ಶಿರಸಿ: 70ರ ಇಳಿವಯಸ್ಸಿನಲ್ಲೂ ಮದ್ದಳೆ ವಾದನದಲ್ಲಿ ಮಂತ್ರಮುಗ್ಧಗೊಳಿಸುತ್ತಿರುವ ಯಕ್ಷಗಾನದ ಹಿರಿಯ ಮದ್ದಳೆ ಕಲಾವಿದ ಶಂಕರ ಭಾಗವತ ಯಲ್ಲಾಪುರ ದಂಪತಿಯನ್ನು ನಗರದಲ್ಲಿ ಶನಿವಾರ ಅದ್ದೂರಿಯಾಗಿ ಸನ್ಮಾನಿಸಲಾಯಿತು.

ನಗರದ ಪೊಲೀಸ್ ಮೈದಾನದಲ್ಲಿ ಜನಹಿತ ಸೇವಾ ಫೌಂಡೇಷನ್ ಹಾಗೂ ಇಕೊಕೇರ್ ಸಂಸ್ಥೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಯಕ್ಷಗಾನ ಪ್ರದರ್ಶನದ ಸಂದರ್ಭದಲ್ಲಿ ಈ ಗೌರವ ಸಮರ್ಪಿಸಲಾಯಿತು. ನಾದಶಂಕರ ಶಂಕರ ಭಾಗವತ ದಂಪತಿಗೆ ಶಾಲು, ಸ್ಮರಣಿಕೆ ಹಾಗೂ ₹21 ಸಾವಿರ ನಗದು ಒಳಗೊಂಡ ಹಮ್ಮಿಣಿ ನೀಡಿ ಗೌರವಿಸಲಾಯಿತು.

ನಿವೃತ್ತ ಪ್ರಾಚಾರ್ಯ ವಿದ್ವಾನ್ ನರಸಿಂಹ ಭಟ್, ಮಾರಿಕಾಂಬಾ ದೇವಾಲಯದ ಧರ್ಮದರ್ಶಿ ವತ್ಸಲಾ ಹೆಗಡೆ, ಸಾಮಾಜಿಕ ಕಾರ್ಯಕರ್ತ ಎಸ್.ಕೆ.ಭಾಗವತ ಹಾಗೂ ಇತರರು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಂಕರ ಭಾಗವತ, ತಮ್ಮ ಕಲಾಜೀವನದ ಹಾದಿಯನ್ನು ಸ್ಮರಿಸುತ್ತಾ, ಸುಸಂಸ್ಕೃತ ಯಕ್ಷಗಾನ ಕಲೆಯ ಬೆಳವಣಿಗೆಗೆ ಸಮಾಜದ ಸಹಕಾರ ಅಗತ್ಯ’ ಎಂದರು.

ಅಂಕೋಲಾ ತಾಲ್ಲೂಕಿನ ಕುಗ್ರಾಮದ ಬಡ ಕುಟುಂಬಕ್ಕೆ ಸಹಾಯ ಮಾಡುವ ಆಸರೆ ಕಾರ್ಯಕ್ರಮದ ಅಂಗವಾಗಿ ಈ ಯಕ್ಷಗಾನ ಆಯೋಜಿಸಲಾಗಿತ್ತು. ನಂತರ ಪೆರ್ಡೂರು ಮೇಳದ ಕಲಾವಿದರಿಂದ ಕೃಷ್ಣ–ಕುಚೇಲ ಮತ್ತು ಮಾಯಾ ಮೃಗಾವತಿ ಪ್ರಸಂಗಗಳು ಪ್ರದರ್ಶನಗೊಂಡವು. ಗಿರಿಧರ ಕಬ್ನಳ್ಳಿ ಸ್ವಾಗತಿಸಿ, ಸನ್ಮಾನ ಪತ್ರ ವಾಚಿಸಿದರು. ಲೋಕೇಶ ಹೆಗಡೆ ವಂದಿಸಿದರು. ಕಡೆಮನೆ ಮಹೇಶ ಭಟ್, ಜಗದೀಶ ನಾಯಕ ಇತರರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-20-1078694599

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.