ಮೂಡುಬಿದಿರೆ: ಸಂಪಿಗೆ ಮಾಧವ ಕುಮಾರ್ ಆಚಾರ್ ಶ್ರೇಷ್ಠ ಭಾಗವತರಾಗಿದ್ದರು. ಯಕ್ಷಗಾನದಲ್ಲಿ ಶಿಸ್ತಿಗೆ ಆದ್ಯತೆ ನೀಡುತ್ತಿದ್ದ ಅವರು ಯಕ್ಷಗಾನ ಸಾಹಿತ್ಯದ ಬಗ್ಗೆ ಒಲವು ಹೊಂದಿದ್ದರು ಎಂದು ಅರ್ಥಧಾರಿ ಶಾಂತಾರಾಮ ಕುಡ್ವ ಹೇಳಿದರು.

ಈಚೆಗೆ ನಿಧನರಾದ ಸಂಪಿಗೆ ಮಾಧವ ಕುಮಾರ್ ಆಚಾರ್ ಅವರಿಗೆ ಇಲ್ಲಿನ ಪೊನ್ನೆಚಾರಿ ವೆಂಕಟರಮಣ ದೇವಸ್ಥಾನದಲ್ಲಿ ಗುರುವಾರ ನಡೆದ ನೆನಪು ಸಭೆಯಲ್ಲಿ ಅವರು ನುಡಿನಮನ ಸಲ್ಲಿಸಿದರು.

ಪಾವಂಜೆ ಮೇಳದ ಯಕ್ಷಗಾನ ಕಲಾವಿದ ದಿನೇಶ್ ಕಾವಳಕಟ್ಟೆ, ನಿವೃತ್ತ ಪೊಲೀಸ್ ಅಧಿಕಾರಿ ರಾಜಾರಾಮ್ ನಾಗರಕಟ್ಟೆ, ಹರಿಕಥಾ ಪ್ರವೀಣ ಚಂದ್ರಕಾಂತ್ ಭಟ್, ಜಿಂದಾಲ್ ಕಂಪೆನಿ ಉದ್ಯೋಗಿ ಈಶ್ವರ ಗೌಡ, ಕಲಾಪೋಷಕರಾದ ಕೃಷ್ಣಮೂರ್ತಿ ಮಾಯಣ, ಉದಯಕುಮಾರ್ ಮಾಳಿಗೆ ಮನೆ, ನಿವೃತ್ತ ಶಿಕ್ಷಕ ಶ್ಯಾಮ್ ಸುಂದರ್ ಮಾತನಾಡಿದರು. ಮಾಧವ ಅವರ ಪತ್ನಿ ಸುಧಾ ಎಂ.ಕೆ, ಪುತ್ರರಾದ ಕಿರಣ್ ಕುಮಾರ್, ಪವನ್ ಕುಮಾರ್ ಪಾಲ್ಗೊಂಡಿದ್ದರು. ಯಕ್ಷ ಮೇನಕಾದ ಸದಾಶಿವರಾವ್ ನೆಲ್ಲಿಮಾರ್ ನಿರೂಪಿಸಿ ದರು. ನಾಗರಾಜ್ ಶರ್ಮ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-29-738571530

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.