ಮಂಗಳೂರು: ‘ಕಲಾವಿದ ಪ್ರಭಾಕರ ಕಾಮತ್ ಅವರು ಯಕ್ಷಗಾನ ಸೇವೆಯ ಮೂಲಕ ಭಗವಂತನನ್ನು ಸಾಕ್ಷಾತ್ಕರಿ ಸಿಕೊಂಡಿದ್ದರು’ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಹೇಳಿದರು.

ಇತ್ತೀಚಿಗೆ ನಿಧನರಾದ ತಾಳಮದ್ದಳೆ ಅರ್ಥಧಾರಿ, ಹವ್ಯಾಸಿ ಯಕ್ಷಗಾನ ಕಲಾ ವಿದ ಪಿ. ಪ್ರಭಾಕರ ಕಾಮತ್ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ‘ವಾರದ ಕೂಟ ನಡೆ ಸುವ ಹಲವು ಯಕ್ಷಗಾನ ಸಂಘಗಳಲ್ಲಿ ಪ್ರಭಾಕರ ಅವರು ನಿರಂತರವಾಗಿ ತೊಡಗಿಸಿಕೊಂಡು ಸಾರ್ಥಕ ಜೀವನ ನಡೆಸಿದ್ದರು’ ಎಂದರು.

‘ಪ್ರಭಾಕರ ಯಕ್ಷ ನಮನ’ ಹೆಸರಿನಲ್ಲಿ ಶ್ರೀ ಜಗದಂಬಾ ಯಕ್ಷಗಾನ ಮಂಡಳಿಯವರಿಂದ ವಾಲಿ ಮೋಕ್ಷ, ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ವತಿಯಿಂದ ಅತಿಕಾಯ ಮೋಕ್ಷ ಹಾಗೂ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿಯವರಿಂದ ಸುಧನ್ವ ಮೋಕ್ಷ ಯಕ್ಷಗಾನ ತಾಳಮದ್ದಳೆ ಕೂಟಗಳು ಜರಗಿದವು.

ಸಂಜಯರಾವ್, ಶ್ರೀನಾಥ ಪ್ರಭು, ಸಿ.ಎಸ್. ಭಂಡಾರಿ, ಪ್ರಫುಲ್ಲಾ ನಾಯಕ್, ಅರ್ಚಕ ವೇದಮೂರ್ತಿ ವಾಸುದೇವ ಭಟ್, ಶಿವಪ್ರಸಾದ ಪ್ರಭು, ಶೋಭಾ ಐತಾಳ, ಅಶೋಕ ಬೋಳೂರು, ಯೋಗೀಶ ಕುಮಾರ್ ಜೆಪ್ಪು, ಜಯರಾಮ ಅಂಚನ್ , ಶಿವರಾಮ ಪಣಂಬೂರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-29-334278561

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.