ನರಸಿಂಹರಾಜಪುರ: ಪಟ್ಟಣದ ಅಗ್ರಹಾರದ ಬ್ರಾಹ್ಮಣ ಮಹಾಸಭಾ ಭವನದಲ್ಲಿ ಭಾನುವಾರ ರಾಗ ಮಯೂರಿ ಅಕಾಡೆಮಿಯಿಂದ ಕಲಾಯನ-9 ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ರಂಗಭೂಮಿ ಕಲಾವಿದೆ ಅರ್ಪಿತಾ ಚೊಕ್ಕಾಡಿ, ಕಲಾವಿದರು ತಾವು ಕಲಿತ ಕಲೆಯನ್ನು ಎಂದಿಗೂ ನಿಲ್ಲಿಸಬಾರದು. ಕಲೆ ಎಂಬುದು ಸಾಗರದ ಅಲೆಯಂತೆ. ದೊರೆತ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದರು.

ರಾಗಮಯೂರಿ ಅಕಾಡೆಮಿಯ ಭರತನಾಟ್ಯ ಕಲಾವಿದೆ ಧನ್ಯಶ್ರೀ ಮಾತನಾಡಿ, ರಾಗ ಮಯೂರಿ ಅಕಾಡೆಮಿಯಲ್ಲಿ ಸಂಗೀತ, ಭರತ ನಾಟ್ಯ ಕಲಿತ ವಿದ್ಯಾರ್ಥಿಗಳು ದೊಡ್ಡ ಊರುಗಳಲ್ಲಿ ಪ್ರದರ್ಶನ ಮಾಡಿ ಜನರ ಮೆಚ್ಚುಗೆ ಗಳಿಸುತ್ತಿದ್ದಾರೆ ಎಂದರು.

ಭರತ ನಾಟ್ಯ ಹಾಗೂ ಸಂಗೀತದಲ್ಲಿ ಜೂನಿಯರ್ ಪರೀಕ್ಷೆ ಮುಗಿಸಿದ ವಿದ್ಯಾರ್ಥಿಗಳಿಂದ ಭರತ ನಾಟ್ಯ ಪ್ರದರ್ಶನ ನಡೆಯಿತು.

ಮಯೂರಿ ಅಕಾಡೆಮಿ ಸಂಗೀತ ನಿರ್ದೇಶಕಿ ಅಂಕಿತ ಪ್ರಜ್ವಲ್ ಅವರಿಂದ ನಟುವಾಂಗ, ಹರ್ಷಿತ ಹಾಗೂ ಸಂಪ್ರಿಯ ಅವರಿಂದ ಹಾಡುಗಾರಿಕೆ ನಡೆಯಿತು ಮೃದಂಗದಲ್ಲಿ ಅರವಿಂದ ಹೊಳ್ಳ, ವಯೋಲಿನ್ನಲ್ಲಿ ಮಧು ಮರಳಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಅಕಾಡೆಮಿಯ ಕಾರ್ಯದರ್ಶಿ ಪ್ರಜ್ವಲ್ ಹಾಜರಿದ್ದರು.

ಗಾನವಿ ಕಾರ್ಯಕ್ರಮ ನಿರೂಪಿಸಿದರು. ಅನನ್ಯ ಪಂಚಾಂಗ ಓದಿದರು. ಆದಿತ್ಯ ಪ್ರಾರ್ಥಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-126-1726868379

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.