ಅವರು ನಿರ್ವಹಿಸಿದ ಕೌರವ ಪಾತ್ರ ವಿಶೇಷ ಖ್ಯಾತಿ ಪಡೆದಿತ್ತು. ಪಾತ್ರದ ಆಳವನ್ನು ಅರಿಯಲು ರನ್ನನ ‘ಗದಾಯುದ್ಧ’ವನ್ನು ಓದುತ್ತಿದ್ದರು. ಅಭಿನಯ ದರ್ಪಣ, ನಾಟ್ಯಶಾಸ್ತ್ರಗಳನ್ನು ಅಧ್ಯಯನ ಮಾಡಿ ತಮ್ಮ ಕಲೆಯನ್ನು ಗಾಢಗೊಳಿಸಿದರು. ಕಾವ್ಯಾಭ್ಯಾಸ, ಪುರಾಣಜ್ಞಾನದಿಂದ ಅವರ ಭಾಷಾ ಅಭಿವ್ಯಕ್ತಿ ಪ್ರೌಢವಾಗಿತ್ತು.

ಋಷಿವೇಷದಿಂದ ಬಣ್ಣದ ವೇಷದವರೆಗೆ ಎಲ್ಲ ರೀತಿಯ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ ಅವರು, ಪ್ರಧಾನ ಪಾತ್ರಗಳಷ್ಟೇ ಅಲ್ಲದೆ, ಸಣ್ಣ ಪಾತ್ರಗಳನ್ನೂ ನಿರ್ವಹಿಸಿ ಪ್ರಸಂಗದ ಒಟ್ಟಂದವನ್ನು ಹೆಚ್ಚಿಸಲು ಆಸರೆಯಾಗುತ್ತಿದ್ದರುಞ . ಮೇಳದ ನಿರ್ವಹಣೆಯಲ್ಲೂ, ಪ್ರಸಂಗದ ಸಂಕಷ್ಟ ಕ್ಷಣಗಳಲ್ಲೂ ಆಪತ್ತನ್ನು ನಿಭಾಯಿಸುವ ವಿಶ್ವಾಸಾರ್ಹ ವ್ಯಕ್ತಿ.

ಹಣಕಾಸಿನ ಕೊರತೆ ಇದ್ದರೂ, ಪತ್ನಿ ಸಾವಿತ್ರಿ ಮತ್ತು ಮೂವರು ಮಕ್ಕಳೊಂದಿಗೆ ಅವರ ಕುಟುಂಬ ಜೀವನ ಪ್ರೀತಿಯಿಂದ ಕೂಡಿತ್ತು. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಸಂಪಾಜೆ ಯಕ್ಷೋತ್ಸವ ಪ್ರಶಸ್ತಿ, ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಅವರನ್ನು ಅಲಂಕರಿಸಿವೆ.

ನಾಲ್ಕು ತಲೆಮಾರುಗಳ ವೃತ್ತಿಪರ ಮತ್ತು ಹವ್ಯಾಸಿ ಕಲಾವಿದರೊಂದಿಗೆ ಬೆರೆತು ಕುಣಿದ ಅವರು, ಕಲಾರಸಿಕರನ್ನು ರೂಪಿಸಿ, ರಸಾನುಭವದಲ್ಲಿ ಮೀಯಿಸಿದ ಅದ್ಭುತ ಕಲಾವಿದ. ಅವರ ವೇಷದಂತೆ ಯಕ್ಷಗಾನದ ಗಾಂಭೀರ್ಯ ಮತ್ತು ಔನ್ನತ್ಯದ ಸಂಕೇತವಾಗಿ ಭಾರತೀಯ ಪಾರಂಪರಿಕ ರಂಗಭೂಮಿಯಲ್ಲಿ ಶ್ರೇಷ್ಠ ಕಲಾವಿದರ ಸಾಲಿನಲ್ಲಿ ಗೋವಿಂದ ಭಟ್ಟರು ನಿತ್ಯಸ್ಮರಣೀಯರಾಗಿಯೇ ಉಳಿಯುವವರು.v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-51-1677483953

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.