ತುಳುನಾಡಿನ ದೈವಾರಾಧನಾ ಪರಂಪರೆಯಲ್ಲಿ ‘ಪಾಡ್ದನ’ಗಳು ಕೇವಲ ಮೌಖಿಕ ಕಥನಗಳಲ್ಲ; ಅವು ಸಮುದಾಯದ ನಂಬಿಕೆ, ಆಚರಣೆ, ಕಲಾಸೌಂದರ್ಯ ಮತ್ತು ಧಾರ್ಮಿಕ ರಂಗಭೂಮಿಯ ಜೀವಂತ ದಾಖಲೆಗಳು. ದೈವಗಳ ಹುಟ್ಟು, ಶಕ್ತಿ ಮತ್ತು ಆರಾಧನೆಯ ಅಗತ್ಯವನ್ನು ವಿವರಿಸುವ ಈ ಮೌಖಿಕ ಆಕರಗಳು ತುಳುವ ಜನಪದ ಸಾಹಿತ್ಯದ ಮಹತ್ವದ ಭಾಗವಾಗಿವೆ. ಇದೇ ಪರಂಪರೆಯೊಳಗೆ ಸುಳ್ಯ ಭಾಗದಲ್ಲಿ ಪ್ರಸಿದ್ಧವಾಗಿರುವ ‘ಉಲ್ಲಾಕುಳು’ ಪರಿಕಲ್ಪನೆ ವಿಶಿಷ್ಟ ಸ್ಥಾನ ಪಡೆದಿದೆ. ಅವಳಿ ವೀರರ ಆರಾಧನೆಯ ರೂಪವಾದ ಉಲ್ಲಾಕುಳು, ಇತರ ದೈವ ಸಂಪ್ರದಾಯಗಳಿಂದ ಹೇಗೆ ಭಿನ್ನವಾಗಿದೆ ಎಂಬುದನ್ನು ಲೇಖಕ ಪೂವಪ್ಪ ತಮ್ಮ ಸಂಶೋಧನೆಯಲ್ಲಿ ತಾತ್ವಿಕ ನೆಲೆಯಲ್ಲಿ ವಿಶ್ಲೇಷಿಸಿದ್ದಾರೆ.

‘ಉಲ್ಲಾಕುಳು’ ಕುರಿತ ಅಧ್ಯಯನವನ್ನು ಅವರು ಎಂಟು ಅಧ್ಯಾಯಗಳಲ್ಲಿ ವಿನ್ಯಾಸಗೊಳಿಸಿದ್ದು, ದೈವಾರಾಧನೆಯ ಸ್ಥಾನಮಾನದಿಂದ ಹಿಡಿದು ಅದರ ಐತಿಹಾಸಿಕತೆ, ಆರಾಧನಾ ವಿಧಿವಿಧಾನಗಳು, ಸಮುದಾಯದ ಸಂಬಂಧ ಮತ್ತು ತುಳುವ ಸಂಸ್ಕೃತಿಯೊಂದಿಗಿನ ಬಾಂಧವ್ಯವರೆಗೆ ಹಲವು ಆಯಾಮಗಳನ್ನು ತೆರೆದಿಡುತ್ತಾರೆ. ಹಿರಿಯರು ಮತ್ತು ವೀರರ ಆರಾಧನೆಯೇ ದೈವ ಜಗತ್ತಿನ ಮೂಲ ಬೇರು ಎಂಬುದನ್ನು ಅವರು ಒತ್ತಿ ಹೇಳುತ್ತಾರೆ. ಪ್ರಕೃತಿಯ ಭೀತಿ, ಭೌಗೋಳಿಕ ಪರಿಸ್ಥಿತಿ ಮತ್ತು ಪಿತೃ ಆರಾಧನೆಯ ಮನೋಭಾವ ದೈವ ಸಂಪ್ರದಾಯಗಳ ಹುಟ್ಟಿಗೆ ಕಾರಣವಾಗಿದೆ ಎಂಬ ವಾದವನ್ನು ಲೇಖಕರು ಮಂಡಿಸುತ್ತಾರೆ.

ಈ ಅಧ್ಯಯನದಲ್ಲಿ ಕೋಟಿ–ಚೆನ್ನಯರಂತಹ ವೀರ ದೈವಗಳ ಪ್ರಸ್ತಾಪ ವಿಶೇಷ ಗಮನ ಸೆಳೆಯುತ್ತದೆ. ಅವರ ಪಾಡ್ದನಗಳು ಸಾಹಿತ್ಯ ಮತ್ತು ದೃಶ್ಯಮಾಧ್ಯಮಗಳಲ್ಲಿ ಮರುಸೃಷ್ಟಿಯಾಗಿರುವ ರೀತಿಯನ್ನು ಲೇಖಕರು ಉಲ್ಲೇಖಿಸಿದ್ದಾರೆ. ಇಂತಹ ಸಾಂಸ್ಕೃತಿಕ ವೀರರ ಮೌಖಿಕ ಪರಂಪರೆ ಬೇರೆ ಯಾವುದೇ ದೈವ ಸಂಸ್ಕೃತಿಯಲ್ಲಿ ಇಷ್ಟು ವ್ಯಾಪಕವಾಗಿ ಮರುರೂಪ ಪಡೆದಿಲ್ಲ ಎನ್ನುವ ಅಭಿಪ್ರಾಯವನ್ನೂ ಅವರು ದಾಖಲಿಸುತ್ತಾರೆ. ವಂಶ, ಜಾತಿ, ಅರಸು ನೆಲೆ ಹಾಗೂ ಇತರ ದೈವ ಸಂಪ್ರದಾಯಗಳೊಂದಿಗೆ ಉಲ್ಲಾಕುಳಿನ ಸಾಮ್ಯತೆ–ವೈಶಿಷ್ಟ್ಯಗಳನ್ನು ಗುರುತಿಸುವ ಮೂಲಕ ಈ ಕೃತಿ ತುಳುವ ದೈವಾರಾಧನಾ ಸಂಸ್ಕೃತಿಯ ಒಳಹೊರೆಯನ್ನು ಅರ್ಥಮಾಡಿಕೊಳ್ಳಲು ಮಹತ್ವದ ಅಧ್ಯಯನವಾಗಿ ಮೂಡಿಬಂದಿದೆ.

ಉಲ್ಲಾಕುಳು ಆರಾಧನೆ ಅನನ್ಯತೆ

ಲೇ: ಪೂವಪ್ಪ ಕಣಿಯೂರು

ಪ್ರ: ತರಂಗಿಣಿ

ಮೊ: 9448984485

ಪು: 548 ₹: 800

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.