ಸಿದ್ದಾಪುರ: ಜನಹಿತ ಸೇವಾ ಫೌಂಡೇಷನ್ ಶಿರಸಿ ಇವರ ಸಂಯೋಜನೆಯಲ್ಲಿ ಮೇ.24ರಂದು ರಾತ್ರಿ 8.30ರಿಂದ ಸಿದ್ದಾಪುರದ ಸಿದ್ಧಿವಿನಾಯಕ ಶಾಲಾ ಆವರಣದಲ್ಲಿ ಕೋಟಿ ಸಸ್ಯಪಾಲಕ ಸುರೇಶ ನಾಯ್ಕ ಹದಿನಾರನೇ ಮೈಲಿಕಲ್ಲು ಅವರಿಗೆ ಸನ್ಮಾನ ಹಾಗೂ ಪಂಜರ ಪಕ್ಷಿ ಯಕ್ಷಗಾನ ಆಯೋಜಿಸಲಾಗಿದೆ ಎಂದು ಸಂಘಟಕ ಲೋಕೇಶ ಹೆಗಡೆ ಹದಿನಾರನೇ ಮೈಲಿಕಲ್ಲು ತಿಳಿಸಿದರು.

ಪಟ್ಟಣದಲ್ಲಿ ಗುರುವಾರ ಮಾಹಿತಿ ನೀಡಿದ ಅವರು,’ ಪ್ರಮುಖರಾದ ಅನಂತಮೂರ್ತಿ ಹೆಗಡೆ ಶಿರಸಿ, ವಸಂತ ನಾಯ್ಕ ಮನಮನೆ, ತಿಮ್ಮಪ್ಪ ಎಂ.ಕೆ.ಹಿತ್ತಲಕೊಪ್ಪ, ರವೀಂದ್ರ ನಾಯ್ಕ ಶಿರಸಿ, ವೀರಭದ್ರ ನಾಯ್ಕ, ಸಿದ್ದಾಪುರ ಲೈನ್ಸ್ ಕ್ಲಬ್ ಅಧ್ಯಕ್ಷ ರಾಘವೇಂದ್ರ ಭಟ್ಟ ಸ್ವಸ್ತಿಕ್, ಉದ್ಯಮಿಗಳಾದ ಸತೀಶ ಹೆಗಡೆ ಬೈಲಳ್ಳಿ, ಯೋಗಾನಂದ ನಾಯ್ಕ, ಉಮಾಪತಿ ನಾಯ್ಕ, ಜಯರಾಮ ನಾಯ್ಕ, ಶಿರಸಿ ಮತ್ತು ಸಿದ್ದಾಪುರದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ನಂತರ ರಾತ್ರಿ 9ರಿಂದ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀಕ್ಷೇತ್ರ ಹಾಲಾಡಿ ಅವರಿಂದ ಪ್ರೊ.ಪವನ ಕಿರಣಕೆರೆ ವಿರಚಿತ ಪಂಜರ ಪಕ್ಷಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದ ಅಂಗವಾಗಿ ಮೇ .23 ಹಾಗೂ 24ರಂದು ಸಿದ್ದಾಪುರದಲ್ಲಿ ನಡೆಯಬೇಕಿದ್ದ ಖಾದಿ ಬಟ್ಟೆ ಉತ್ಸವವನ್ನು ಮಳೆಯ ಕಾರಣದಿಂದ ಮುಂದೂಡಲಾಗಿದೆ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-20-401757747

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.