ಶ್ರೀನಿವಾಸಪುರ: ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಮಂಗಳವಾರ ಈಶ ನಾಟ್ಯಕಲಾ ಅಕಾಡೆಮಿ ಹಾಗೂ ಈಶ ನಾಟ್ಯಕಲಾ ಸೇವಾ ಟ್ರಸ್ಟ್ನಿಂದ ಸಂಸ್ಥೆಯ ವಾರ್ಷಿಕೋತ್ಸವ ಹಾಗೂ ಭರತನಾಟ್ಯ ಪ್ರದರ್ಶನ ಏರ್ಪಡಿಸಲಾಗಿತ್ತು.

ವೈದ್ಯಾಧಿಕಾರಿ ಡಾ.ವೈ.ವಿ.ವೆಂಕಟಾಚಲ ಮಾತನಾಡಿ, ‘ಪೋಷಕರು ತಮ್ಮ ಮಕ್ಕಳನ್ನು ನೃತ್ಯ, ಸಂಗೀತ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಬೇಕು. ಅವರ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ ಕಾಪಾಡಲು ಸಹಕರಿಸಬೇಕು. ಈ ಚಟುವಟಿಕೆಗಳು ಮಕ್ಕಳಲ್ಲಿ ಓದಿನ ಹೊರೆಯಿಂದ ಉಂಟಾಗಬಹುದಾದ ಬೇಸರವನ್ನು ಕಳೆಯಲು ನೆರವಾಗುತ್ತವೆ’ ಎಂದು ಹೇಳಿದರು.

ಜಿಲ್ಲಾ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಮಾಯಾ ಬಾಲಚಂದ್ರ, ‘ಭರತನಾಟ್ಯ ಭಾರತದ ಕೊಡುಗೆ. ಅತ್ಯಂತ ಪ್ರಾಚೀನ ಶಾಸ್ತ್ರೀಯ ಕಲೆಯಾದ ಭರತನಾಟ್ಯ ಸಾವಿರಾರು ವರ್ಷಗಳಿಂದ ಉಳಿದು ಬಂದಿದೆ. ಅದು ನೃತ್ಯಕ್ಕೆ ಇರುವ ಶಕ್ತಿಯ ಧ್ಯೋತಕ ’ ಎಂದರು.

ಅಕಾಡೆಮಿ ವಿದ್ಯಾರ್ಥಿಗಳು ಭರತನಾಟ್ಯ ಪ್ರದರ್ಶನ ನೀಡಿದರು. ಗಾಯಕ ವೆಂಕಟೇಶ್ ಕನ್ನಡ ಗೀತೆ ಹಾಡಿದರು. ಸಂಗೀತ ಶಿಕ್ಷಕಿ ಪ್ರತೀಶ ನರೇಶ್ ಅವರನ್ನು ಸನ್ಮಾನಿಸಿಸಲಾಯಿತು.

ಸರ್ಕಾರಿ ಪ್ರಥಮದರ್ಜೆ ಕಾಲೇಜಿ ಕನ್ನಡ ವಿಭಾಗದ ಮುಖ್ಯಸ್ಥ ಎಚ್.ಮೃತ್ಯುಂಜಯ, ಸಾಹಿತಿ ಆರ್.ಚೌಡರೆಡ್ಡಿ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಶಿವಾನಂದ, ವಿ.ನಿಶಾಂತ್, ವೆಂಕಟರೆಡ್ಡಿ, ನೃತ್ಯ ಶಿಕ್ಷಕಿ ಪ್ರತೀಶ, ನರೇಶ್, ರೂಪಾ, ವೆಂಕಟೇಶ್, ನಾರಾಯಸ್ವಾಮಿ, ಎನ್.ಮಂಜುನಾಥ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-18-300070432

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.