ಮೈಸೂರು: ‘ಏಕಾಗ್ರತೆಗೆ ನೃತ್ಯವೇ ಔಷಧವಾಗಿದ್ದು, ವಿದ್ಯಾರ್ಥಿಗಳ ಪಠ್ಯ ಚಟುವಟಿಕೆಗೆ ಸಹಾಯಕವಾಗುತ್ತದೆ’ ಎಂದು ನೃತ್ಯ ಗುರು ಪ್ರೊ.ಕೆ.ರಾಮಮೂರ್ತಿ ರಾವ್ ಹೇಳಿದರು.

ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ‘ವಿಶ್ವ ನೃತ್ಯ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಪರೀಕ್ಷೆಗೆ ತೊಂದರೆಯಾಗುತ್ತದೆ ಎಂದು ನೃತ್ಯ ತರಬೇತಿಯಿಂದ ಮಕ್ಕಳನ್ನು ಪೋಷಕರು ದೂರವಿಡುವ ನಿದರ್ಶನ ಇವೆ. ಆದರೆ ನೃತ್ಯದಿಂದ ಉಲ್ಲಾಸ ಹೆಚ್ಚುತ್ತದೆ. ನೃತ್ಯದಲ್ಲಿ ತೊಡಗಿಸಿಕೊಂಡು ಉನ್ನತ ಸ್ಥಾನ ಪಡೆಯುವವರ ಸಂಖ್ಯೆಯೂ ಹೆಚ್ಚಿದೆ. ಹೀಗಾಗಿ ಜನರಲ್ಲಿನ ತಪ್ಪು ಮಾಹಿತಿ ಹೋಗಲಾಡಿಸಿ, ಅದರ ಪ್ರಾಮುಖ್ಯತೆ ತಿಳಿಸುವ ಕೆಲಸ ಆಗಬೇಕು’ ಎಂದು ತಿಳಿಸಿದರು.

‘ಪ್ರಾಚೀನ ಕಾಲದಲ್ಲಿ ಲಾಲಿತ್ಯಮಯ, ಮುಖದ ಕಾಂತಿಗೆ ಮಹಿಳೆಯರು ನೃತ್ಯ ಅವಲಂಬಿಸಿದ್ದರು. ಆರೋಗ್ಯ ಸುಸ್ಥಿತಿಗೆ, ಕೈಕಾಲು ಶಕ್ತಿಯುತ ಆಗಲು ನೃತ್ಯ ಸಹಕಾರಿ. ನೃತ್ಯದಿಂದ ಕಣ್ಣಿನಲ್ಲಿ ಕಾಂತಿ ಬರುತ್ತದೆ, ಹಸನ್ಮುಖರಾಗಿರುತ್ತಾರೆ. ಈ ಕಲೆಯು ಸಾರ್ವತ್ರಿಕ ಪ್ರಸಾರ ಆದರೆ ಸಂಸ್ಕಾರ ಬೆಳೆಯುತ್ತದೆ’ ಎಂದರು.

‘ಪ್ರತಿಭಾ ಪ್ರದರ್ಶನ’ ದಿನದ ಅಂಗವಾಗಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು. ಹಲವು ಹಾಡುಗಳಿಗೆ ಧ್ವನಿಯಾದರು.

ಕುಲಪತಿ ಪ್ರೊ.ಕೆ.ರಾಮಕೃಷ್ಣಯ್ಯ, ಕುಲಸಚಿವ ಪ್ರೊ.ಎಂ.ಜಿ.ಮಂಜುನಾಥ, ಹಣಕಾಸು ಅಧಿಕಾರಿ ಸಿ.ಪಿ.ಸೌಮ್ಯಶ್ರೀ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-39-204844197

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.