ಆತನೇನೂ ಸುರಸುಂದರಾಂಗನಲ್ಲ, ಆದರೆ ಮೃದು ಹೃದಯಿಯಷ್ಟೇ ಅಲ್ಲ, ಅಕ್ಷರದೊಂದಿಗೆ ಚೆಲ್ಲಾಟವಾಡಬಲ್ಲ ಕವಿವರೇಣ್ಯ. ಮಾತಿನಲ್ಲಿ ಮೋಡಿ ಹಾಕಬಲ್ಲ ಚತುರ. ಆಕೆಯೋ ಕಲ್ಲನ್ನೂ ಕರಗಿಸಬಲ್ಲ ತುಂಬು ಜವ್ವನೆ. ಸಾಲದ್ದಕ್ಕೆ ರಾಜಕುವರಿ. ಅದು ಹೇಗೆ ಅವರಿಬ್ಬರು ಆಕರ್ಷಿತರಾದರೋ, ಅವಳೇ ಮೇಲೆ ಬಿದ್ದಳೋ ಅಥವಾ ಈತ ಬೆನ್ನು ಬಿದ್ದನೋ... ಅಂತೂ ಮುಳ್ಳು ಸರಗಿನ ಕಥೆಯಿದ್ದಂತೆ ಪರಿಣಾಮ ಒಂದೆ. ಕಳ್ಳಬೆಕ್ಕಿನಂತೆ ಮೆಲ್ಲಮೆಲ್ಲನೆ ಹೆಜ್ಜೆಯಿಟ್ಟು ಸಂಧಿಸಿದ್ದು ಒಳಮನೆಯಲ್ಲಿ. ಮನಸುಗಳು ಬೆಸೆದಾದ ಮೇಲೆ ದೇಹ ಎಲ್ಲಿ ಮಾತು ಕೇಳೀತು? ಬಿಸಿಯುಸಿರ ಕೊಡುಕೊಳ್ಳುವಿಕೆಗೆ ಸಾತ್ ನೀಡಿದ್ದು ದಾಹಾಗ್ನಿ!

ಕೆನ್ನೀರು ಚೆಲ್ಲಿದಂಥ ಆಕೆಯ ಎಳೆಯ ದೇಹ, ಆ ಕ್ಷಣ ನಾಚಿಕೆಯಿಂದ ಇನ್ನಷ್ಟು ಕೆಂಪಾಗಿರಲಿಕ್ಕೂ ಸಾಕು. ಅದರೊಂದಿಗೆ ಕ್ಷಣಕ್ಷಣಕ್ಕೂ ಏರಿದ ಮೈಬಿಸಿಗೆ ಇನ್ನಷ್ಟು ಕಾದು ಕೆಂಡವಾಗದೇ ಉಳಿದೀತೆ? ಕರಗಿಹೋಗಲು ಇಷ್ಟು ಸಾಕು. ಬೆವರು ಕಿತ್ತೊಗೆದು, ನೀರಾಡಿದ ದೇಹಗಳು ಬೇರ್ಪಟ್ಟದ್ದು ಅದೆಷ್ಟೋ ಸಮಯದವರೆಗೇ. ಜಗತ್ತಿನ ಇರುವಿಕೆಯನ್ನೇ ಮರೆತು ಒಂದಾಗಿದ್ದ ದೇಹ-ಮನಸ್ಸುಗಳಿಗೆ ಹೊರಗಿನ ವ್ಯಾಪಾರದ ಕುರಿತು ಆವರಿಸಿದ್ದ ವಿಸ್ಮೃತಿ.

ವಾಸ್ತವಕ್ಕೆ ಬರುವ ಹೊತ್ತಿಗೆ ವಸ್ತುಸ್ಥಿತಿ ಅಂದು ಕೊಂಡಂತಿರಲಿಲ್ಲ. ಬೆಕ್ಕು ಕಣ್ಣುಮುಚ್ಚಿ ಕುಡಿದ ಹಾಲಿನ ಕಲೆ ಊರೆಲ್ಲ ಚೆಲ್ಲಾಡಿ ಹೋಗಿತ್ತು. ರಾಜನವರೆಗೂ ಸುದ್ದಿ ಹೋಗಿಮುಟ್ಟಿತ್ತು. ಕೆಂಡಾಮಂಡಲವಾಗುವ ಸರದಿ ಈಗ ರಾಜನದ್ದು; ಆದರೆ ಕೋಪದಿಂದ. ಹಿಂದೆಮುಂದೆ ಯೋಚಿಸದೇ ಹೇಳಿಬಿಟ್ಟ ‘ಹಿಡಿಯಿರಿ ಆತನನ್ನು, ನೂಕಿ ಸೆರೆಮನೆಗೆ, ಅರಮನೆಯಲ್ಲೇ ಸುರತಕ್ಕೆಳೆದ ಸೊಕ್ಕಿಗೆ ಮರಣದಂಡನೆಯೇ ತಕ್ಕ ಶಾಸ್ತಿ’ ಮುಂದಿನದೆಲ್ಲವೂ ನಿರೀಕ್ಷಿತ. ಸಾವಿನ ಕ್ಷಣಗಳಲ್ಲೂ ಆತನಿಗೆ, ಸುರತದಲ್ಲಿ ತಾವು ಕಳೆದ ಕ್ಷಣಗಳದ್ದೇ ಸ್ಮರಣೆ.

ಎಷ್ಟೆಂದರೂ ಕವಿಯಲ್ಲವೇ? ಕಲ್ಪನೆಯಲ್ಲೇ ಕಾವ್ಯಕನ್ನಿಕೆಯನ್ನು ಸೃಷ್ಟಿಬಲ್ಲವನ ಮನದಲ್ಲಿ ಮೂರ್ತರೂಪ ತಾಳಿತ್ತು; ಆ ಬೆತ್ತಲುಬೊಂಬೆಯ ಸೌಂದರ್ಯ. ಕಾವ್ಯದ ವಸ್ತು ಅದೇ ಆಯಿತು. ‘ಅದ್ಯಾಪಿ ತಂ (ಎಂದೆಂದಿಗೂ)’ ಎನ್ನುತ್ತಲೇ ಮರುಳನಂತೆ ‘ಮರೆಯಲಾರೆನು’ ಎಂದು ಹಲುಬಿದ್ದೇ ಕಾವ್ಯಮಾಲೆಯಾಯಿತು. ಹಾಗೆ ಅಕ್ಷರರೂಪ ಪಡೆದ ಕಳ್ಳಬೆಕ್ಕಿನ ಸಮ್ಮಿಲನವೇ ಬಿಲ್ಹಣನ ‘ಚೌರೀ ಸುರತ ಪಂಚಾಶಿಕಾ’ ಎಂದು ಜನಪ್ರಿಯವಾಯಿತು. ಚೌರೀ-ಕಳ್ಳತನದಿಂದ ನಡೆಸಿದ, ಸುರತ-ರತಿಕ್ರೀಡೆ, ಪಂಚಾಶಿಕಾ- ಅದರ ಕುರಿತಾದ ಐವತ್ತು ಎಂಬುದು ಕೃತಿಯ ಹೆಸರಿನ ಅರ್ಥ. ಅರೆಕ್ಷಣದ ಸುಖ ಐವತ್ತು ಚರಣದ ಕಾವ್ಯವಾಗಬಲ್ಲುದಾದರೆ, ಅವರು ಇನ್ನಷ್ಟು ದಿನ ಕೂಡಿದ್ದರೆ... ನಿಮ್ಮ ಕಲ್ಪನೆಗೆ ಬಿಟ್ಟದ್ದು.

ಅದ್ಯಾಪಿ ತಂ ಪ್ರಣಯಿನಿಂ, ಮೃಗ-ಶಾಬಕಾಕ್ಷೀಂ,

ಪೀಯೂಷ-ವರ್ಣ-ಕುಚ-ಕುಂಭ-ಯುಗಂ ವಹನ್ತೀಮ್

ಪಶ್ಯಾಮಿ ಅಹಂ ಯದಿ ಪುರ್ನ ದಿವಸಾವಸಾನೇ,

ಸ್ವರ್ಗ-ಅಪವರ್ಗ-ವರರಾಜ್ಯ-ಸುಖಂ ತ್ಯಜಾಮಿ॥

ಆಕೆಯದ್ದು, ಜಿಂಕೆ ಮರಿಯ ಕಣ್ಣುಗಳಂತೆ. ಆಕೆಯೆದೆಯೆಂದರೆ ಹಾಲು ಬಣ್ಣದ ಜೋಡು ಕೊಡಗಳಂತೆ. ಒಲವಂತೆ, ಬಲವಂತೆ. ಸ್ವರ್ಗ-ನರಕ- ಪಾತಾಳಗಳೆಲ್ಲವೂ ಬೇರೆ ಇನ್ನಿಲ್ಲ (ಯಾವ್ಯಾವ ಕ್ಷಣ ಯಾವುದರ ಅನುಭವ ಎಂಬುದನ್ನು ಕವಿಯನ್ನೇ ಕೇಳಬೇಕು). ಎಲ್ಲವೂ ಅವಳದೇ ಸಾನ್ನಿಧ್ಯದಲ್ಲಿ ಕಂಡವನಿಗೆ ಅವೆಲ್ಲವನ್ನು ಮರೆತು ಬಾಳಲು ಹೇಗೆ ಸಾಧ್ಯ? ‘ಮತ್ತೆ ಬರುವೆಯಾ!, ಆ ಕ್ಷಣಗಳ ಮರಳಿ ತರುವೆಯಾ’ ಎಂದು ಹಲುಬುತ್ತಾನೆ ಕವಿ.

ಬಿಲ್ಹಣನ ಸುರತ ಚೌರಿ ಸ್ವಾನುಭವವೇ, ಕಲ್ಪನಾ ವಿಲಾಸವೆ!? ಎಂಬ ಚರ್ಚೆ ಸಾಕಷ್ಟು ಹರಿವನ್ನು ಪಡೆದಿದೆ. ‘ಕೇವಲ ಕಲ್ಪನೆ ಇಷ್ಟೊಂದು ‘ಆಳ’ವಾಗಿರಲು ಸಾಧ್ಯವೇ ಇಲ್ಲ. ಚೌರಿ ಸುರತ ಪಂಚಾಶಿಕಾ ಖಂಡಿತವಾಗಿಯೂ ಆತನದೇ ಅನುಭವವಾಗಿರಬೇಕು, ಅದರಲ್ಲಿ ಬರುವ ರಾಜಕುವರಿಯೊಂದಿಗೆ ರಮಿಸುವ ಕವಿ, ಸ್ವತಃ ಬಿಲ್ಹಣನೇ ಆಗಿರಬೇಕು’ ಎಂದು ವಾದಿಸುವವರು ಸಾಕಷ್ಟು ಜನರಿದ್ದಾರೆ. ಅದಕ್ಕೆ ಸರಿಯಾಗಿ ಬಿಲ್ಹಣ ಸಹ ರಾಜಾಶ್ರಯ ಪಡೆದ ಕವಿ. ವಿಕ್ರಮಾದಿತ್ಯನಿಗೂ ಸುಂದರ ಕುವರಿಯಿದ್ದು, ಒಂದಷ್ಟು ಕಾಲ ಕವಿ ವೈಮನಸ್ಯದಿಂದ ರಾಜಾಶ್ರಯ ತೊರೆದು ದೂರಾದ ಬಗ್ಗೆ ಸ್ವತಃ ಆತ್ಮಕಥೆ ‘ಬಿಲ್ಹಣ ಚರಿತದಲ್ಲಿ’ ಪ್ರಸ್ತಾಪಿಸುತ್ತಾನೆ.

‘ಇಲ್ಲಿಲ್ಲ, ಕವಿಯಾದವನಿಗೆ ಎಲ್ಲವೂ ಅನುಭವವೇ ಆಗಿರಬೇಕೆಂದೇನಿಲ್ಲ. ಆತನದು ವ್ಯಾಪಕ ದೃಷ್ಟಿ. ಸೂಕ್ಷ್ಮಾತಿಸೂಕ್ಷ್ಮ ದೃಷ್ಟಿಕೋನದಲ್ಲಿ ಕವಿ ಸಮಾಜವನ್ನು ಗಮನಿಸುತ್ತಾನೆ. ಹೀಗಾಗಿ ಬಿಲ್ಹಣನ ರಚನೆ ಆತನ ಕಲ್ಪನಾ ಸಾಮರ್ಥ್ಯಕ್ಕೊಂದು ಸಾಕ್ಷಿ’ ಎಂಬ ಪ್ರತಿಪಾದನೆಯೂ ಇದೆ.

ಕಾಶ್ಮೀರದ ಮಹಿಲಾಪಟ್ಟಣದ ರಾಜ ವೀರಸಿಂಹನ ಮಗಳು ಚಂದ್ರಲೇಖೆಯ ಬದುಕಿನ ಘಟನೆಯನ್ನು ಬಿಲ್ಹಣ ಚಿತ್ರಿಸಿದ್ದಾನೆ. ಆಕೆಯೇ ಕಾವ್ಯದ ನಾಯಿಕೆ ಎಂಬ ವಾದವೂ ಮಂಡನೆಯಾಗಿದೆ. ಹಾಗೆಯೇ ಪಾಂಚಾಲದ ರಾಜ ಮದನಾಭಿರಾಮನ ಮಗಳು ಯಾಮಿನೀ ಎಂಬವವಳೇ ಕವಿ ಕದ್ದು ಪ್ರಣಯಿಸಿದಾಕೆ ಎಂಬ ಊಹೆಯಿದೆ.

ಹದಿನೆಂಟನೇ ಶತಮಾನದ ಭಾಷ್ಯಕಾರರ ಪ್ರಕಾರ ಕಾವ್ಯಕನ್ನಿಕೆಯ ಹೆಸರು ’ವಿದ್ಯಾ’ ಮತ್ತು ಕವಿಯ ಹೆಸರು ’ಚೌರ’! ಏನೇ ಇರಲಿ, ರಾಜ ವಂಶಜರ ಹಾಗೂ ಆಸ್ಥಾನಿಕರ ಕಳ್ಳ ಪ್ರಣಯ ಎಷ್ಟು ಸಾಮಾನ್ಯವಾಗಿತ್ತು! ಆ ಕಾಲ ದಲ್ಲಿ(ಈ ಕಾಲದಲ್ಲೂ) ಎಂಬುದಕ್ಕೆ ಇದೆಲ್ಲವೂ ಉದಾಹರಣೆ. ಏನೋ, ಆದರೆ ಸಂಸ್ಕೃತ ಸಾಹಿತ್ಯ ಜಗತ್ತಿನಲ್ಲಿ ಅಮರು ಕವಿ, ಭರ್ತೃಹರಿ, ಕಾಳೀದಾಸ, ಜಯದೇವ, ಜಗನ್ನಾಥ ಪಂಡಿತರುಗಳಿಗೆ ಕಡಿಮೆ ಇಲ್ಲದ ಶೃಂಗಾರ ಕವಿ ನಮ್ಮ ಬಿಲ್ಹಣ.

ಅದ್ಯಾಪಿ ತನ್ ಮನಸಿ ಸಂ-ಪರಿವರ್ತತೇ ಮೇ,

ರಾತ್ರೌ ಮಯಿ ಕ್ಷುತವತೀ ಕ್ಷಿತಿಪಾಲ-ಪುತ್ರ್ಯಾ

‘ಜೀವ’-ಇತಿ ಮಂಗಲವಚ: ಪರಿಹೃತ್ಯ ಕೋಪಾತ್,

ಕರ್ಣೇ ಕೃತಂ ಕನಕ-ಪತ್ರಂ ಅನಾಲಪತ್ಯಾ

ಹೌದಲ್ಲವೇ, ಆಕೆ ಆ ರಾತ್ರಿ ಕವಿಯೊಂದಿಗೆ ಕೂಡಿದ್ದಾಗೆ ಹಾಗೊಮ್ಮೆ ಸೀನಿಬಿಟ್ಟರೆ, ಅದೂ ಒಂಟಿ ಸೀನನ್ನು! ಶಕುನಗಳ ಮಾತು ಹಾಗಿರಲಿ, ಅವಳೊಳಗೆ ಹುಗಿದು ಮಲಗಿದ್ದಾಗ.. ಏನಾಗಿರಬೇಡ ಆಕೆಯ ಸ್ಥಿತಿ!? ಆದರೂ ಆಕೆ, ಆ ಪ್ರಣಯಿನಿ ಅಂಥ ಸ್ಥಿತಿಯಲ್ಲೇ ಹಾರೈಸುತ್ತಾಳಂತೆ; ಕವಿಯನ್ನು ಚಿರಕಾಲ ಬದುಕು ನೀನೆಂದು. ಅದನ್ನು ಹೇಗೆ ಮರೆಯಲಿ ಎಂದು ಪ್ರಶ್ನಿಸುತ್ತಾನೆ ರಾಜನಿಂದ ಮರಣದಂಡನೆಗೊಳಗಾಗಿ, ಸಾವನ್ನು ನಿರೀಕ್ಷಿಸುತ್ತಿದ್ದ ಕವಿ. ಎಂಥಾ ಕಾಂಟ್ರಡಿಕ್ಟರಿ ಅಲ್ಲವೇ? ಒಂದಂತೂ ಸತ್ಯ, ಇಂದಿಗೂ ಕವಿ ಬದುಕಿದ್ದಾನಲ್ಲ ತನ್ನ ತುಂಟ ಕಾವ್ಯಗಳ ಒಳಗೆ!
.ಕಾಶ್ಮೀರದಿಂದ ಕರುನಾಡಿಗೆ ಬಂದು ರಾಜನ ಮಗಳನ್ನೇ ಕದ್ದು ಸೇರಿದ ಕವಿಯ ನೆನಪು !.ಸರಸ ಸಂಧಾನ: ತುಂಟ ಕವಿಗಳ ಕಣ್ಣಿಗೆ ಬಿದ್ದ ತುಂಬು ಜವ್ವನೆ, ವಿರಹಿಯ ಪಾರಮಾರ್ಥ!.ಅಷ್ಟಕ್ಕೂ ವೇಶ್ಯೆಯರಿಗೇಕೆ 'ಕರುಣ‘ವಿಲ್ಲ? ಕವಿ ಸರ್ವಜ್ಞನ ವ್ಯಾಖ್ಯೆ ಹೀಗಿದೆ....ಅವನಿಗೆ ಅವಳು, ಆಕೆಗೆ ಮತ್ತೊಬ್ಬ, ಆತನಿಗೆ ಇನ್ನೊಬ್ಬಳು... ಎಲ್ಲರದೂ ಹಾದರವೇ!.ಒಂದೊಮ್ಮೆ ಹೆಣ್ಣು ಕೆರಳಿದರೆ; ಧಗಧಗಿಸುವ ಕುಂಡದೊಳಗೆ ಗಂಡು ಉಳಿದಾನೇ? .ಗಂಡಿಗಿಲ್ಲವೇ ಭ್ರಷ್ಟತೆಯ ಹಂಗು? ಶೃಂಗಾರ ವ್ಯಾಖ್ಯೆ ನೀಡಿದ್ದ ಸಾಳ್ವಕವಿ.ಸರಸ ಸಂಧಾನ: ಬಹುವಲ್ಲಭರಿಗೆ ಸಮಾನ ಸುಖ ಹಂಚಿದ ಬಳಿಕವೂ ಆಕೆ ಇನ್ನೂ ಅತೃಪ್ತಳೇ!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.