ಕಾಸರಗೋಡು: ಇಲ್ಲಿನ ಪೆರಿಯ ಬೇಕಲ ಗೋಕುಲಂ ಗೋಶಾಲೆಯಲ್ಲಿ ನಡೆಯುತ್ತಿರುವ ‘ವೈಶಾಖ ನಟನಂ’ ರಾಷ್ಟ್ರೀಯ ನೃತ್ಯೋತ್ಸವದಲ್ಲಿ ದಕ್ಷಿಣ ಅಮೆರಿಕಾದ ಪೆರು ದೇಶದ ಕಲಾವಿದೆ ಅನಂಗ ಮಂಜರಿ ಗೊನ್ಸಾಲ್ವಸ್ ಭರತನಾಟ್ಯ ಪ್ರದರ್ಶಿಸಿ ಗಮನ ಸೆಳೆದರು.

ಅವರು ನಂದಿ ಮಂಟಪದಲ್ಲಿ ಭಾನುವಾರ ನಡೆದ ಪ್ರಸ್ತುತಿಯಲ್ಲಿ ಗೊನ್ಸಾಲ್ವಸ್ನಂಗ ಅವರ ಅಭಿನಯ ಮತ್ತು ತಾಳ–ಲಯ–ಬದ್ಧ ನರ್ತನ ಕಲಾಭಿಮಾನಿಗಳ ಮನಸೂರೆಗೊಂಡಿತು.

ಜಾನಕಿ ರಂಗರಾಜ್ ಅವರ ಶಿಷ್ಯೆಯಾಗಿರುವ ಅನಂಗ ಮುಂದಿನ ಬಾರಿಯೂ ಕಾಸರಗೋಡಿಗೆ ಬರುವ ಆಶಯದೊಂದಿಗೆ ನೃತ್ಯ ನಮನ ಸಲ್ಲಿಸಿದರು.

ಹಾಂಗ್ಕಾಂಗ್ನಿಂದ ಬಂದಿದ್ದ ಸಂಜಯ್ ವಡಪಳ್ಳಿ ಅವರ ನೃತ್ಯ ಪ್ರದರ್ಶನವೂ ನಂದಿ ಮಂಟಪದಲ್ಲಿ ರೋಮಾಂಚನ ಸೃಷ್ಟಿಸಿತು. ಮುಳಿಯ ಕುಟುಂಬದ ಆದ್ಯಾ ಸುಲೋಚನ, ಶಾರ್ವರಿ ಮಯ್ಯ ಹಾಗೂ ಮೈಸೂರಿನ ಕೆ.ಕುಮಾರ್ ಅವರಿಂದಲೂ ನೃತ್ಯ ವೈವಿಧ್ಯ ಪ್ರಸ್ತುತಗೊಂಡಿತು.

ನಂದಿಮಂಟಪ ಮತ್ತು ಧೇನು ಮಂಟಪದಲ್ಲಿ ಭರತನಾಟ್ಯ, ಮೋಹಿನಿಯಾಟ್ಟಂ, ಕೂಚಿಪುಡಿ, ಕೇರಳ ನಟನಂ, ಕಥಕ್ ಹಾಗೂ ತಿರುವಾದಿರಕ್ಕಳಿ ಮೊದಲಾದ ಶಾಸ್ತ್ರೀಯ ಮತ್ತು ಸಾಂಪ್ರದಾಯಿಕ ನೃತ್ಯ ಪ್ರಕಾರಗಳು ಮುದ ನೀಡಿದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-29-1790194358

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.