ಬೆಂಗಳೂರು: ‘ಜನರನ್ನು ಖುಷಿಯಾಗಿ ಇಡಬಲ್ಲ ಕಲಾವಿದರು ದೇಶದ ಸಾಂಸ್ಕೃತಿಕ ರಾಯಭಾರಿಗಳು’ ಎಂದು ಮಾಜಿ ಸಚಿವೆ ರಾಣಿ ಸತೀಶ್ ಹೇಳಿದರು.

ಸೃಷ್ಟಿ ಸಂಸ್ಥೆ ಹಾಗೂ ರೋಟರಿ ಡಿಸ್ಟ್ರಿಕ್ಟ್ 3191 ಭಾನುವಾರ ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ನೃತ್ಯ ದಿನಾಚರಣೆಯಲ್ಲಿ ಸೃಷ್ಟಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

‘ಸಂಸ್ಕೃತಿ ಎನ್ನುವುದು ಯಾವುದೇ ದೇಶದ ಹಿರಿಮೆ. ಕಲೆ ಎಲ್ಲಿ ಎತ್ತರದ ಸ್ಥಾನದಲ್ಲಿ ಇರುತ್ತದೆಯೋ ಅಲ್ಲಿ ಕಲಾವಿದರು ಗೌರವ ಪಡೆಯುತ್ತಾರೆ. ಅಂತಹ ದೇಶವು ಉನ್ನತವಾಗಿ ಬೆಳೆಯುತ್ತದೆ. ಕಲಾವಿದರನ್ನು ಪ್ರೋತ್ಸಾಹಿಸೋಣ’ ಎಂದು ಹೇಳಿದರು.

ಸಾಹಿತಿ ಚಂದ್ರಶೇಖರ ಕಂಬಾರ ಮಾತನಾಡಿ, ‘ಕಲಾವಿದರಿಗೆ ಹೆಚ್ಚು ಸನ್ಮಾನಗಳು ಆಗಬೇಕು. ಅವರನ್ನು ಗೌರವಿಸುವುದು ಕಲೆಯನ್ನು ಗೌರವಿಸಿದಂತಾಗಲಿದೆ. ಕರ್ನಾಟಕ ದಲ್ಲೂ ಒಳ್ಳೆಯ ಕಲಾವಿದರನ್ನು ಗೌರವಿಸುವ ಪರಂಪರೆ ಗಟ್ಟಿಯಾಗಿದೆ’ ಎಂದು ನುಡಿದರು.

ರಂಗ ಸಂಘಟಕ ಶ್ರೀನಿವಾಸ ಕಪ್ಪಣ್ಣ ಮಾತನಾಡಿ, ‘ಪ್ರತಿಭಾ ಪ್ರಹ್ಲಾದ್ ಹಾಗೂ ಬಿ.ಜಯಶ್ರೀ ಅವರು ತಮ್ಮ ಕಲೆಯ ಮೂಲಕ ಕರ್ನಾಟಕದ ಹಿರಿಮೆಯನ್ನು ವಿಶ್ವ ಮಟ್ಟದಲ್ಲಿ ಹೆಚ್ಚಿಸಿದ್ದಾರೆ. ನಾಲ್ಕು ದಶಕಕ್ಕೂ ಹೆಚ್ಚು ಕಾಲ ಕಲೆಯೊಂದಿಗೆ ನಂಟು ಇಟ್ಟುಕೊಂಡು ಈಗಲೂ ಸಕ್ರಿಯರಾಗಿದ್ದಾರೆ’ ಎಂದುಹೇಳಿದರು.

ಪ್ರಶಸ್ತಿ ಸ್ವೀಕರಿಸಿದ ನೃತ್ಯ ಕಲಾವಿದೆ ಪ್ರತಿಭಾ ಪ್ರಹ್ಲಾದ್, ‘ಕಲಾವಿದರು ಜನಿಸಿರುವುದೇ ಜನರನ್ನು ಖುಷಿಯಾಗಿ ಇಡಲು. ಜನ ಕಲೆಯನ್ನು ಖುಷಿಪಟ್ಟಾಗ ಕಲಾವಿದರ ಆ ಕ್ಷಣವನ್ನು ವರ್ಣಿಸಲು ಆಗದು. ಅಂತಹ ಅಪಾರ ಪ್ರೀತಿಯನ್ನು ಜನ ನಮಗೆ ಕೊಟ್ಟಿದ್ದಾರೆ. ಜೀವ ಇರುವ ಕೊನೆ ಕ್ಷಣದವರೆಗೂ ಕಲೆಯನ್ನು ಪಸರಿಸುವ ಕೆಲಸ ಮಾಡುತ್ತೇವೆ’ ಎಂದು ತಿಳಿಸಿದರು.

ರಂಗ ಕಲಾವಿದೆ ಬಿ.ಜಯಶ್ರೀ ಹಾಗೂ ನೃತ್ಯ ಪಟು ಪ್ರತಿಭಾ ಪ್ರಹ್ಲಾದ್ ಅವರು ಸೃಷ್ಟಿ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದರು. ಪ್ರತಿಭಾ ಪ್ರಹ್ಲಾದ್ ಅವರು ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರೆ, ಬಿ.ಜಯಶ್ರೀ ಹಾಗೂ ತಂಡದವರು ’ಕರಿಮಾಯಿ’ ನಾಟಕ ಪ್ರದರ್ಶಿಸಿದರು.

ಸೃಷ್ಟಿ ಸಂಸ್ಥೆಯ ಎ.ವಿ.ಸತ್ಯನಾರಾಯಣ, ರೋಟರಿ ಅಧ್ಯಕ್ಷ ರವೀಂದ್ರ ಉಪಸ್ಥಿತರಿದ್ದರು. ವಿವಿಧ ತಂಡಗಳಿಂದ ನೃತ್ಯ ಕಾರ್ಯಕ್ರಮಗಳು ನಡೆದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-4-11881434

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.