ಮಂಗಳೂರು: ದಿವಂಗತ ಶೇಣಿ ಗೋಪಾಲಕೃಷ್ಣ ಭಟ್ಟರ ಜಯಂತಿ ಆಚರಣೆಯ ಅಂಗವಾಗಿ ಹರಿಕಥಾ ರಂಗದಲ್ಲೊಂದು ವಿಶಿಷ್ಟ ಪ್ರಯೋಗ ನಡೆಸಲು ನಿರ್ಧರಿಸಲಾಗಿದೆ. ಇದೇ ಮೊದಲ ಬಾರಿಗೆ 12 ಮಂದಿ ಹರಿದಾಸರಿಂದ ಒಂದೇ ಕಥಾ ಭಾಗದ ಹರಿಕಥಾ ಪ್ರಸ್ತುತಿಯ ವಿಶಿಷ್ಟ ಪ್ರಯೋಗ ನಡೆಯಲಿದೆ ಎಂದು ಶೇಣಿ ಅವರ ಶಿಷ್ಯ, ಕಾರ್ಯಕ್ರಮದ ಸಂಚಾಲಕ ಕೆ. ಮಹಾಬಲ ಶೆಟ್ಟಿ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಡಾ. ಶೇಣಿ ಜಯಂತ್ಯುತ್ಸವ’ ಕಾರ್ಯಕ್ರಮವು ಕಾಸರಗೋಡಿನ ಗುಡ್ಡೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ.7 ಮತ್ತು 8ರಂದು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಹರಿಕಥೆ ಪ್ರಸ್ತುತಿ ನಡೆಯಲಿದೆ. ಮಂಗಳೂರು ಹರಿಕಥಾ ಪರಿಷತ್, ಶೇಣಿ ಚಾರಿಟಬಲ್ ಟ್ರಸ್ಟ್, ಕೂಡ್ಲು ಗುಡ್ಡೆ ದೇವಸ್ಥಾನದ ಮಹಿಳಾ ಮಂಡಳಿ ಸಹಭಾಗಿತ್ವದಲ್ಲಿ, ಎಸ್.ಎಲ್ ಶೇಟ್ ಡೈಮಂಡ್ ಹೌಸ್ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಹರಿಕಥೆ ರಂಗದಲ್ಲಿ ಇದುವರೆಗೆ ಒಂದೇ ಕಥಾ ಭಾಗವನ್ನು 12 ಮಂದಿ ಹರಿದಾಸರು ಪ್ರಸ್ತುತಪಡಿಸಿದ ಇತಿಹಾಸ ಇಲ್ಲ. ‘ಸುಗ್ರೀವ ಸಖ್ಯ- ವಾಲಿ ಮೋಕ್ಷ’ ಕಥಾ ಭಾಗವನ್ನು ಪ್ರತಿ ಹರಿದಾಸರು ಒಂದೂವರೆ ಗಂಟೆ ಅವಧಿಯಲ್ಲಿ ಪ್ರಸ್ತುತಪಡಿಸಲಿದ್ದಾರೆ. ಏ.7ರ ಬೆಳಿಗ್ಗೆ 9ರಿಂದ ಪ್ರಾರಂಭವಾಗುವ ಪ್ರಸ್ತುತಿಯಲ್ಲಿ ಸುಧಾಕರ ಕೋಟಿ ಕುಂಜತ್ತಾಯ, ಶೇಣಿ ಮುರಳಿ ಮಂಗಳೂರು, ಶಂನಾಡಿಗ ಕುಂಬಳೆ, ಚಂದ್ರಕಾಂತ್ ಜಯಾನಂದ ಕುಮಾರ್, ಎಸ್.ಪಿ. ಗುರುದಾಸ್ ಹರಿಕಥೆ ನಡೆಸಿಕೊಡುವರು. ಏ.8ರಂದು ಬೆಳಿಗ್ಗೆ 9ರಿಂದ ಶೃದ್ಧಾ ನಾರ್ಯಪಳ್ಳ, ತೋನ್ಸೆ ಪುಷ್ಕಳ್ ಕುಮಾರ್, ಶ್ರೀಧರ ದಾಸ್ ಕುಂಭಾಶಿ, ರಾಮಚಂದ್ರ ಮಣಿಯಾಣಿ, ಮಂಜುಳಾ ಜಿ. ರಾವ್, ದೇವಕಿತನಯ ಕೂಡ್ಲು ಹರಿಕಥೆ ನಡೆಸಿಕೊಡುವರು. ಸಂಜೆ 6.40ಕ್ಕೆ ಧಾರ್ಮಿಕ ಸಭೆ ನಡೆಯಲಿದೆ ಎಂದರು.

ಎಂ.ರವೀಂದ್ರ ಶೇಟ್, ಕಾರ್ಯಕ್ರಮ ಸಂಚಾಲಕ ಸುಧಾಕರ ರಾವ್ ಪೇಜಾವರ, ನಾರಾಯಣ ರಾವ್, ಶೇಣಿ ಮುರಳಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-51-1142411811

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.