ಶೃಂಗಾರ ಭಾವದಲ್ಲಿ, ರಸಿಕತೆಯಲ್ಲಿ ನಮ್ಮ ಕನ್ನಡದ ಪ್ರಾಚೀನ ಕವಿಗಳು ಸಂಸ್ಕೃತ ಕವಿಗಳಿಗೆ ಒಂದು ಗುಲುಗಂಜಿಯಷ್ಟೂ ಕಡಿಮೆ ಇಲ್ಲ, ಈ ಪಂಕ್ತಿಯಲ್ಲೇ ಬಂದು ನಿಂತು ತಂತಮ್ಮ ಪಾಲಿನ ರಸದೌತಣವನ್ನು ಕೈಬಿಚ್ಚಿ ಬಡಿಸಿ ಹೋದವರ ಪೈಕಿ ಸಾಳ್ವಕವಿ ಮೊದಲಿಗ. ಹದಿನಾರನೇ ಶತಮಾನದಲ್ಲಿ ಗೇರುಸೊಪ್ಪೆಯಲ್ಲಿ ಬದುಕಿದ್ದ ಸಾಳ್ವ ಕವಿಯ ಕೃತಿಗಳು ಕನ್ನಡದಲ್ಲಿ ಶೃಂಗಾರ ಕಾವ್ಯಕ್ಕೆ ಹೊಸ ವ್ಯಾಖ್ಯಾನವನ್ನೇ ನೀಡಿದಂಥವು. ಆತ ತನ್ನ ಕಾವ್ಯಗಳಲ್ಲಿ ನವರಸಗಳನ್ನೂ ಹದವಾಗಿ ಮಿಳಿತಗೊಳಿಸಿದ್ದಾನಾದರೂ, ಶೃಂಗಾರ ರಸಾಭಿವ್ಯಕ್ತಿಯಲ್ಲಿ ಒಂದರ್ಥದಲ್ಲಿ ಈತ ರಸಜ್ಞ. ‘ರಸರತ್ನಾಕರ’ ಕೃತಿಯಂದೇ ಸಾಕು ಈತನ ಅಡುಗೆಯ ರುಚಿಯನ್ನು ಸಾರಲು. ಹಾಗೆ ನೋಡಿದರೆ ಇದು ಕನ್ನಡದ ಅಧಿಕೃತ ಅಲಂಕಾರ ಗ್ರಂಥ ಎಂದೇ ಮನ್ನಣೆ ಪಡೆದಿದೆ.

ಶೃಂಗಾರದ ಬಗೆಗೆ ವಿಭಿನ್ನ ದೃಷ್ಟಿಕೋನದ ವ್ಯಾಖ್ಯಾನ ಮಾಡಿದ ಕವಿ ಸಾಳ್ವ. ಆತ ತನ್ನ ಕೃತಿಯ ‘ಪ್ರಪಂಚ ವಿವರಣಂ’ ಎಂಬ ಮೊದಲ ಪ್ರಕರಣದಲ್ಲಿ ಶೃಂಗಾರರಸದ ಬಗೆಗಳನ್ನು ತೆರೆದಿಡುತ್ತಾನೆ. ಇವನ ಪ್ರಕಾರ ಸಂಭೋಗ ಶೃಂಗಾರ, ವಿಪ್ರಲಂಬ ಶೃಂಗಾರ ಎಂಬೆರಡೂ ಪೂರ್ಣ ತೃಪ್ತಿಗೆ ಪೂರಕವಂತೆ. ಕೇವಲ ಸಂಭೋಗ ಶೃಂಗಾರ (ಸಂಗಾತಿಯ ಸಾನ್ನಿಧ್ಯ)ವೊಂದೇ ಆದಲ್ಲಿ ಅದು ನಿತ್ಯದ ಭಕ್ಷಬೋಜ್ಯದಂತೆ ಬೋರೋಬೋರು; ನಡುವೆ ಆಗಾಗ ಪಥ್ಯದೂಟ(ವಿರಹ–ವಿಪ್ರಲಂಬ)ವೂ ಇದ್ದರೆ ನಾಲಗೆಯ ರುಚಿಗೆ ಸಾಣೆ ಹಿಡಿದಂತೆ ಎಂಬುದು ಅವನ ವಿವರಣೆ. ಇಲ್ಲಿನ ಸೂಚ್ಯವನ್ನು ಮತ್ತೆ ವಾಚ್ಯವಾಗಿಸುವ ಅಗತ್ಯವಿಲ್ಲ ತಾನೆ?

ಇವು ಶೃಂಗಾರ ರಸದ ವಿಭಾವಗಳು. ಶೃಂಗಾರ ರಸದಲ್ಲಿ ಹಲವು ಸ್ತರಗಳು. ಅನುಭವ, ಸಾತ್ವಿಕ ಭಾವಗಳೊಂದಿಗೆ ‘ವ್ಯಭಿಚಾರಿ ಭಾವ‘ವನ್ನೂ ಆತ ವ್ಯಾಖ್ಯಾನಿಸುವ ಮೂಲಕ ಪಕ್ಕಾ ಸೈಕಲಾಜಿಸ್ಟ್ನಂತೆ ಮಾತಾಡುತ್ತಾನೆ. ಮಾತ್ರವಲ್ಲದೇ ಶೃಂಗಾರ ರಸದ ಅವಸ್ಥೆಗಳನ್ನು ಆತ ಉದಾಹರಣೆ ಸಮೇತ ವಿವರಿಸುತ್ತಾನೆ.

ಪರಿಣಾಮವನಂತಂ ವ್ಯವ

ಹರಿಸುವುದವಂವಸ್ಥೆ ನೆಗಳ್ದುವನಂತಂ

ಪರಿಭಾವಿಸುವೊಡೆ ರಸವಿ

ಸ್ತರಮಂ ವಿವರಿಸುವೆನೆಂಬನಾವನುಮೊಳನೇ॥

ಗಂಡಿನ ವ್ಯಭಿಚಾರ ಆತನ ಗಂಡಸ್ತನದ ಸಂಕೇತವಾದರೆ, ಹೆಣ್ಣಿನ ವ್ಯಭಿಚಾರ ಭ್ರಷ್ಟತೆ ಎನ್ನುವ ಈ ಸಮಾಜದ ಪಾರಂಪರಿಕ ಧೋರಣೆಯನ್ನು ಸಾಳ್ವ ಪ್ರಶ್ನಿಸುತ್ತಾ... ಇವೆಲ್ಲ ಕೇವಲ ಹೆಣ್ಣಿಗಷ್ಟೇ ಸೀಮಿತವಾದುದಲ್ಲ. ಅಭಿವ್ಯಕ್ತವನ್ನು ಆಧರಿಸಿ ಪ್ರಾಪಂಚಿಕರು ಹೆಣ್ಣನ್ನು ಮಾತ್ರ ಉದಾಹರಿಸುತ್ತಾರೆ. ಪುರುಷನಂತೆಯೇ ಹೆಣ್ಣಿನಲ್ಲಿಯೂ ಈ ಎಲ್ಲ ಭಾವಗಳು ಉಂಟಾಗುತ್ತವೆ. ಅವನ್ನು ಗ್ರಹಿಸುವ, ಅನುಭವಿಸುವ ರಸಿಕ ಮನ, ತಾಳ್ಮೆ ಗಂಡಿಗೆ ಬೇಕಷ್ಟೇ ಎಂಬ ಕಿವಿಮಾತನ್ನೂ ಹೇಳಿದ್ದಾನೆ.

‘ರಸರತ್ನಾಕರ’ ಕೃತಿಯ ಶೃಂಗಾರ ಸನ್ನಿವೇಶಗಳು ಕೇವಲ ರತಿ–ವರ್ಣನೆಗಳಲ್ಲ; ಅವು ಮನಸ್ಸನ್ನು ಮೃದುವಾಗಿಸುವ, ಮಾನವ–ಬಾಂಧವ್ಯವನ್ನು ಗಾಢಗೊಳಿಸುವ, ನಿಜವಾದ ಮಧುರ–ಸಾನ್ನಿಧ್ಯದ ಅನುಭವಗಳಾಗಿ ನಿಲ್ಲುತ್ತವೆ.

ಸಾಳ್ವ ಕೆಲವೊಮ್ಮೆ ಲೈಂಗಿಕ ತಜ್ಞನಂತೆಯೂ ಕಾಣಿಸುತ್ತಾನೆ. ಅವನ ಪ್ರಕಾರ ಶೃಂಗಾರ ಕೇವಲ ಶರೀರಕ್ಕೆ ಸೀಮಿತವಾದುದಲ್ಲ. ಶೃಂಗಾರವೆಂದರೆ ದೇಹಕ್ಕೆ ಮತ್ತೊಂದು ದೇಹ ಬೆಸೆದುಕೊಳ್ಳುವ ಮೊದಲು ಮನಸ್ಸು–ಮನಸ್ಸುಗಳನ್ನು ಜೋಡಿಸುವ ನಿಃಶಬ್ದ ಸಂವಾದ. ಅಲ್ಲೊಂದಿಷ್ಟು ಭಿಡೆ ಬಿಟ್ಟು(ಪೋಲಿಯಾಗಿ?) ಮಾತಾಡಬೇಕು. ಭಾಷೆಗಳು ಬೆಸೆದರಷ್ಟೇ ಆಂಗಿಕ ಮಿಲನಕ್ಕೆ ಅನುವಾಗುವುದು ಎನ್ನುವ ಸಾಳ್ವ, ಗಂಡು ಹೆಣ್ಣಿನ ಸಾಂಗತ್ಯದಲ್ಲಿ ತೃಪ್ತಿಯ ಪರಾಕಾಷ್ಠೆಗೆ ಇದೇ ಸೋಪಾನ. ಅದಿಲ್ಲದಿದ್ದರೆ, ಸಿಹಿಯಾದ ಹಣ್ಣನ್ನು ಅಗಿದು ರಸಾಸ್ವಾದಿಸದೇ, ‘ಗುಳಂ‘ನೆ ನುಂಗಿದಂತೆ ಎಂಬ ತಜ್ಞ ವಿವರಣೆಯನ್ನು ನೀಡುತ್ತಾನೆ. ಇದಕ್ಕೆ ಆತ ನೀಡುವ ವ್ಯಾಖ್ಯೆ ಅತಿ ನವಿರಾದುದು, ಉಪಮಾನಗಳು ಅತೀ ಮೃದುವಾದವು, ಭಾವನಾತ್ಮಕ ಆಳತೆ ಸ್ಪಷ್ಟವಾದುದು.

ನಾಯಕ–ನಾಯಿಕೆಯ ಮೊದಲ ನೋಟವೇ ಶೃಂಗಾರದ ಬೆಳೆಗೆ ರಸದ ಬೀಜವಂತೆ. ಆ ನೋಟ ಕಾಮದ ಕಿಡಿಹೊತ್ತಿಸುವುದಕ್ಕಿಂತಲೂ ಮೃದು–ಮಧುರ ಗಾನ ಹೊಮ್ಮಿಸಬಲ್ಲ ವೀಣೆಯ ತಂತಿಯನ್ನು ಮೀಟಬೇಕಂತೆ. ಕಿಡಿಯಾದರೆ ಧಗ್ಗನೆ ಹೊತ್ತಿ ಉರಿದು ತಣ್ಣಗಾಗಿಬಿಡಬಹುದು, ಆದರೆ ಒಮ್ಮೆ ಮೀಟಿದ ತಂತಿ ಬಹುಕಾಲ ನಾದ ಹೊಮ್ಮಿಸುತ್ತಲೇ ಇರುತ್ತದೆ ಎಂಬುದು ಶೀಘ್ರಸ್ಖಲನದಂಥ ಸಮಸ್ಯೆಗೆ ಮೂಲ ಕಾರಣ ಹೇಳಿದಂತೆ ಅನ್ನಿಸುತ್ತದಲ್ಲವೇ?

“ಮೇಘದ ನೀರಿನೊಳ್ ತೇಲುವ ಚಂದಿರನಂತೆ

ಅವಳ ಕಣ್ಣಲಿ ಮಿನುಗುತ ಮದನನ ಮಧುರ ದೀಪ.”

ಈ ಸಾಲುಗಳಲ್ಲಿ ಅತಿಯಾದ ದ್ವಂದ್ವಗಳಿಲ್ಲ, ಕೇವಲ ಒಲವಿನ ಬೆಳಕು. ಆದರೆ ಮುಂದಿನ ಸಾಲುಗಳನ್ನು ನೋಡಿ:

“ಗಾಳಿಯ ತೂಗುತ ದ್ರಾಕ್ಷಾಲತೆ

ಬೆರಳುಗಳಾದೆ ಅವಳ ವಕ್ಷಸ್ಥಲದಲಿ;

ನನ್ನ ನಡುಗು ನೀರಿನ ತರಂಗದಂತೆ…”

ಈ ನಡುಗು ಶರೀರದ್ದಷ್ಟೇ ಅಲ್ಲ ಎಂಬುದನ್ನು ಗ್ರಹಿಸಿ, ಮೊದಲ ಮಿಲನಕ್ಕೆ ಹೊರಟ ಗಂಡಿನ ಒಳಗಿನ ಅಂಜಿಕೆ, ಆಸೆ, ನವೀನಾನಂದಗಳ ವ್ಯಕ್ತೀಕರಣವೂ ಆದೀತಲ್ಲವೇ?.

“ಮಾತಿನಲಿ ಮಧುವಿನ ಸಿಪ್ಪೆ,

ನೋಟದಲಿ ನಂದಾದೀಪ;

ಅವಳ ನಕ್ಕಾಗ ದೇಹವೆಲ್ಲ

ವಸಂತದ ಹೂವಾಯಿತು.”

ಇಲ್ಲಿ ಕವಿಗೆ ಶೃಂಗಾರ ಎನ್ನುವುದು ದೌರ್ಬಲ್ಯ ಅಲ್ಲ, ಅದು ಆತ್ಮಸಮರ್ಪಣೆಯ ಶಾಂತ ಕ್ಷಣ. ರತಿಸನ್ನಿವೇಶ ಎಂಬುದು ಸಂಯಮದ ಸೌಂದರ್ಯವೆಂದು ಕವಿ ಪ್ರತಿಪಾದಿಸುತ್ತಾನೆ. ಅದು ಕೇವಲ ದೇಹ–ಮನಸಿನ ತೀಟೆ ತೀರುವ ಕ್ರಿಯೆಯಲ್ಲ. ಎರಡು ಮನಗಳ ಬಾಂಧವ್ಯ ವೃದ್ಧಿಯ ಪ್ರಕ್ರಿಯೆ ಎಂಬುದು ಸ್ಪಷ್ಟವಾಗಿ ಆತನ ಕಾವ್ಯದ ಸಾಲುಗಳಲ್ಲಿ ವ್ಯಕ್ತವಾಗಿದೆ.

ಸಾಳ್ವ ಕವಿ, ತನ್ನ ರತಿ–ವರ್ಣನೆಯಲ್ಲಿ ಸಂಸ್ಕೃತ ಕಾವ್ಯದ ಧಾಟಿಯನ್ನೇ ಅನುಸರಿಸಿ ವಿಲಾಸವನ್ನು ಮಿತವಾದ, ಶುದ್ಧವಾದ ರೂಪದಲ್ಲಿ ಕೊಡುತ್ತಾನೆ.

“ಅವಳ ತೋಳುಗಳ ವಲಯದೊಳಗೆ

ಬೇಸಗೆಯ ಬಿಸಿಲು ಕರಗಿದಂತೆ;

ಇಬ್ಬರ ಉಸಿರಿನ ನಡುವೆ

ಜಗವೇ ನಿಂತಂತೆ ತೋರಿ.”

ಇದು ಶೃಂಗಾರದ ಅಲಂಕಾರಿಕ–ಅನುಭವ, ಅತಿರೇಕವಲ್ಲ, ಒಲಿದ ಮನಗಳ ನಿಜವಾದ ಸಾಮೀಪ್ಯ. ಸಾಳ್ವನ ಮತ್ತೊಂದು ವಿಶೇಷತೆ ಎಂದರೆ ಪ್ರೇಮವು ಕೆಲವೊಮ್ಮೆ ಭಕ್ತಿಯ ಪರಮರಸದಂತೆ ತೋರುತ್ತದೆ.

“ಅವಳ ಮೊಗದಿ ಕಾಣುತ್ತಿದ್ದ ಬೆಳಕು

ದೇವರ ದೀಪದ ಶಾಂತಜ್ಯೋತಿ;

ಪ್ರೇಮವೋ, ಭಕ್ತಿಯೋ,

ಏಕವಾಗಿತ್ತು ಆ ಕ್ಷಣ.”

ಇದು ಶೃಂಗಾರವನ್ನು ಪಾವಿತ್ರ್ಯದ ಎತ್ತರಕ್ಕೆ ಎತ್ತುತ್ತದೆ. ಒಟ್ಟಾರೆ ಶುದ್ಧ ಕನ್ನಡದ ಕವಿ ಸಾಳ್ವನ ಪ್ರಕಾರ ಶೃಂಗಾರವೆಂದರೆ ಕೇವಲ ಅಂಗಸಂಪರ್ಕವಲ್ಲ, ಹೃದಯ–ಸಂಪರ್ಕದ ಸೇತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.