ತ್ಯಾಗರ್ತಿ: ‘ಕಲಾ ಪ್ರೇಕ್ಷಕರಿಂದಲೇ ಕಲಾವಿದರ ಉಳಿವು’ ಎಂದು ಕಲಾವಿದ ಮಂಕಿ ಈಶ್ವರ ನಾಯ್ಕ ಹೇಳಿದರು.

ಆನಂದಪುರ ಯಕ್ಷ ಮಿತ್ರ ಬಳಗದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ಪುರಾಣ ಪುಣ್ಯ ಕಥೆಗಳನ್ನು ಯಕ್ಷಗಾನದ ಮುಖಾಂತರ ಪ್ರದರ್ಶಿಸುವ ಹಾಗೂ ಸಾಮಾಜಿಕ ಪರಿಸ್ಥಿತಿಗಳನ್ನು ಜನರಿಗೆ ಮನಮುಟ್ಟುವಂತೆ ತಿಳಿಸಿ ಸಮಾಜವನ್ನು ತಿದ್ದುವ ಕೆಲಸವನ್ನು ಕಲಾವಿದರು ಮಾಡುತ್ತಿದ್ದಾರೆ. ಕಲಾವಿದರ ಸಂಪತ್ತೇ ಪ್ರೇಕ್ಷಕರ ಅಭಿಮಾನ’ ಎಂದರು.

ಸಾಲಿಗ್ರಾಮ ಮೇಳದ ‘ವಿಷ್ಣುವರ್ಧನ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನದ ರಂಗ ಸಜ್ಜಿಕೆಯಲ್ಲಿ ಪ್ರಸಂಗಕರ್ತ ಶಿವಪ್ರಸಾದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಲಾ ಪೋಷಕರಾದ ಶಿರವಂತೆ ರಘುಪತಿ ಭಟ್, ಯಕ್ಷಮಿತ್ರ ಬಳಗದ ಆಚಾರ್ಯ ರಾಘು, ಕೊಲ್ಲಪ್ಪ ಗೌಡ ಜೇಡಿಸರ, ರಾಘವೇಂದ್ರ ಹೊಸೂರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-42-1419462417

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.