ಪ್ರಧಾನಮಂತ್ರಿಯೂ ಹರಟೆಗೆ ಸಿಗುತ್ತಾರೆಯೇ ಎಂದು ಒಮ್ಮೆ ಎಲ್ಲರಿಗೂ ಆಶ್ಚರ್ಯವಾಗಬಹುದು. ಆದರೆ ಶ್ರೀಮಾನ್ ಕಿ.ತಾ.ಪತಿ ಅವರು ‘ನಿಂಬೆಹಣ್ಣಿನಾಣೆಗೂ ಇದು ಸತ್ಯ’ ಎಂದು ಹೇಳುತ್ತಾರೆ! ಪ್ರಧಾನಿಯ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ವಿಶೇಷ ಅತಿಥಿಯಾಗಿ ಆಹ್ವಾನಿಸಲ್ಪಟ್ಟಿದ್ದವರಲ್ಲಿ ಕಿ.ತಾ.ಪತಿ ತುಂಬಾ ಸ್ಪೆಷಲ್ಲು. ಪ್ರಧಾನಿಗೆ ಈ ಭಕ್ತನ ಮೇಲೆ ಸಿಕ್ಕಾಪಟ್ಟೆ ಅಭಿಮಾನ, ಪ್ರೀತಿ. ಆ ದಿವಸ ಸಮಾರಂಭ ಮುಗಿಸಿ ಕಿ.ತಾ. ಪತಿ, ಪ್ರಧಾನಿ ನಿವಾಸದಲ್ಲೇ ಉಳಕೊಂಡಿದ್ದರಂತೆ. ಹಾಗೆ ಅವರಿಬ್ಬರೂ ಅಂದು ರಾತ್ರಿ ಹರಟೆಗೆ ಕೂತಿದ್ದರ ಬಗ್ಗೆ ಮತ್ತು ಅಲ್ಲಿ ನಡೆದ ಮಾತುಕತೆಯ ವಿವರಗಳನ್ನು ಕಿ.ತಾ.ಪತಿ ಬಾಯಲ್ಲೇ ಕೇಳಿ:

‘ಈ ಬಾರಿಯಾದರೂ ನಿಮ್ಮ ಅಮ್ಮ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಇರುತ್ತಾರೆಂದು ನಿರೀಕ್ಷಿಸಿದ್ದೆ.’

‘ನನ್ನ ತಾಯಿ ಬರಲೊಪ್ಪಿದ್ದರು. ಆದರೆ ಒಂದು ಕಂಡೀಷನ್ ಹಾಕಿದ್ದರು. ನಾನು ಪ್ರಮಾಣ ವಚನ ಸ್ವೀಕರಿಸುವುದನ್ನು ತುಂಬಾ ಹತ್ತಿರದಿಂದ, ಅಂದರೆ ಮೂರಡಿ ದೂರದಿಂದ ನೋಡಬೇಕೂಂತ! ಅಷ್ಟು ಹತ್ತಿರದಿಂದ ನೋಡಬೇಕಿದ್ದರೆ ಮನೆಯಲ್ಲಿ ಟಿ.ವಿಯಲ್ಲೇ ನೋಡು ಎಂದು ಹೇಳಿದ್ದೆ’ ಎಂದು ಪ್ರಧಾನಿ ನಗುತ್ತಾ ಹೇಳಿದರು.

‘ನೀವು ಈ ಬಾರಿ ಹಿರಿಯ ರಾಜಕಾರಣಿಗಳ ಕಾಲಿಗೆರಗಿ ಗೌರವ ಸಲ್ಲಿಸಿದ್ದು ನೋಡಿದೆ’ ಎಂದು ಏನೋ ಹೇಳಲು ಹೊರಟೆ. ಪ್ರಧಾನಿ ಕೂಡಲೇ ‘ಟಿಕೆಟ್ ಕೊಟ್ಟಿಲ್ಲ… ಈಗ ಆಶೀರ್ವಾದ ಕೇಳ್ತಾನೆ ಎಂದು ಇಬ್ಬರೂ ಮುನುಮುನು ಮಾತನಾಡಿಕೊಂಡರು ಗೊತ್ತಾ?’ ಎಂದು ಹೇಳಿದರು.

‘2.0 ಮುಗಿಯುವಾಗ ನಿಮಗೂ 70 ದಾಟಿ, ಮೂಲೆಗುಂಪಾಗುವ ವಯಸ್ಸಾಗಿರುತ್ತೆ’ ಎಂದು, ನಿವೃತ್ತಿ ಬಗ್ಗೆ ಏನನ್ನುತ್ತಾರೋ ಎಂದು ಕಾದೆ. ‘ನಿಜ ಹೇಳಬೇಕೆಂದರೆ ಚುನಾವಣೆ ಭಾಷಣಗಳ ಕೊರೆತ ಮುಗಿಸಿ, ಕೇದರನಾಥ್ಗೆ ಹೋಗಿ, ಗುಹೆಯಲ್ಲಿ ಧ್ಯಾನಕ್ಕೆ ಕುಳಿತಾಗ ಅದೇನೋ ವಿಚಿತ್ರ ಶಾಂತಿ ಸಿಕ್ಕಿತ್ತು. ಅಲ್ಲಿಂದ ಹೊರಬರಬಾರದೆಂದೇ ನಿರ್ಧರಿಸಿದ್ದೆ. ನಮ್ಮ ಪಕ್ಷದ ಅಧ್ಯಕ್ಷರು ಪಟ್ಟಾಭಿಷೇಕಕ್ಕೆ ಟೈಮಾಯಿತು ಎಂದು ನನ್ನನ್ನು ಎಳ್ಕೊಂಡು ರಾಜಧಾನಿಗೆ ಕರೆ ತಂದಿದ್ದರು’. ಪ್ರಧಾನಿಯವರ ಮಾತು ಕೇಳಿ ಪುಸಕ್ಕನೆ ನಕ್ಕೆ.

‘ನಿಮ್ಮ ಈ ಗೆಲುವಿನ ಜೋಷ್ ಅನ್ನು ಸೈನಿಕರಿಗೆ ಅರ್ಪಿಸುವ ಯೋಚನೆಯಿತ್ತಾ?’ ಎಂದು ನಾನು ಕೇಳಿದೆ. ಅವರು ಹೇಳಿದರು– ‘ಸೈನಿಕರಿಗಿಂತಲೂ ಮಹಾಕಟ್ ಬಂಧನ್ಗೆ ಅರ್ಪಿಸಬೇಕೆಂದಿದ್ದೆ. ರಾಯಲ್ ಗಾಂಧಿ ಬೇಸರ ಪಡ್ತಾರೇಂತ ಯಾರಿಗೂ ಅರ್ಪಿಸಲಿಲ್ಲ’.

‘ಅಚ್ಛೇ ದಿನಗಳನ್ನು ಮುಂದಿನ ಐದು ವರ್ಷಗಳಲ್ಲಾದರೂ ನಿರೀಕ್ಷಿಸಬಹುದೇ?’ ಎಂದು ನಾನು ಕುಟುಕಿದೆ. ಪ್ರಧಾನಿ ಕೂಲಾಗಿ ಹೇಳಿದರು–
‘ಕಿ.ತಾ.ಪತಿಯವರೇ, ಈ ಬಾರಿ ಮತದಾರರು ಅಚ್ಛೇ ದಿನ್ಗಾಗಿ ನಮ್ಮನ್ನು ಗೆಲ್ಲಿಸಿದ್ದು ಅಂದ್ಕೊಂಡಿರಾ? ಅವರಿಗೆ ಈಗ ಬೇಕಾಗಿರೋದು ಬಹುತ್ ಅಚ್ಛೇ ದಿನ್! ಅದನ್ನು ನಾವು ಖಂಡಿತ ನೀಡಲು ಬದ್ಧರಾಗಿದ್ದೇವೆ’.

‘ಓಹ್! ಎಷ್ಟೆಂದರೂ ಇದು ನಿಮ್ಮ 2.0 ವರ್ಷನ್ ಸರ್ಕಾರ ಅಲ್ಲವೇ? ಇನ್ನು ಮುಂದೆ ಎಲ್ಲಾ ಡಬಲ್ ಧಮಾಕಾ’! ಅಂದೆ. ಅದನ್ನೇ ಅವರು ಹೇಳಲು ಹೊರಟರು. ‘ಹೌದು, ಸಬ್ ಕಾ ವಿಕಾಸ್ ಜತೆ ವಿಶ್ವಾಸ್ ಫ್ರೀ! ಸ್ವಚ್ಛ ದೇಶದ ಬದಲು ಸೂಪರ್ ಸ್ವಚ್ಛ ದೇಶ. ಬೇಟಿ- ಬೇಟ ಬಚಾವೊ, ಬೇಟಿ– ಬೇಟ ಪಢಾವೊ. ಮ್ಯಾಕ್ಸಿಮಮ್ ಗವರ್ನ್ಮೆಂಟ್, ಅನ್ಲಿಮಿಟೆಡ್ ಗವರ್ನೆನ್ಸ್… ಹೀಗೆ’.

‘ಚುನಾವಣೆಯಲ್ಲಿ ನಿಮ್ಮ ಪಕ್ಷದ ಮುಷ್ಕಿಲ್ ಹೀ ನಹೀ, ನಾ ಮುಮ್ಕಿನ್ ಹೈ– ಸ್ಲೋಗನ್ ಕೂಡಾ ನಿಮ್ಮ ಜಯಭೇರಿಗೆ ಕಾರಣವಂತೆ ಹೌದಾ?’ ಎಂದು ಕುತೂಹಲದಿಂದ ಕೇಳಿದೆ. ಪ್ರಧಾನಿಯವರು ಜೋರಾಗಿ ನಕ್ಕು ಹೇಳಿದರು. ‘ಅದೂ ನಿಜಾನೇ… ಆದರೆ ನೀವು ಹೇಳಿದ್ದು ಡಾನ್ ಸಿನಿಮಾದ ಡೈಲಾಗ್. ನಮ್ಮ ಸ್ಲೋಗನ್- ನ ನಮ್ಕಿನ್ ಅಬ್ ಮುಮ್ಕಿನ್ ಹೈ’.

‘ಸಾರ್, ರಾಜಕೀಯ ಲೆಕ್ಕಾಚಾರದಲ್ಲಿ ಚತುರರಾಗಿರುವ ಪಕ್ಷದ ಅಧ್ಯಕ್ಷರಿಗೆ ಗೃಹ ಖಾತೆ ಕೊಡುವುದಕ್ಕಿಂತ ವಿತ್ತ ಸಚಿವ ಸ್ಥಾನ ಕೊಟ್ಟಿದ್ದಿದ್ದರೆ ಚೆನ್ನಾಗಿತ್ತಲ್ಲವೇ?’ ಎಂದು ಅಭಿಪ್ರಾಯ ಹೇಳಿದೆ. ‘ಇಲ್ಲ, ಅವರಿಗೆ ಗೃಹ ಖಾತೆಯಲ್ಲಿ ಇದ್ದುಕೊಂಡು ರಾಜಕೀಯ ಲೆಕ್ಕಾಚಾರ ಹಾಕುವ ಆಸೆಯಂತೆ. ಮಾಡಲಿ ಬಿಡಿ’ ಪ್ರಧಾನಿ ಸಮಾಜಾಯಿಷಿ ನೀಡಿದರು.

‘ಅಲ್ಲಾರೀ, ನೀವು ಇವತ್ತಿನ ಪ್ರಮಾಣ ಸ್ವೀಕಾರ ಸಮಾರಂಭ ಹೇಗಾಯಿತೆಂದು ಹೇಳಲೇ ಇಲ್ಲವಲ್ಲ’ ಎಂದು ಪ್ರಧಾನಿ ನನ್ನ ಅನಿಸಿಕೆ ಗಾಗಿ ಕಾದರು. ನಾನು ಹೇಳಿದೆ ‘ಇಂತಹ ಸಮಾರಂಭ ಭಾರತದ ಇತಿಹಾಸದಲ್ಲೇ ನಡೆ ದಿಲ್ಲ ಸಾರ್. ಆದರೆ ಎಲ್ಲಾ ಸಚಿವರು ಈಶ್ವರನ ಬದಲು ತಮ್ಮ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುತ್ತಿದ್ದರೆ ಇನ್ನೂ ದೊಡ್ಡ ದಾಖಲೆಯಾಗಿರುತ್ತಿತ್ತು’!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.