ಸಿದ್ದಾಪುರ: ‘ಯಕ್ಷಗಾನ ಕಲೆ ಕೇವಲ ಮನರಂಜನೆಗೆ ಸೀಮಿತವಾದ ಕಲೆಯಲ್ಲ. ಮನರಂಜನೆಯ ಜೊತೆಗೆ ಅಗಾಧ ಜ್ಞಾನಭಂಡಾರ ಉಣಬಡಿಸುವ ಪರಮಾತ್ಮನಿಗೆ ಸಲ್ಲಿಸುವ ಕಲಾಸೇವೆ’ ಎಂದು ಉದ್ಯಮಿ ಅನಂತಮೂರ್ತಿ ಹೆಗಡೆ ಶಿರಸಿ ಹೇಳಿದರು.

ತಾಲ್ಲೂಕಿನ ದೊಡ್ಮನೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ದೊಡ್ಮನೆ ಯಕ್ಷೋತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಲಾಸಂಘಟನೆ ಸುಲಭ ಸಾಧ್ಯವಲ್ಲ. ಅದೊಂದು ಕ್ಲಿಷ್ಟಕರ ಕೆಲಸ. ದೇಶಕಂಡ ಅಪ್ರತಿಮ ಮುತ್ಸದ್ಧಿ ರಾಮಕೃಷ್ಣ ಹೆಗಡೆಯವರು ಜನಿಸಿದ ದೊಡ್ಮನೆ ಊರಿನಲ್ಲಿ ಯಕ್ಷೋತ್ಸವ ನಡೆಯುತ್ತಿರುವುದು ಶ್ಲಾಘನೀಯ’ ಎಂದರು.

ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಮಾತನಾಡಿ, ಯಕ್ಷಗಾನವು ನಮ್ಮ ಸಂಸ್ಕೃತಿಯ ಬೇರು. ಸಮಾಜಕ್ಕೆ ಪೂರಕವಾದುದನ್ನು ಯಕ್ಷಗಾನ ಕಲೆ ನೀಡುತ್ತದೆ’ ಎಂದರು.

ಯಕ್ಷಗಾನ ಕಲಾ ಅಕಾಡೆಮಿ ಸದಸ್ಯ ವಿದ್ಯಾಧರರಾವ್ ಜಲವಳ್ಳಿ, ತಾಲ್ಲೂಕು ಭಾರತ ಸೇವಾದಳದ ಅಧ್ಯಕ್ಷ ಕೆಕ್ಕಾರ ನಾಗರಾಜ ಭಟ್ಟ ಮಾತನಾಡಿದರು.

ಯಕ್ಷಗಾನ ಕಲಾರಂಗದ ಖ್ಯಾತ ಹಾಸ್ಯ ಕಲಾವಿದ ಶ್ರೀಧರ ಹೆಗಡೆ ಚಪ್ಪರಮನೆ ದಂಪತಿಗಳನ್ನು ಸನ್ಮಾನಿಸಲಾಯಿತು.

ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷ ಶಶಿಭೂಷಣ ಹೆಗಡೆ ಮಾತನಾಡಿದರು. ದರ್ಶನ ಹೆಗಡೆ, ಗೌರೀಶ ಹೆಗಡೆ, ಶ್ರೀಧರ ಭಟ್ಟ ಗಡಿಹಿತ್ಲು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-20-2087741224

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.