ಹುಬ್ಬಳ್ಳಿ: ಬಾಲ-ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಮೇ 17ರಂದು ಸಂಜೆ 5.30ಕ್ಕೆ ಧಾರವಾಡದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಭಾಭವನದಲ್ಲಿ ‘ಗಾಯನ-ಯಕ್ಷಗಾನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಬೆಂಗಳೂರಿನ ಜಿ.ಎಸ್. ಹೆಗಡೆ ಅವರ ಸಪ್ತಕ ಸಂಸ್ಥೆ ಹಾಗೂ ಗಾಯಕಿ ರಾಧಾ ದೇಸಾಯಿ ಸಾರಥ್ಯದ ಧಾರವಾಡದ ಸರಸ್ವತಿ ಸಂಗೀತ ವಿದ್ಯಾಲಯಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಂಜೆ 5.30ಕ್ಕೆ ಉತ್ತರಕನ್ನಡ ಜಿಲ್ಲೆಯ ಗುಂದನ ಯುವಪ್ರತಿಭೆ ಸುದಾಮ ದಾನಗೇರಿ ಅವರ ಗಾಯನದೊಂದಿಗೆ ಆರಂಭಗೊಳ್ಳಲಿದೆ.

ಡಾ.ಶ್ರೀಹರಿ ದಿಗ್ಗಾವಿ ತಬಲಾ ಸಾಥ್ ನೀಡಲಿದ್ದು, ಬಸವರಾಜ ಹಿರೇಮಠ ಹಾರ್ಮೋನಿಯಂ ಸಾಥ್ ಸಂಗತ್ ಮಾಡಲಿದ್ದಾರೆ. ಬಾಲಪ್ರತಿಭೆಗಳಿಂದ ಜಾಂಬವತಿ ಕಲ್ಯಾಣ ಪ್ರಸಂಗದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ನೀಲ್ಕೋಡು ಶಂಕರ ಹೆಗಡೆ ಅಭಿನೇತ್ರಿ ಆರ್ಟ್ ಟ್ರಸ್ಟ್ ನೇತೃತ್ವದ ಯಕ್ಷಗಾನಕ್ಕೆ ಮುಗ್ವಾ ಗಣೇಶ ನಾಯ್ಕ ನಿರ್ದೇಶನ ನೀಡಿದ್ದಾರೆ. ಭಾಗವತರಾಗಿ ಮಾವಿನಕೆರೆಯ ಗಣೇಶ ಯಾಜಿ, ಮದ್ದಳೆಯಲ್ಲಿ ಪಿ.ಕೆ. ಹೆಗಡೆ ಹರಿಕೇರಿ, ಚಂಡೆಯಲ್ಲಿ ಕು.ಮಯೂರ ಹೆಗಡೆ ಹರಿಕೇರಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-24-739534590

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.