ಕುಮಟಾ : ‘ಸನಾತನ ಧರ್ಮ ಹಾಗೂ ಬದುಕಿನ ರೀತಿಯನ್ನು ಆಯಾ ಸಂದರ್ಭ, ವಿವಿಧ ಪಾತ್ರಗಳ ಮೂಲಕ ಸಮಾಜಕ್ಕೆ ಪ್ರಚುರಪಡಿಸಿದ್ದು ಯಕ್ಷಗಾನ ಕಲೆ. ಹಲವು ದಶಕಗಳಿಂದ ಯಕ್ಷಗಾನ ಕಲೆಯನ್ನು ಸಮಾಜಕ್ಕೆ ಪ್ರಸಾರ ಮಾಡುವಲ್ಲಿ ಶ್ರಮಿಸಿದವರು ಯಕ್ಷಗಾನದ ಮೇರು ಕಲಾವಿದ ಬಳಕೂರು ಕೃಷ್ಣ ಯಾಜಿ' ಎಂದು ಪ್ರಾಚಾರ್ಯ ಎಂ.ಜಿ. ಭಟ್ಟ ಹೇಳಿದರು.

ಕುಮಟಾದಲ್ಲಿ ವಾಲಗಳ್ಳಿ ಯಕ್ಷ ಮಿತ್ರ ಮಂಡಳಿ ಆಯೋಜಿಸಿದ್ದ 18 ನೇ ವರ್ಷದ ಪ್ರಶಸ್ತಿ ಪ್ರದಾನ, ನಿಧಿ ಸಮರ್ಪಣೆ, ಅನಂತ ನಮನ ಹಾಗೂ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅತಿಥಿಯಾಗಿದ್ದ ಜಿ.ಕೆ.ಹೆಗಡೆ ಹರಿಕೇರಿ, `ಯಕ್ಷಗಾನ ಕಲೆ ಹಾಗೂ ಕಲಾವಿದರಿಗಾಗಿ ಕೃಷ್ಣ ಯಾಜಿ ಅವರು ಮಾಡುತ್ತಿರುವ ಸೇವೆ ಬೆಲೆ ಕಟ್ಟಲಾಗದಂಥದ್ದು’ ಎಂದರು.

ಕಲಾವಿದರಾದ ರಮೇಶ ಭಂಡಾರಿ, ಸುಬ್ರಹ್ಮಣ್ಯ ಮೂರೂರು ಈಚೆಗೆ ಅಗಲಿದ ಕಲಾವಿದ, ಸಾಮಾಜಿಕ ಕಾರ್ಯಕರ್ತ ಗೋಕರ್ಣದ ಅನಂತ ಅಡಿ ಅವರಿಗೆ ನುಡಿ ನಮನ ಸಲ್ಲಿಸಿದರು. ಕಲಾವಿದ ಜಿ.ವಿ.ಹೆಗಡೆ ಕಾರ್ಯಕ್ರಮ ಉದ್ಘಾಟಿಸಿದರು.

ಅನಾರೋಗ್ಯದಿಂದ ಚೇತರಿಸಿಕೊಂಡ ಸ್ತ್ರೀ ವೇಷ ಕಲಾವಿದ ಕಾರ್ಕಳದ ಶಶಿಕಾಂತ ಶೆಟ್ಟಿ ಅವರಿಗೆ ಯಾಜಿ ಮಿತ್ರ ಮಂಡಳಿಯ 18ನೇ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿ ₹ 25 ಸಾವಿರ ಧನ ಸಹಾಯ ನೀಡಲಾಯಿತು. ಪ್ರಶಸ್ತಿ ಸ್ವೀಕರಿಸಿದ ಶಶಿಕಾಂತ ಶೆಟ್ಟಿ ಮಾತನಾಡಿದರು.

ವಾಲಗಳ್ಳಿ ಯಾಜಿ ಯಕ್ಷ ಮಿತ್ರ ಮಂಡಳಿಯ ಅಧ್ಯಕ್ಷ ಕೃಷ್ಣ ಯಾಜಿ ಬಳಕೂರು ಸ್ವಾಗತಿಸಿದರು. ರವೀಂದ್ರ ಭಟ್ಟ ಸೂರಿ, ಗಣೇಶ ಭಟ್ ಬಗ್ಗೋಣ ಮತ್ತಿತರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-20-875132723

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.