ಹುಬ್ಬಳ್ಳಿ: ‘ಸ್ವರ್ಣ ಮಯೂರಿ ಸಾಂಸ್ಕೃತಿಕ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸಂಸ್ಥೆಯ 18ನೇ ವಾರ್ಷಿಕೋತ್ಸವದ ಅಂಗವಾಗಿ ಜನಪದ ಪರಂಪರಾ ಉತ್ಸವವನ್ನು ಮೇ 23ರಂದು ಸಂಜೆ 4 ಗಂಟೆಗೆ ನಗರದ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ’ ಎಂದು ಸಂಸ್ಥೆಯ ಅಧ್ಯಕ್ಷ ಚನ್ನಯ್ಯ ಎಸ್. ವಸ್ತ್ರದ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಸಂಜೆ 7.15ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ವೇದಿಕೆ ಕಾರ್ಯಕ್ರಮ ಉದ್ಘಾಟಿಸುವರು. ಉದ್ಯಮಿ ಮಹೇಂದ್ರ ಸಿಂಘಿ ಅಧ್ಯಕ್ಷತೆ ವಹಿಸುವರು. ಮಹೇಶ್ವರಿ ಕ್ರೆಡಿಟ್ ಕೊ–ಆಪ್ ಸೊಸೈಟಿ ಅಧ್ಯಕ್ಷ ಬಂಗಾರೇಶ ಹಿರೇಮಠ ಪಾಲ್ಗೊಳ್ಳುವರು. ನಾಟ್ಯಾಂಜಲಿ ಕಲಾಕೇಂದ್ರದ ಸಹನಾ ಭಟ್ ಅವರಿಗೆ ಗುರುವಂದನೆ ಸಲ್ಲಿಸಲಾಗುತ್ತದೆ. ಜನಪದ ಕಲಾವಿದ ಪ್ರಕಾಶ ಮಲ್ಲಿಗವಾಡ ಆಶಯ ನುಡಿಗಳನ್ನಾಡುವರು. ಜನಪದ ನೃತ್ಯ ಗುರು ಮನೀಷ ಶಿಂಧೆ ಪ್ರಾಸ್ತಾವಿಕವಾಗಿ ಮಾತನಾಡುವರು’ ಎಂದರು.

‘ವಿದುಷಿ ಚೈತ್ರಾ ವಸ್ತ್ರದ ಅವರಿಂದ ನಟರಾಜ ಪಾದಪೂಜೆ, ಸ್ವರ್ಣ ಮಯೂರಿ ಸಾಂಸ್ಕೃತಿಕ ಸಂಸ್ಥೆಯಿಂದ ಜಾನಪದ ನೃತ್ಯ, ಕುಬೇರಗೌಡ ಮುರಳ್ಳಿ ತಂಡದಿಂದ ಜಗ್ಗಲಗಿ ವಾದನ, ಏಕದಂತ ಸಾಂಸ್ಕೃತಿಕ ಸಂಸ್ಥೆಯಿಂದ ಗೊಂಬೆ ಕುಣಿತ, ಶಂಬಯ್ಯ ಹಿರೇಮಠ ತಂಡದಿಂದ ಜಾನಪದ ಹಾಡುಗಳು, ಪಂಡಿತ್ ಮನುಕುಮಾರ ಹಿರೇಮಠ ಬಳಗದಿಂದ ಸಾಮೂಹಿಕ ತಬಲಾ ವಾದನ ಜರುಗಲಿದೆ’ ಎಂದು ಹೇಳಿದರು.

‘ನಾಟ್ಯ ಸ್ಫೂರ್ತಿ ಆರ್ಟ್ ಆ್ಯಂಡ್ ಕಲ್ಚರಲ್ ಅಕಾಡೆಮಿಯಿಂದ ದೇಶಭಕ್ತಿ ಸಮೂಹ ನೃತ್ಯ, ಯಶೋಧಾ ಹಿರೇಮಠ ತಂಡದವರಿಂದ ಸೋಬಾನೆ ಪದ ಗಾಯನ, ಚೈತ್ರಾ ವಸ್ತ್ರದ ಶಿಷ್ಯರಿಂದ ಭರತನಾಟ್ಯ, ನಂದನವನ ಮಹಿಳಾ ಸಂಗೀತ ತಂಡದಿಂದ ಜಾನಪದ ಗೀತೆ, ಬಸವನಗೌಡ ಪಾಟೀಲ ತಂಡದಿಂದ ಕರಡಿಮಜಲು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದು ವಿವರಿಸಿದರು.

ರೋಹಿತ್, ಮಾರ್ಕಂಡೇಶ್ವರ ಕಡಿದಾಸ್, ಅಮಿತಕುಮಾರ ಶಿಂಧೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-24-947784754

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.