ಹೊಸನಗರ: ‘ಯಕ್ಷಗಾನ ಕಲಾವಿದರಾಗಿದ್ದ ಮಳಲಿ ಶೀನಯ್ಯ ಅವರು ಯಕ್ಷಗಾನ ಹಾಗೂ ತಾಳೆ ಮದ್ದಳೆ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿ ಅಗ್ರಮಾನ್ಯ ಕಲಾವಿದರಾಗಿದ್ದರು. ಅವರ ಕಲಾ ಸೇವೆ ಅವಿಸ್ಮರಣೀಯ. ನಮ್ಮನ್ನಗಲಿದ್ದರೂ ಅವರ ಸೇವಾ ಕಾರ್ಯಗಳು ಸದಾ ನೆನಪಿನಲ್ಲಿರುತ್ತವೆ’ ಎಂದು ಯಕ್ಷಗಾನ ಹಿರಿಯಕಲಾವಿದ ಗುಡ್ಡೆಹಿತ್ಲು ಸುಬ್ರಹ್ಮಣ್ಯ ಭಟ್ ಸ್ಮರಿಸಿದರು.

ತಾಲ್ಲೂಕಿನ ಕಾರಣಗಿರಿ ಸಿದ್ಧಿವಿನಾಯಕ ಸಭಾಭವನದಲ್ಲಿ ಸಿದ್ಧಿವಿನಾಯಕ ಯಕ್ಷಕಲಾ ಬಳಗ, ಗ್ರಾಮ ಭಾರತಿ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಈಚೆಗೆ ನಡೆದ ಕಲಾವಿದ ಮಳಲಿ ಶೀನಯ್ಯ ಅವರ ನುಡಿ ನಮನ ಮತ್ತು ತಾಳಮದ್ದಳೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗ್ರಾಮ ಭಾರತಿ ಟ್ರಸ್ಟ್ ಅಧ್ಯಕ್ಷ ಹನಿಯ ರವಿ ಮಾತನಾಡಿ, ‘ಮಳಲಿ ಶೀನಯ್ಯ ಅವರು ಇತ್ತೀಚಿನವರೆಗೆ ಅನೇಕ ಮೇಳಗಳಲ್ಲಿ ಬಣ್ಣ ಹಚ್ಚಿದ್ದು, ಮಲೆನಾಡಿನ ಅದ್ಭುತ ಕಲಾವಿದರಲ್ಲಿ ಒಬ್ಬರಾಗಿದ್ದರು’ ಎಂದು ಸ್ಮರಿಸಿದರು.

ಸಿದ್ಧಿವಿನಾಯಕ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಭಾಕರ ರಾವ್, ಹಿರಿಯ ಕಲಾವಿದ ನಿಟ್ಟೂರು ಅನಂತ ಭಟ್, ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ನಳಿನಚಂದ್ರ, ಹನಿಯ ಗುರುಮೂರ್ತಿ, ಒ.ಕೆ. ರಮಾನಂದ ಮತ್ತಿತರರು ಉಪಸ್ಥಿತರಿದ್ದರು.

ನಂತರ ‘ಸುಧನ್ವ ಮೋಕ್ಷ’ ಯಕ್ಷಗಾನ ಪ್ರಸಂಗದ ತಾಳಮದ್ದಳೆ ಕಾರ್ಯಕ್ರಮ ನಡೆಯಿತು. ಭಾಗವತರಾಗಿ ಗೋಪಾಲಕೃಷ್ಣ ಭಟ್ ಜೋಗಿಮನೆ, ಮೃದಂಗದಲ್ಲಿ ನರಸಿಂಹ ಹೆಗಡೆ ಮೂರೂರು, ಅರ್ಥದಾರಿಗಳಾಗಿ ಜಿ.ಕೆ. ಹೆಗಡೆ, ರವಿ ಮಾಡೋಡಿ ಮತ್ತು ಅನಂತಭಟ್ ನಿಟ್ಟೂರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-42-341271997

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.