ವಿಟ್ಲ: ವಿಚಾರಗಳನ್ನು ಪ್ರಚೋದಿಸಿ ಮನಸ್ಸನ್ನು ಅರಳಿಸಲು ಸಾಹಿತ್ಯ ನೆರವಾಗುತ್ತದೆ. ಆ ಮೂಲಕ ವ್ಯಕ್ತಿತ್ವವನ್ನು ಸುಸಂಸ್ಕೃತಗೊಳಿಸುತ್ತದೆ ಎಂದು ಅಂಕಣಕಾರ ಪ್ರೊ ವಿ.ಬಿ ಅರ್ತಿಕಜೆ ಅಭಿಪ್ರಾಯಪಟ್ಟರು.

ಕವಯಿತ್ರಿ ವೆಂಕಟೇಶ್ವರಿ ಕೃಷ್ಣಭಟ್ ಪುದುಕೋಳಿ ರಚಿಸಿದ ಭಕ್ತಿಗೀತೆಗಳ ಸಂಕಲನ 'ಭಕ್ತಿಕುಸುಮಾಂಜಲಿ'ಯನ್ನು ಇಲ್ಲಿಗೆ ಸಮೀಪದ ಮಂಗಲಪದವಿನಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ಬಿಡುಗಡೆಗೊಳಿಸಿ ಅವರು ಮಾತಾಡಿದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ವಸಂತಕುಮಾರ ಪೆರ್ಲ ಮಾತನಾಡಿ ಕನ್ನಡದಲ್ಲಿ ಭಕ್ತಿ ಸಾಹಿತ್ಯಕ್ಕೆ ದೊಡ್ಡ ಪರಂಪರೆ ಇದ್ದು ಭಾಜನಾ ತಂಡಗಳಿಗೆ ಮತ್ತು ನೃತ್ಯ ಭಜನೆ ಮಾಡುವವರಿಗೆ ಬಗೆಬಗೆಯ ಭಕ್ತಿಗೀತೆಗಳ ಅಗತ್ಯವಿದೆ ಎಂದರು.

ನಿವೃತ್ತ ಅಧ್ಯಾಪಕ ಜಿ.ಪಿ ವೆಂಕಟರಾವ್ ವಾದ್ಯಕೋಡಿ, ಕೃಷ್ಣಭಟ್ ಪುದುಕೋಳಿ ಮತ್ತು ರಾಮಚಂದ್ರ ಭಟ್ ಮಂಗಲಪದವು ಪಾಲ್ಗೊಂಡಿದ್ದರು. ಅಶ್ವಿನಿ ಭರತ್ ಕೋಡ್ಲ ಪುಸ್ತಕದಿಂದ ಆಯ್ದ ಗೀತೆಗಳನ್ನು ಹಾಡಿದರು. ಸೀಮಾ ಗಣೇಶಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮೃದ್ಧಿ ಎಸ್. ಭಟ್ ಮತ್ತು ಶ್ರೀಸ್ಮೃತಿ ಎಲ್.ಪಿ ಪ್ರಾರ್ಥನೆ ಹಾಡಿದರು. ಅಧ್ಯಾಪಕ ಶಿವಕುಮಾರ್ ನಿರೂಪಿಸಿದರು. ಲಕ್ಷ್ಮೀಶ ಪುದುಕೋಳಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-29-345467852

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.