ಕಲ್ಲನ್ನೂ ಕರಗಿಸುವ ಶಕ್ತಿ ಕಾವ್ಯಕ್ಕಿದೆ ಎಂಬುದು ಕೇವಲ ಉತ್ಪ್ರೇಕ್ಷೆಯ ಬಣ್ಣನೆಯಲ್ಲವೇ ಅಲ್ಲವೆನಿಸುತ್ತದೆ. ಏಕೆಂದರೆ, ಕವಿಗಳ ಬಣ್ಣನೆಗೆ ಜೀವಂತ ವ್ಯಕ್ತಿಗಳೇ ಸಿಗಬೇಕೆಂದೇನೂ ಇಲ್ಲ. ಹಾಗೆಯೇ ಅವರು ನಿರ್ಜೀವದ ಜತೆಗೂ ಸಂವಾದಿಸಬಲ್ಲರು! ಇಂಥ ಹಲವು ಉದಾಹರಣೆಗಳು ನಮ್ಮ ಪುರಾತನ ಕಾವ್ಯಗಳಲ್ಲಿ ಸಿಗುತ್ತವೆ.

ಸೀತೆಯನ್ನು ಕಳೆದುಕೊಂಡ ರಾಮ ಆಕೆಯನ್ನು ಹುಡುಕುತ್ತ ಹೋಗುತ್ತಿರುವಾಗ ಎದುರಿಗೆ ಸಿಕ್ಕ ಮರಗಿಡಗಳನ್ನು, ಬಂಡೆಗಳನ್ನೂ, ಪ್ರಾಣಿ-ಪಕ್ಷಿಗಳನ್ನು ಕುರಿತು, ಸೀತೆಯ ಬಗೆಗೆ ಪ್ರಶ್ನಿಸುತ್ತ ಕಾಡಲ್ಲಿ ಅಲೆಯುವ ಪ್ರಸಂಗ ರಾಮಾಯಣದಲ್ಲಿ ಬರುವುದಿಲ್ಲವೇ? ವಿರಹ ಎಂಬುದು ಮನುಷ್ಯನನ್ನು ಒಂಟಿಯಾಗಿಸುತ್ತವೆ ಎಂಬುದು ಎಷ್ಟು ಸತ್ಯವೋ, ಆ ಒಂಟಿತನವನ್ನು ಕಳೆಯಲು ಮನುಷ್ಯ ಕಂಡ ಕಂಡ ನಿರ್ಜೀವ ವಸ್ತುಗಳ ಜತೆಗೆ ಮಾತಾಡಲು ಆರಂಭಿಸುತ್ತಾನೆ ಎಂಬುದೂ ಅಷ್ಟೇ ಸತ್ಯ.
.ಸರಸ ಸಂಧಾನ: ತುಂಟ ಕವಿಗಳ ಕಣ್ಣಿಗೆ ಬಿದ್ದ ತುಂಬು ಜವ್ವನೆ, ವಿರಹಿಯ ಪಾರಮಾರ್ಥ!.ಸರಸ ಸಂಧಾನ: ಬಹುವಲ್ಲಭರಿಗೆ ಸಮಾನ ಸುಖ ಹಂಚಿದ ಬಳಿಕವೂ ಆಕೆ ಇನ್ನೂ ಅತೃಪ್ತಳೇ!.
ನಮ್ಮ ಕವಿರತ್ನ ಕಾಳಿದಾಸನನ್ನೇ ತೆಗೆದುಕೊಂಡರೆ ತನ್ನ ‘ಮೇಘಧೂತ’ದುದ್ದಕ್ಕೂ ವಿರಹಿ ಯಕ್ಷನ ಮೂಲಕ ಮಾತಾಡಿಸುವುದು ಯಕಃಶ್ಚಿತ್ ಮೋಡದ ಜತೆಗಲ್ಲವೇ? ಬರೀ ಮಾತೇಕೆ ಮೋಡಕ್ಕೂ ಶೃಂಗಾರದ ಪಾಠ ಮಾಡಿಸಿದ್ದಾನೆ ಯಕ್ಷನ ಮೂಲಕ ಕಾಳಿದಾಸ! ಈ ಸಾಲುಗಳನ್ನೇ ನೋಡಿ...

ಛನ್ನೋಪಾಂತಃ ಪರಿಣತಫಲದ್ಯೋತಿಭಿಃ ಕಾನನಾಮ್ರೈಃ

ತ್ವಯ್ಯಾಸನ್ನೇ ಶಿಖರಮಚಲ ಸ್ನಿಗ್ಧವೇಣೀ ಸವರ್ಣೇ

ನೂನಂ ಯಾಸ್ಯತ್ಯಮರಮಿಥುನಪ್ರೇಕ್ಷಣಿಯಾಮವಸ್ಥಾಂ

ಮಧ್ಯೇಶ್ಯಾಮಃ ಸ್ತನ ಇವ ಭುವಃ ಶೇಷವಿಸ್ತಾಪಾಂಡುಃ॥

ಹೆಣ್ಣಿನ ದೇಹಸೌಂದರ್ಯದ ಬಗೆಗಿನ ತನ್ನ ತಜ್ಞತೆಯನ್ನು ಸಾರಲು ಮೇಘ ಸಂಭಾಷಣೆಯೊಂದು ನೆಪವೋ ಎಂಬಂತೆ ಹಸಿಹಸಿಯಾಗಿ ಇಲ್ಲಿ ಸೌಂದರ್ಯ ವ್ಯಾಖ್ಯಾನವನ್ನು ಮಾಡಿದ್ದಾನೆ ಕಾಳೀದಾಸ. ಉಜ್ಜಯಿನಿ ಸಮೀಪದ ನಿರ್ವಿಂದ್ಯಾ ನದಿಯ ಬಣ್ಣನೆ ಮಾಡುವ ಕವಿ ಅದರ ಅಂಕುಡೊಂಕನ್ನು ಕಾಮಿನಿಯೊಬ್ಬಳ ದೇಹದ ಅಂಕಡೊಂಕುಗಳಿಗೆ ಹೋಲಿಸ್ತುತಾನೆ. ಅಲ್ಲಿನ ಗುಡ್ಡ ಕಣಿವೆಗಳು, ‘ನಡು’ವಿನ ಪ್ರಸ್ತಭೂಮಿ, ಕಣಿವೆಯ ಭಾಗಗಳಿತ್ಯಾದಿಗಳೆಲ್ಲವೂ ನೀವು ಹೇಗೆಲ್ಲ ಕಲ್ಪಿಸಿಕೊಳ್ಳಬಹುದೋ ಹಾಗೆಯೇ ತುಂಟ ಕವಿಯೂ ಬಣ್ಣಿಸಿದ್ದಾನೆ. ಬಂಡೆಗಳನ್ನು ಬಳಸಿ ಮೇಲಿಂದ ಧುಮುಕುವ ‘ಗಂಭೀರಾ’ ಜಲಪಾತವು ನಿತಂಬದಿಂದ ಜಾರುವ ಬಿಳಿಯ ಸೀರೆಯಂತೆ! ಸದಾಶೀವನಿಗೆ ಅದೇ ಧ್ಯಾನ ಎನ್ನುವಂತೆ ಪ್ರೇಯಸಿಯೊಡನೆ ಸಮಾಗಮ ಕಾತರನಿಗೆ ಎಲ್ಲೆಲೂ ಅಂಗಾಂಗಗಳ ದರ್ಶನವೇ ಆಗುವುದು ಸಹಜ ತಾನೆ? ಹಾಗೆಯೆ ನದಿಯೊಡಲಿಗೆ ಬೀಳುವ ಮಳೆಯ ಹನಿಗಳೂ ಆತನಿಗೆ ಸ್ಖಲನದಾಟಕ್ಕೆ ಹೋಲಿಸಿದ್ದು ತುಸು ಜಾಸ್ತಿ ಆಯ್ತೇನೋ! ಥೂ ಪೋಲಿ..!

ಹಾಗೆ ನೋಡಿದರೆ ಕಾಳೀದಾಸನ ಮೇಘಧೂತ ಕೇವಲ ಒಂದು ಶೃಂಗಾರ–ವಿರಹ ಕಾವ್ಯ ಅಲ್ಲವೇ ಅಲ್ಲ. ಅತ್ಯಂತ ರಮಣೀಯವೆನಿಸುವ ಅಮರ ಪ್ರೇಮಿಗಳಿಬ್ಬರ ವಿರಹವನ್ನು ಕಟ್ಟಿಕೊಡುವ ಕಥಾನಕ ಕವಿಯಿಂದ ನಿರೂಪಣೆಗೊಳ್ಳುತ್ತದಾದರೂ ಈ ರಮಣೀಯ ಕಾವ್ಯದಲ್ಲಿ ಭರತ ಭೂಮಿಯ ಭೌಗೋಳಿಕ ಭವ್ಯತೆಯೇ ಮೆರೆಯುತ್ತದೆ. ಉತ್ತರದಿಂದ ದಕ್ಷಿಣದವರೆಗಿನ ಪ್ರಾಕೃತಿಕ ಭವ್ಯತೆ, ಹವಾಮಾನ ವೈವಿಧ್ಯ, ಮಾನ್ಸೂನ್ನ ವೈಚಿತ್ರ್ಯ ಹಸುರು ವನರಾಜಿಯ ಸಮೃದ್ಧತೆ, ಪಾರಿಸಾರಿಕ ಪಲ್ಲಟಗಳಿತ್ಯಾದಿಗಳು ಶೃಂಗಾರದ ವಿಯೋಗರಸದೊಂದಿಗೆ ಹಿತವಾಗಿ ಮಿಳಿತಗೊಂಡು ಅದ್ಭುತ ರಸಕಾವ್ಯವಾಗಿ ಅನುಭೂತಿಗೆ ದಕ್ಕುತ್ತದೆ.

ನವರಸಗಳ ಭಾವಮೇಳದ ಮೂಲಕ ದೇಶದ ಇಂಚಿಂಚೂ ಭೌಗೋಳಿಕ ಮಾಹಿತಿಗಳನ್ನು ನೀಡುವ ಅಮರಕೋಶ. ಅಲ್ಲಿ ನದಿಗಳ ವ್ಯಕ್ತಿತ್ವದ ಬಣ್ಣನೆಯಿದೆ. ನಗರಗಳಿವೆ, ಪರ್ವತಗಳ ಹೆಸರಿವೆ. ಊರೂರು, ಗ್ರಾಮಗ್ರಾಮಗಳ ಮಾಹಿತಿಯಿದೆ. ಗುಡಿ-ಗುಡಾರಗಳ ಪ್ರಸ್ತಾಪವಿದೆ. ಸಂಸ್ಕೃತಿ, ಪರಂಪರೆಯ ವೈವಿಧ್ಯಗಳಿವೆ.

ಮೇಘಧೂತದಲ್ಲಿ ಬರುವ ಆವಂತಿ, ವಿದಿಶಾ, ಉಜ್ಜಯನಿಗಳೆಲ್ಲಿ ಬಹುತೇಕವು ಇಂದಿಗೂ ಉಳಿದಿವೆಯಲ್ಲಾ? ಹೀಗಾಗಿ ಕಾವ್ಯರಸಿಕರ ಸೆಳೆಯಲೆಂದೇ ಕಾಲ್ಪನಿಕ ವಿರಹವೊಂದನ್ನು ಸೃಷ್ಟಿಸಿ, ಆ ಮೂಲಕ ಪ್ರಕೃತಿ ವಿಜ್ಞಾನವನ್ನು ಬಗೆದಿಟ್ಟಿರಬಹುದೇ ಕಾಳಿದಾಸ? ಭಾರತೀಯ ಋತು ವೈವಿಧ್ಯಗಳ ಹೂರಣವುಳ್ಳ ಋತು ಸಂಹಾರದ ಬಳಿಕ ಬಂದ ಮೇಘಧೂತ ಅದರ ಸಾತತ್ಯವನ್ನೇ ಪಡೆದಿದೆ. ಹೀಗಾಗಿ ಅನುಮಾನವೇ ಇಲ್ಲ ಮೇಘಧೂತವೊಂದು ಭಾರತದ ಸಾಂಸ್ಕೃತಿ-ಭೌಗೋಳಿಕ ರೂಪಕ ಸಾಹಿತ್ಯ.

ಛನ್ನೋಪಾಂರ್ತ ಪರಿಣತಫಲದ್ಯೋತಿಭಿಃ ಕಾನನಾಮ್ರೈಃ

ತ್ವಯಾಸನ್ನೇ ಶಿಖರಮಚಲ ಸ್ನಿಗ್ದವೇಣೀ ಸವರ್ಣೇ

ನೂನಂ ಯಾಸ್ಯತ್ಯವಮರ ಮಿಥುನ ಪ್ರೇಕ್ಷಣೀಯಾಮವಸ್ಥಾಂ

ಮಧ್ಯೇರ್ಶಯಾಮಃ ಸ್ತನ ಇವ ಭುವಃ ಶೇಷವಿಸ್ತಾರಪಾಂಡು

ಹಳ್ಳಿಹಳ್ಳಿಗಳ ಹುಡುಗಿಯರ ಬಗ್ಗೆ ಹೇಳುತ್ತ ಜನಜೀವನ ಪರಿಚಯಿಸುತ್ತಾನೆ. ಅವರ ಜತೆಗಿನ ಮೇಘನ ಸಂಬಂಧ

ಬಣ್ಣಿಸುತ್ತ ಸುತ್ತಮುತ್ತಲ ಮಲೆಯ ಶ್ರೇಣಿಗಳನ್ನು ಹೆಣ್ಣಿನ ಸೊಕ್ಕಿದ ಮೊಲೆಗಳಿಗೆ ಹೋಲಿಸುತ್ತಾನೆ. ಸಾರಂಗ- ಹಂಸವೆನ್ನುತ್ತ ಜೀವವೈವಿಧ್ಯ ದಾಖಲಿಸುತ್ತಾನೆ. ಒಟ್ಟಾರೆ ಪರಿಸರ ವಿಜ್ಞಾನ ಓದಿಸುವ ಕವಿಯ ತಂತ್ರಕ್ಕೆ ಶರಣೆನ್ನಲೇಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.