ಅಂಕೋಲಾ: ‘ಇಂದಿನ ದಿನಗಳಲ್ಲಿ ಕ್ಷಯಿಸುತ್ತಿರುವ ಕಲಾವಿದರ ಸಂಖ್ಯೆಯ ವೃದ್ಧಿಗಾಗಿ ಮತ್ತು ನಾವು ಉಸಿರಾಡುವ ಯಕ್ಷಗಾನ ಕಲೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಇದೊಂದು ಮಹತ್ತರ ಹೆಜ್ಜೆಯಾಗಿದೆ. ಕಲಿಕಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಹಾಗೂ ಪೋಷಕರು ಇದನ್ನು ಪ್ರೋತ್ಸಾಹಿಸುವ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾಗಬೇಕು’ ಎಂದು ನಿವೃತ್ತ ಉಪನ್ಯಾಸಕ ಬೊಮ್ಮಯ್ಯ ಗಾಂವಕರ ಹಿತ್ತಲಮಕ್ಕಿ ಹೇಳಿದರು.

ತಾಲ್ಲೂಕಿನ ವಾಸರಕುದ್ರಿಗೆ ಗ್ರಾಮದಲ್ಲಿ ಈಶ್ವರ ದೇವಸ್ಥಾನದ ಆವರಣದಲ್ಲಿ ಸ್ಥಳೀಯ ಶಿವಸಂಸ್ಕೃತಿಕ ಬಳಗ ಹಾಗೂ ಪ್ರದೀಪ್ ನಾಯಕ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಯಕ್ಷಗಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ರಾಮಚಂದ್ರ ಗಾಂವಕರ ಮಾತನಾಡಿ, ‘ಅತ್ಯಂತ ಮಹತ್ತರವಾದ ಈ ಶಿಬಿರ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದು ನಮ್ಮೆಲ್ಲರ ಹೊಣೆ. ಈ ಕಾರ್ಯಕ್ರಮಕ್ಕೆ ಅಗತ್ಯ ಇರುವ ಎಲ್ಲಾ ಸಹಕಾರವನ್ನು ನಾವು ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.

ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ಶಾಂತರಾಮ ನಾಯಕ ಮಾತನಾಡಿ, ‘ಯಕ್ಷಗಾನ ಕಲೆಯಲ್ಲಿ ಪೌರಾಣಿಕ ಕಥಾನಕಗಳನ್ನು ಆಡಿತೋರಿಸುವುದರಿಂದ ನಮ್ಮ ಕಲೆ ಸಂಸ್ಕೃತಿಯ ಮೂಲಸ್ವರೂಪವನ್ನು ನಮಗೆ ತಿಳಿಸುತ್ತದೆ. ಸಂಘಟಕರು ಅತ್ಯಂತ ಸೂಕ್ತವಾದ ಕೆಲಸಕ್ಕೆ ತೊಡಗಿದ್ದಾರೆ. ಯಾವುದೇ ಕೆಲಸದಲ್ಲಿ ಯಶಸ್ಸು ಸುಲಭವಲ್ಲ. ಆದರೂ ನಾವೆಲ್ಲರೂ ಆಶಾವಾದಿಗಳಾಗಿ ಕಾರ್ಯ ಕ್ರಮ ಯಶಸ್ವಿಯಾಗಲು ಪ್ರತಿಯೊಂದು ಸಮಾಜ ದವರು ಪ್ರಯತ್ನಿಸೋಣ’ ಎಂದರು.

ಕಸಪಾ ತಾಲ್ಲೂಕು ಘಟಕದ ಅಧ್ಯಕ್ಷ ಗೋಪಾಲಕೃಷ್ಣ ನಾಯಕ, ಪ್ರದೀಪ್ ನಾಯಕ ಮಾತನಾಡಿದರು. ಗಣೇಶ ಕುದ್ರಿಗೆ, ದರ್ಶನ್ ಆಚಾರಿ, ನಾರಾಯಣ ನಾಯಕ, ನವೀನ್ ನಾಯಕ, ವಿಜೇತ ನಾಯಕ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-20-2034115942

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.