ಧಾರವಾಡ: ‘ಸಲಕಿನಕೊಪ್ಪದ ಡಿ.ಕೆ.ಹಾವೇರಿಪೇಟ್ ಫೌಂಡೇಷನ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಾರ್ಚ್ 29 ಹಾಗೂ 31ರಂದು ರಂಗಾಯಣ ಸಾಂಸ್ಕೃತಿಕ ಸಮುಚ್ಛಯ ಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ನಾಟಕೋತ್ಸವ ನಡೆಯಲಿದೆ’ ಎಂದು ಫೌಂಡೇಷನ್ ಅಧ್ಯಕ್ಷ ಕಲ್ಮೇಶ ಹಾವೇರಿಪೇಟ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘29ರಂದು ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಹು-ಧಾ ಮಹಾನಗರ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ ಉದ್ಘಾಟಿಸುವರು. ಶಿಕ್ಷಕ ರಂಗನಾಥ ವಾಲ್ಮೀಕಿ ರಂಗಚಿಂತನೆ ನಡೆಸುವರು. ಪ್ರಭು ಕುಂದರಗಿ ಅವರು ಜನಪದ ಗೀತೆಗಳನ್ನು ಪ್ರಸ್ತುತಪಡಿಸುವರು. 31ರಂದು ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ನಾಟಕ ಅಕಾಡೆಮಿಯ ಸದಸ್ಯೆ ಗಾಯತ್ರಿ ಹಡಪದ, ಪಾಲಿಕೆ ಸದಸ್ಯೆ ಚಂದ್ರಕಲಾ ಕೊಟಬಾಗಿ, ರಂಗಭೂಮಿ ಕಲಾವಿದೆ ಹೆಲನ್ ಮೈಸೂರ ಪಾಲ್ಗೊಳ್ಳುವರು. ಬೆಂಗಳೂರಿನ ರಂಗ ಬದುಕು ಟ್ರಸ್ಟ್ ತಂಡದವರು ಹೆಲನ್ ಮೈಸೂರು ನಿರ್ದೇಶನದ ‘ಎಲ್ಲರಂತಲ್ಲ ನಾ ಅವ್ವ’ ನಾಟಕ ಪ್ರಸ್ತುತಪಡಿಸುವರು’ ಎಂದು ತಿಳಿಸಿದರು.

ಮಂಜುನಾಥ ಹಗೇದಾರ, ಪ್ರಭು ಹಂಚಿನಾಳ, ರಾಹುಲ್ ದತ್ತಪ್ರಸಾದ, ಅರವಿಂದ ಮುಳಗುಂದ ಕಿಶನರಾವ್ ಕುಲಕರ್ಣಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-24-1349362230

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.