ಬೆಂಗಳೂರು: ಆರು ನೃತ್ಯ ಪ್ರಕಾರಗಳನ್ನು ಪ್ರತಿನಿಧಿಸುವ ದೇಶದ ನಾನಾ ಭಾಗದ 100 ಕಲಾವಿದರು ನಗರದ ಬಸವ ಸಮಿತಿ ಸಭಾಂಗಣದಲ್ಲಿ ಭಾನುವಾರ ಪ್ರದರ್ಶನ ನೀಡಿದರು.

ಉತ್ಸವದಲ್ಲಿ ಕಲಾವಿದರು ಲಯಬದ್ಧ ಹಾಡುಗಳಿಗೆ ಎರಡು ಗಂಟೆ ಕಾಲ ಹೆಜ್ಜೆಗಳನ್ನು ಹಾಕಿದ್ದು ಗಮನ ಸೆಳೆಯಿತು.

ಭಾರತ ಅಂತರರಾಷ್ಟ್ರೀಯ ನೃತ್ಯೋತ್ಸವ, ಬಹು-ನಗರ ಉತ್ಸವದ ಭಾಗವಾಗಿ ದೇಶದಾದ್ಯಂತ ಕಲಾವಿದರನ್ನು ನಗರಕ್ಕೆ ಆಹ್ವಾನಿಸಲಾಗಿತ್ತು. ಕಥಾ ನೃತ್ಯ ಅಂಗನ ಮತ್ತು ಬಸವ ಸಮಿತಿಯ ಸಹಯೋಗದಲ್ಲಿ ನಡೆದ ಭಾರತ ಅಂತರರಾಷ್ಟ್ರೀಯ ನೃತ್ಯ ಉತ್ಸವವನ್ನು ಮಾಜಿ ಸಚಿವೆ ರಾಣಿ ಸತೀಶ್ ಉದ್ಘಾಟಿಸಿದರು.

ಬಸವ ಸಮಿತಿ ಉಪಾಧ್ಯಕ್ಷ ಪ್ರಭುದೇವ ಚಿಗಟೇರಿ, ಜಂಟಿ ಕಾರ್ಯದರ್ಶಿ ನಿರ್ಮಲಾ ಯಲಿಗಾರ್ ಅತಿಥಿಗಳಾಗಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-4-1408109027

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.