ನಮ್ಮ ವೇದ–ಪುರಾಣಗಳ ಪ್ರಕಾರ ಕಾಮದ ಆಧಿದೇವತೆ ಮನ್ಮಥ. ಯಾರಿಗೆ ತಾನೇ ಇದು ಗೊತ್ತಿಲ್ಲ? ಆದರೆ ಹಾಗೆಂದು ವ್ಯಕ್ತಿಯೇ ಭೌತಿಕವಾಗಿ ಇಲ್ಲವಂತೆ! ಇದಕ್ಕೊಂದು ಕಥೆ, ಶಿವನ ತಪೋಭಂಗ ಮಾಡಿದ್ದು, ನಂತರ ಆತನ ಕೋಪಕ್ಕೆ ತುತ್ತಾಗಿ ಮನ್ಮಥ ಭಸ್ಮವಾದದ್ದು. ರತಿಯ ಶರಣಾಗತಿಯ ಬಳಿಕ ಆತ ಅಶರೀರಿಯಾಗಿ ಉಳಿದ್ದು... ಹೀಗೆ ಸಾಗುತ್ತದೆ ಕಥೆ. ಹೀಗಾಗಿ ಮನ್ಮಥ ಎನ್ನುವುದು ನಾಮಪದವೆಂಬುದಕ್ಕಿಂತ ಅದೊಂದು ಸ್ಥಿತಿ. ಮನದ ಮಥನವೇ ಮನ್ಮಥ. ಈ ಮನದ ಚಾಂಚಲ್ಯ ಹುಟ್ಟುವುದೇ ಯವ್ವನದಲ್ಲಲ್ಲವೇ? ಹಾಘಿದ್ದ ಮೇಲೆ ಯವ್ವನದ ರೂಪಕ್ಕೊಂದಿಷ್ಟು ಅಲಂಕಾರ ಬೇಡವೇ। ಅದಕ್ಕಾಗಿ ಕವಿಗಳು ಈ ಮನ್ಮಥನಿಗೆ ಕಬ್ಬಿನ ಬಿಲ್ಲನ್ನು ಕೊಟ್ಟು ಸಿಹಿ ತುಂಬಿದರು. ಹೂ ಬಾಣಗಳನ್ನು ಹೂಡಿ ಸುವಾಸನೆಯನ್ನು ಪಸರಿಸಿದರು. ಈ ಸಿಹಿ–ಸುವಾಸನೆಗಳು ಬೆರೆತರೆ ಯಾರ ಮನಸ್ಸನ್ನು ತಾನೆ ಕದಿಯುವುದಿಲ್ಲ. ಹೀಗಾಗಿ ಮನ್ಮಥ ಮನಸನ್ನು ಕದಿಯುತ್ತಾನಂತೆ. ಅಬ್ಬಾ ಎಂಥಾ ಸುಂದರ ಕಲ್ಪನೆ.
.ಸರಸ ಸಂಧಾನ: ಬಹುವಲ್ಲಭರಿಗೆ ಸಮಾನ ಸುಖ ಹಂಚಿದ ಬಳಿಕವೂ ಆಕೆ ಇನ್ನೂ ಅತೃಪ್ತಳೇ!.ಒಂದೊಮ್ಮೆ ಹೆಣ್ಣು ಕೆರಳಿದರೆ; ಧಗಧಗಿಸುವ ಕುಂಡದೊಳಗೆ ಗಂಡು ಉಳಿದಾನೇ? .
ಕಾಮವನ್ನು ಕಂಡಿದ್ದೇವೆ. ಕಾಮವಿಕಾರಗಳನ್ನೂ ಅಲ್ಲಲ್ಲಿ ಕಾಣುತ್ತೇವೆ. ಆದರೆ ಕಾಮಕ್ಕೊಂದು ಅಧಿದೈವ, ದೈವತ್ವವನ್ನು ಕಂಡವರಾರೋ? ಭಾರತೀಯ ಕವಿಗಳು ಖಂಡಿತಾ ಇಂತೆಲ್ಲ ಬಣ್ಣನೆಯೊಂದಿಗೆ ದೈವತ್ವವನ್ನು ಕಾಮದಲ್ಲಿಯೂ ಸಾಕ್ಷಾತ್ಕರಿಸುತ್ತಾರೆ; ಮೂರ್ತಕ್ಕೆ ತಂದು ನಿಲ್ಲಿಸುತ್ತಾರೆ. ಅರವಿಂದ, ಅಶೋಕ, ನೀಲೋತ್ಫಲ, ಚೂತ, ನವಮಲ್ಲಿಕಾದಿ ಬಾಣಗಳನ್ನು ಮನಸ್ಸಿಗೇ ನಾಟಿಸುತ್ತಾನಂತೆ ಆತ. ಇವೆಲ್ಲವೂ ಸಂಭೋಗ ಶೃಂಗಾರದ ಹಂತಗಳು. ಮೊದಲು ಕಣ್ಣು ಕಾಣುತ್ತದೆ–(ಅರವಿಂದ–ಮುಖ), ಕಂಡ ಕಣ್ಣು ಮನಸಿಗೆ ಹೇಳುತ್ತದೆ (ಅಶೋಕ–ಶೋಕವಿಲ್ಲದ ಪ್ರಫುಲ್ಲ ಮನ), ಮನಸು ಬಯಕೆಯ ಚಿಗುರನ್ನು ಸೃಜಿಸುತ್ತದೆ–(ನೀಲೋತ್ಫಲ). ನಿಧಾನಕ್ಕೆ ರಸಭರಿತ ದೇಹ ಅರಳುತ್ತದೆ–( ಚೂತವೆಂದರೆ ರಸಭರಿತ ಹಣ್ಣು–ದೇಹ), ಹಾಗೆ ಅರಳಿದ ದೇಹದಿಂದ ಸುಗಂಧ ಹೊಮ್ಮುತ್ತದೆ (ನವಮಲ್ಲಿಕಾ–ಪರಿಮಳ ಬೀರುವ ಮಲ್ಲಿಗೆ). ಹೀಗೆ ಇವೆಲ್ಲವೂ ಕಾಮದಾಟಕ್ಕೆ ಮುನ್ನ ದೇಹದಲ್ಲಾಗುವ ಬದಲಾವಣೆಗಳೇ. ಇಷ್ಟಾದ ಮೇಲೆ ‘ಅಷ್ಟಾಗದೇ’ ಉಳಿದೀತೇ?

ಹೂವಿಗೆ, ಅದರ ಗಂಧಕ್ಕೆ ಅರಳದ ಮನಸ್ಸುಗಳುಂಟೇ? ಹಾಗೆ ಅರಳಿದ ದುಂಬಿಯ ಮನಸ್ಸು ಮತ್ತೆ ಹೂವನ್ನು (ಹೂ ಮನಸಿನ ಹುಡುಗಿಯನ್ನು) ಹುಡುಕಿ ಹೋಗದೇ ಇದ್ದೀತೆ? ಇದು ವಾಚ್ಯವಾಗಬೇಕಿಲ್ಲ. ಸಂಕೇತವಷ್ಟೆ. ಉತ್ಪ್ರೇಕ್ಷೆಯೂ ಅಲ್ಲ. ಮನೋವ್ಯಾಪಾರದ ವೈಜ್ಞಾನಿಕ ವಾಸ್ತವ. ರತಿ ಆತನ ಪತ್ನಿಯಲ್ಲವೇ. ಆಕೆಯನ್ನು ಅವನು ಮನದೊಳಗೆ ಹುದುಗಿಸಿಟ್ಟುಕೊಂಡಿದ್ದಾನಂತೆ. ಹೀಗಾಗಿ ರತಿಯೂ ಕಾಣುವುದಿಲ್ಲ; ರತಿ ಕ್ರೀಡೆ ಸಹ ಗೌಪ್ಯ.

ಹೌದಲ್ಲವೇ ಕಾಮ ಕೆರಳುವುದು ಮೊದಲು ಮನದಲ್ಲೇ. ನಂತರ ದೇಹಕ್ಕೆ ಸಂದೇಶಗಳು ರವಾನೆಯಾಗುವುದು. ರಕ್ತ ಎಲ್ಲೆಲ್ಲಿ ಹರಿಯಬೇಕೋ ಅಲ್ಲೆಲ್ಲಾ ಹರಿದು ದೇಹ ಸೆಟೆದು ನಿಲ್ಲುತ್ತದೆ. ಆಗ ಮನದ ಕೊಳದಲ್ಲಿ ಹುಟ್ಟಿ ಹೆಚ್ಚುವ ತರಂಗಗಳೇ ಶೃಂಗಾರವಂತೆ. ಅದೇ ರಸೋತ್ಪಾದನೆಗೆ ಕಾರಣವಾಗಿ ಉತ್ಕಟ ಘಟ್ಟಕ್ಕೆ ಕೊಂಡೊಯ್ಯುತ್ತದೆ ಎಂಬ ಕವಿ ಭರ್ತೃಹರಿಯ ಬಣ್ಣನೆ ಕೇವಲ ಕಲ್ಪನೆ ಹೇಗಾದೀತು? ಅದು ಪಕ್ಕಾ ದೇಹ ಮತ್ತು ಮನಸುಗಳ ವೈಜ್ಞಾನಿಕಶಾಸ್ತ್ರ.

ಒಮ್ಮೆ ನೋಡಿ...

ಅಣುಮಾತ್ರಂ ಮನಸ್ತಸ್ಮಾದಾಶಾ ನಾಮ ಲತೋದ್ಗತಾ

ತಸ್ಯ ನಾಲಮುಪಘ್ನಾಯ ಭುವನಾನಿ ಚತುರ್ದಶ॥

ಪದಶಃ ಅರ್ಥ ನೋಡುವುದಾದರೆ ಮನಸ್ಸು ಕೇವಲ ಒಂದು ಅಣುವಂತೆ. ಅಂದರೆ ಕಣ್ಣಿಗೆ ಕಾಣದ ಅಣುವಷ್ಟು ಸಣ್ಣದು; ಆದರೆ ಅದರಲ್ಲಿ ಹುಟ್ಟುವ ಆಸೆ ಎಂಬುದು ಲತೆಯಂತೆ ಹಬ್ಬುತ್ತಲೇ ಹೋಗುತ್ತದೆ. ಅಂಥ ಆಶಾಲತೆಯನ್ನು ಸಂಪೂರ್ಣವಾಗಿ ನಿಗ್ರಹಿಸಲು ಹದಿನಾಲ್ಕು ಲೋಕಗಳ ಮಹಾಶಕ್ತಿಯೂ ಸಾಲದು ಎನ್ನುತ್ತಾನೆ ಕವಿ.

ಇದು ಬಹುಶಃ ಕವಿಯ ಸ್ವಾನುಭವವೂ ಇರಬಹುದು. ಹೌದು, ಶೃಂಗಾರ ಸಾಹಿತ್ಯವನ್ನು ಭರ್ತೃ ಹರಿಯ ಹೆಸರಿಲ್ಲದೇ ಪೂರ್ಣಗೊಳಿಸಲು ಸಾಧ್ಯವೇ ಇಲ್ಲ ಎಂಬಷ್ಟರ ಮಟ್ಟಿಗೆ ಸಂಸ್ಕೃತದ ಈ ಕವಿ ರಸಿಕಾಗ್ರೇಸನಾಗಿ ಮೆರದಿದ್ದಾನೆ. ಆದರೆ ಅದೇ ಕವಿ ವೈರಾಗ್ಯಕ್ಕೂ ಶತಕ ಬರೆದದ್ದರ ಹಿಂದಿನ ಕಥೆ ರೋಚಕ. ಅದು ಹೀಗಿದೆ...

ಮೂಲತಃ ಆತ ರಾಜ. ಒಮ್ಮೆ ಅವನು ಆಸ್ಥಾನಕ್ಕೆ ಸಾಧುವೊಬ್ಬ ಬಂದ. ಆತ ಸುಂದರವಾದ ಹಣ್ಣೊಂದನ್ನು ಕೊಟ್ಟು ‘ಇದನ್ನು ತಿಂದರೆ ಶತಾಯುಷಿಗಳಾಗುತ್ತಾರೆ’ ಎಂದನಂತೆ. ಭರ್ತೃ ಹರಿ ಮೊದಲೇ ರಸಿಕರಾಜ. ತಾನೊಬ್ಬನೇ ತಿಂದು ಬದುಕಿದರೆ ಸಾಂಗತ್ಯಹೀನನಾಗಿ ಜೀವನ ಬರುಡಾಗಿಬಿಡುತ್ತದೆ ಎಂದು ಯೋಚಿಸಿದ. ನೇರವಾಗಿ ಅಂತಃಪುರಕ್ಕೆ ಹೋಗಿ ತನ್ನ ಪ್ರೇಯಸಿಯೂ ತನ್ನೊಂದಿಗೆ ಬದುಕಿದ್ದರೆ ಬಲು ಮೋಜು ಎಂಬ ಕಾರಣಕ್ಕೆ ರಾಣಿಗೆ ವಿಷಯ ತಿಳಿಸಿ ಆಕೆಗೆ ಹಣ್ಣು ಕೊಟ್ಟ. ಆದರೆ ಆಕೆಯೂ ಹಾಗೆಯೇ ಯೋಚಿಸುತ್ತಾಳೆ. ಆದರೆ ಆಕೆ ಆ ಹಣ್ಣನ್ನು ತನ್ನ ಗಂಡ ರಾಜನೊಂದಿಗೇ ಹಂಚಿಕೊಳ್ಳುವ ಬದಲು, ತನ್ನ ’ಪ್ರಿಯತಮ’ನಾದ ಅರಮನೆಯ ಕುದುರೆಯ ಚಾರಕನಿಗೆ ಗುಟ್ಟಾಗಿ ಹಣ್ಣು ಕೊಟ್ಟಳಂತೆ. ಅವನ ಪ್ರೇಯಸಿ ಲಾಯ ಗುಡಿಸುವವಳು. ಹೀಗಾಗಿ ಅವನೂ ಮುಂದುವರೆಸಿ ಲಾಯ ಗುಡುಸುವವಳಿಗೆ ಒಯದು ಹಣ್ಣು ಕೊಟ್ಟನಂತೆ.

ಕೊನೆಗೂ, ಅದು ಮತ್ತೆ ರಾಜನ ಬಳಿಗೇ ಮರಳಿದ್ದು ಹೇಗೆಂದರೆ, ಆ ಲಾಯ ಗುಡಿಸುತ್ತಿದ್ದವಳೊಂದಿಗೆ ರಾಜನಿಗಿತ್ತು ಅಕ್ರಮ ಸಂಬಂಧ! ಆಕೆಯೊಂದಿಗೆ ಆಗಾಗ ರಮಿಸುತ್ತಿದ್ದುದು ಭರ್ತೃಹರಿಗೇ ಆಕೆ ಆ ಹಣ್ಣನ್ನು ತಂದುಕೊಟ್ಟಳು! ರಾಜನ ಪರಿಸ್ಥಿತಿ ಹೇಗಾಗಿರಬೇಡ? ಕೊನೆಗೂ ಭರ್ತೃಹರಿಗೆ ‘ನೈಜ ಪ್ರೇಮ’ದ ದರ್ಶನವಾಗಿತ್ತು. ಬೇಸತ್ತ ಆತ ತನ್ನೆಲ್ಲ ರಾಜ್ಯಕೋಶ, ಅರಮನೆ, ಹೆಂಡತಿ ವೈಭೋಗಗಳನ್ನು ತೊರೆದು ಕಾವಿಯುಟ್ಟು ಸಂನ್ಯಾಸಿಯಾಗಿಬಿಟ್ಟ. ಆವರೆಗೆ ಶೃಂಗಾರ ಕಾವ್ಯಗಳನ್ನು ಬರೆಯುತ್ತ ಕಲ್ಪನಾ ಲೋಕದಲ್ಲಿ ವಿಹರಿಸುತ್ತಿದ್ದ ಆತ ಸಂಸ್ಕೃತ ಸಾಹಿತ್ಯದ ಮೂರು ವೈಢೂರ್ಯಗಳೆನಿಸಿದ ನೀತಿ ಶತಕ, ಶೃಂಗಾರ ಶತಕ, ವೈರಾಗ್ಯ ಶತಕಗಳನ್ನು ಬರೆದ ಎನ್ನುತ್ತದೆ ಕಥೆ.

ಯಾಂ ಚಿಂತಯಾಮಿ ಸತತಂ ಮಯಿ ಸಾ ವಿರಕ್ತಾ

ಸಾಪ್ಯನ್ಯಮಿಚ್ಛತಿ ಜನೋಪ್ಯಯಮನ್ಯಸಕ್ತಃ

ಅಸ್ಮತ್ಕೃತೇ ಚ ಪರಿತುಷ್ಯತಿ ಕಾಚಿದನ್ನಾ

ಧಿಕ್ತಾಂ ಚ ತಂ ಚ ಮದನಂ ಚ ಇಮಾಂ ಚ ಮಾಂ ಚ ॥

ನಾನು ಯಾರನ್ನು ಸದಾ ಚಿಂತಿಸುತ್ತಿದ್ದೆನೋ ಅವಳಿಗೆ ನಾನು ಬೇಡ; ಅವಳು ಇನ್ಯಾರನ್ನು ಬಯಸುತ್ತಿದ್ದಾಳೆ. ಆದರೆ ಆತ ಮತ್ತೊಬ್ಬಳನ್ನು ಬಯಸುತ್ತಿದ್ದಾಳೆ. ಅಸಲಿಗೆ ಆತ ಬಯಸಿದವಳು ನನ್ನ ಬಳಿ ಬರುತ್ತಾಳೆ! ಛೇ, ಅವಳು, ಅವನು,ಇವಳು, ಕೊನೆಗೆ ನನಗೂ ಬೇಕಿದ್ದುದು ಕಾಮ. ಅಂಥ ಕಾಮಕ್ಕೊಂದು ಧಿಕ್ಕಾರ!

ಎಂದವನೇ ಕಾವಿಯ ಬೆಚ್ಚನೆಯ ಹೊದಿಕೆಗೆ ಹೊಗುತ್ತಾನೆ ಭರ್ತೃಹರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.