಡ ಸಾಂಸ್ಕೃತಿಕ ಜವಾಬ್ದಾರಿ. ನೋಡುವುದು, ತೋರುವುದು, ಕಾಣುವುದು ಬೇರೆ ಬೇರೆ ಇರುತ್ತದೆ ಅದುವೇ ಕಾಣ್ಕೆ. ನೋಟ ಕ್ರಮಗಳನ್ನು ಸೃಷ್ಟಿಸುವುದು ವಿಮರ್ಶೆಯ ಕೆಲಸ’ ಎಂದು ತುಮಕೂರು ವಿಶ್ವವಿದ್ಯಾಲಯದ ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಸಹಪ್ರಾಧ್ಯಾಪಕಿ ಗೀತಾ ವಸಂತ ಅಭಿಪ್ರಾಯಪಟ್ಟರು.

ನಗರದ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮುದ್ದಣ ಸಾಹಿತ್ಯೋತ್ಸವದಲ್ಲಿ ತಮ್ಮ ‘ತೆರೆದಷ್ಟು ಅರಿವು ಸಾಹಿತ್ಯಕ ಒಳನೋಟಗಳು’ ಕೃತಿಗೆ ಕೊಡಮಾಡಿದ ವಿ.ಎಂ. ಇನಾಂದಾರ್ ವಿಮರ್ಶಾ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ಸಾಹಿತ್ಯ ಪರಂಪರೆಯ ಘನತೆಯನ್ನು, ಸೃಜನಶೀಲತೆಯ ವಿರಾಟ್ ಸ್ವರೂಪವನ್ನು ಮನದಲ್ಲಿಟ್ಟುಕೊಂಡು ವಿಮರ್ಶೆ ನಡೆಸಬೇಕಾಗುತ್ತದೆ. ಸಾಂಸ್ಕೃತಿಕ ಸತ್ವದ ಒಳಹರಿವನ್ನು ಕಂಡುಹಿಡಿಯುವ ಕಣ್ಣು ವಿಮರ್ಶಕನಿಗೆ ಇರಬೇಕು’ ಎಂದು ಅವರು ಹೇಳಿದರು.

‘ಇಂದು ಕೂಡ ವಿನೂತನ ಮಾದರಿಯಲ್ಲಿ ವಿಮರ್ಶೆ ನಡೆಯುತ್ತಿದೆ. ವಿಮರ್ಶೆ ಸಂಶೋಧನೆ, ಕಲೆ, ತತ್ವಶಾಸ್ತ್ರವನ್ನು ಒಳಗೊಂಡಿರುತ್ತದೆ’ ಎಂದರು.

ಡಾ.ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಗಣನಾಥ ಎಕ್ಕಾರು ಮಾತನಾಡಿ, ‘ಸಾಮಾನ್ಯ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವುದೇ ಮಾನವ ಸಂಪನ್ಮೂಲ. ಅದರ ಅಭಿವೃದ್ಧಿಯಲ್ಲಿ ಸಾಹಿತ್ಯದ ಪಾತ್ರ ಹಿರಿದು. ಜ್ಞಾನ, ಕೌಶಲ, ಮೌಲ್ಯವನ್ನು ಸಾಹಿತ್ಯ ಒಳಗೊಂಡಿರುತ್ತದೆ. ಆ ಮೂಲಕ ವ್ಯಕ್ತಿತ್ವವನ್ನು ರೂಪಿಸಲು ಅದು ಸಹಕಾರಿಯಾಗಿದೆ’ ಎಂದು ಹೇಳಿದರು.

‘ಕಲ್ಪನಾಂಶ, ಭಾವಾಂಶ, ರೂಪಾಂಶ, ಬೌದ್ಧಿಕಾಂಶಗಳು ಸಾಹಿತ್ಯದ ನಾಲ್ಕು ಅಂಶಗಳು . ಮುದ್ದಣನ ಸಾಹಿತ್ಯದಲ್ಲಿ ಅವುಗಳನ್ನು ಕಾಣಬಹುದು. ಆಧುನಿಕ ಸಾಹಿತ್ಯ ಪ್ರವೇಶವಾದ ಕುರುಹನ್ನು ಮುದ್ದಣನ ಸಾಹಿತ್ಯದಲ್ಲಿ ನೋಡಬಹುದು’ ಎಂದರು.

‘ವಿಮರ್ಶಕ ದೃಷ್ಟಿಯಿಂದ, ಸಂವಾದದ ದೃಷ್ಟಿಯಿಂದ ಮುದ್ದಣನು ತನ್ನ ‘ರಾಮಾಶ್ವಮೇಧ’ ಕೃತಿಯನ್ನು ರಚಿಸಿದ್ದಾನೆ. ಆತನ ಕಾವ್ಯದ ಶೈಲಿ, ವೈಶಿಷ್ಟ್ಯಗಳು ಮುಂದಿನ ಕವಿಗಳಿಗೆ ಹೊಸ ಪ್ರಕಾರ ಸೃಷ್ಟಿಸಲು ಪ್ರೇರಣೆಯಾಯಿತು’ ಎಂದು ತಿಳಿಸಿದರು.

‘ಆಧುನಿಕ ಸಾಹಿತ್ಯವು ಪ್ರಜಾಪ್ರಭುತ್ವದ ಚಿಂತನಾ ಕ್ರಮದಿಂದ ಪ್ರಶ್ನಿಸುವ ಮನೋಭಾವವನ್ನು ಹುಟ್ಟುಹಾಕಿದೆ. ಮುದ್ದಣನ ಕಾವ್ಯದಲ್ಲಿ ಪ್ರಶ್ನಿಸುವ ಮನೋಭಾವವಿದೆ’ ಎಂದೂ ಹೇಳಿದರು.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಬಿ. ಜಗದೀಶ ಶೆಟ್ಟಿ ಕೃತಿ ವಿಶ್ಲೇಷಣೆ ಮಾಡಿದರು. ಎಂಜಿಎಂ ಕಾಲೇಜು ಪ್ರಾಂಶುಪಾಲೆ ವನಿತಾ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ವಿಶ್ವನಾಥ ಪೈ ಎಂ., ಸಂಧ್ಯಾ ಕಾಲೇಜು ಪ್ರಾಂಶುಪಾಲ ದೇವಿದಾಸ ನಾಯಕ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಮಾಲತಿ ದೇವಿ ಎ. ಉಪಸ್ಥಿತರಿದ್ದರು.

ಕನ್ನಡ ವಿಭಾಗದ ಮುಖ್ಯಸ್ಥ ಪುತ್ತಿ ವಸಂತ ಕುಮಾರ್ ಸ್ವಾಗತಿಸಿದರು. ಉಪನ್ಯಾಸಕಿ ಅಂಬಿಕಾ ಕಾರ್ಯಕ್ರಮ ನಿರೂಪಿಸಿದರು. ಶ್ರೀಧರ ವಂದಿಸಿದರು. ತ್ರಿವೇಣಿ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಗೀತಾ ವಸಂತ ಅವರಿಗೆ ವಿ.ಎಂ. ಇನಾಂದಾರ್ ವಿಮರ್ಶಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-28-917410117

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.