ಶೃಂಗಾರ ಕಾವ್ಯ ಚಕ್ರವರ್ತಿ ಎನಿಸಿಕೊಂಡವರಲ್ಲಿ ಕವಿ ಬಿಲ್ಹಣನನ್ನೂ ಮರೆಯುವಂತಿಲ್ಲ. ವಿರಹವೋ, ಶೃಂಗಾರವೋ ಎರಡನ್ನೂ ಮೀರಿದ ಭಾಷಾ ಚಮತ್ಕಾರವೋ ಎಂದು ಗುರುತಿಸಲಾಗದಷ್ಟು ಮನೋಜ್ಞ ಕಾವ್ಯಗುಚ್ಛವನ್ನು ರಚಿಸಿರುವ ಬಿಲ್ಹಣ ಹನ್ನೊಂದನೆಯ ಶತಮಾನದಲ್ಲಿದ್ದ ಎನ್ನುತ್ತದೆ ದಾಖಲೆಗಳು.

ಪುರಾತನ ಸಂಸ್ಕೃತದ ಮೇರು ಕವಿಗಳ ಸಾಲಿನಲ್ಲಿ ನಿಲ್ಲಬಹುದಾದಷ್ಟು ಪ್ರತಿಭಾವಂತ ಈ ಬಿಲ್ಹಣ ಕವಿ, ಭೂಮುಕುಟ ಕಾಶ್ಮೀರದ ನೆಲದಲ್ಲಿ ಮೂಡಿ ಅರಳಿದ ಸಾರಸ್ವತ ಕುಸುಮ. ಆದರೆ ಆತನ ಕಾವ್ಯಕ್ಕೆ ನೆನಯೊದಗಿಸಿದ್ದು ಕರುನಾಡು. ಕಾಶ್ಮೀರದಿಂದ ಕರುನಾಡಿಗೆ ವಲಸೆ ಬಂದವನು ಈತ. ಅಂಥವನಿಂದ ಇಂಥದ್ದೊಂದು ‘ಕಾವ್ಯಕನ್ನಿಕೆ’ ಮೈದಾಳಿದ ಸಂದರ್ಭ ಮಾತ್ರ ರೋಚಕ.
.ಸರಸ ಸಂಧಾನ: ತುಂಟ ಕವಿಗಳ ಕಣ್ಣಿಗೆ ಬಿದ್ದ ತುಂಬು ಜವ್ವನೆ, ವಿರಹಿಯ ಪಾರಮಾರ್ಥ!.ಸರಸ ಸಂಧಾನ: ಬಹುವಲ್ಲಭರಿಗೆ ಸಮಾನ ಸುಖ ಹಂಚಿದ ಬಳಿಕವೂ ಆಕೆ ಇನ್ನೂ ಅತೃಪ್ತಳೇ!.
ರಾಜನಿಂದ ಮರಣದಂಡನೆಗೊಳಗಾದ ರಾಜಕವಿ ಇವನಂತೆ. ಹಾಗಂತ ಕತೆಗಳಿವೆ. ಪ್ರೀತಿಸಿದ ತಪ್ಪಿಗಾಗಿಯೇ ಈ ಕವಿಗೆ ಮರಣದಂಡನೆ ವಿಧಿಸಲಾಗಿರುತ್ತದೆ. ಅಯ್ಯೋ, ಇದೆಂಥಾ ವಿಚಿತ್ರಾ; ‘ಪ್ರೀತ್ಸೋದು ತಪ್ಪಾ?’ ಅಂತ ಪಕ್ಕಾ ನಮ್ಮ ಕನ್ನಡದ ಹೀರೋ ರವಿಚಂದ್ರನ್ ಧಾಟಿಯಲ್ಲಿ ಪ್ರಶ್ನಿಸೋದಕ್ಕೂ ಮುನ್ನ ಈತ ಪ್ರೀತ್ಸಿದ್ದು ಯಾರನ್ನು ಎಂಬುದನ್ನು ತಿಳಿದುಕೊಳ್ಳಿ. ಅಷ್ಟಕ್ಕೂ ಆತ ಕದ್ದು ಪ್ರೀತಿಸಿದ್ದು ಮಾತ್ರವೇ ಅಲ್ಲ ಆಕೆಯೊಂದಿಗೆ ಮದುವೆಗೂ ಮುನ್ನವೇ ಕೂಡಿದ್ದು ಯಾರನ್ನು ಗೊತ್ತಾ? ಈತನಿಗೆ ಮರಣದಂಡನೆ ವಿಧಿಸಿದ ಅದೇ ರಾಜನ ಪುತ್ರಿಯನ್ನೇ! ಮಗಳನ್ನು ಕದ್ದು ಬಸುರು ಮಾಡಿದ ವ್ಯಕ್ತಿಯನ್ನು ಯಾವ ವ್ಯಕ್ತಿ ತಾನೇ ಶಿಕ್ಷಿಸದೇ ಸುಮ್ಮನೇ ಬಿಟ್ಟಾನು? ಅದರಲ್ಲೂ ಆತ ಅವನಿಗೆ ಆಶ್ರಯ ಕೊಟ್ಟ ರಾಜನೇ ಈ ಕವಿಯ ಪ್ರೇಯಸಿಯ ಹೆತ್ತವ ಎಂದ ಮೇಲೆ ಕೇಳಬೇಕೇ? ಕವಿಗೆ ಮರಣದಂಡನೆ ವಿಧಿಸಿ, ಜೈಲಿಗಟ್ಟಿಬಿಟ್ಟ; ಮಗಳನ್ನು ಕೋಠಡಿಯಲ್ಲಿ ಕೂಡಿಟ್ಟ ರಾಜ. ಹೀಗೆ ಸೆರೆಮನೆ ಸೇರಿದ ಕವಿಗೆ ಪ್ರೇಯಸಿಯನ್ನು ಮರೆಯಲಾಗಲೇ ಇಲ್ಲ. ಅಲ್ಲಿಯೇ ಆಕೆಯನ್ನು ನೆನಪಿಸಿಕೊಂಡು ರಚಿಸಿದ ಶೃಂಗಾರ ಕಾವ್ಯವೇ ’ಚೌರ- ಪಂಚಾಶಿಕಾ’; ಅದರಲ್ಲಿನ ಪ್ರತಿ ಸಾಲುಗಳೂ ಆತನ ನೆನಪಿನ ಹಂದರವನ್ನು ಬಿಚ್ಚಿಡುತ್ತವೆ.

ಅದ್ಯಾಪಿ ತಂ ಭುಜ-ಲತಾರ್ಪಿತ-ಕಂಠ-ಪಾಶಾಂ,

ವಕ್ಷಸ್ಥಲಂ ಮಮ ಪಿಧಾಯ ಪಯೋಧರಾಭ್ಯಾಮ್

ಈಶನ್ ನಿಮೀಲಿತ ಸಲೀಲ-ವಿಲೋಚನಾಭ್ಯಾಂ,

ಪಶ್ಯಾಮಿ, ಮುಗ್ಧವದನಾಂ ವದನಂ ಪಿಬನ್ತೀಮ್॥

ಹೀಗೆ ಬಣ್ಣಿಸಿದರೆ, ಮುಪ್ಪಡರಿದ ಮನಸುಗಳೂ ಒಮ್ಮೆ ಗರಿಗೆದರಿ ಕುಣಿಯದಿದ್ದೀತೇ? ಕನ್ನಡದಲ್ಲೊಮ್ಮೆ ಕಾವ್ಯದ ಸಾಲುಗಳನ್ನು ಅರ್ಥ ಮಾಡಿಕೊಂಡು ನೋಡಿ. ಕವಿ ಹೇಳುತ್ತಾನೆ; ಆತನಿಗೆ ಮತ್ತೆ ಮತ್ತೆ ನೆನಪಾಗುತ್ತಿದೆಯಂತೆ. ಏನೆಂದರೆ, ಹಾಲ್ದುಟಿಗಳಿಂದ ಸವಿ ಮುತ್ತನ್ನಿತ್ತವಳು, ಕತ್ತನ್ನು ಬಳಸಿ ಎದೆಯೊತ್ತಿ ಅಪ್ಪಿ ಮುದ್ದಾಡಿದ ಕ್ಷಣಗಳು! ಅದೂ ಎಂಥಾ ಎದೆ ಅಂತೀರಾ! ಸುತ್ತಿದ ಕೈಗಳ ನಡುವೆ ತುಂಬಿ ನಿಂತಿದ್ದ ಸಕೋಮಲ, ಮಾಂಸಲ ಎದೆಯದು. ಹಾಗೆ ಅದೆಷ್ಟು ಹೊತ್ತು ತಬ್ಬಿದ್ದಳೋ, ತಬ್ಬಿಬ್ಬಾಗಿದ್ದ ಕವಿ, ಕದ್ದು ನೋಡಿದ್ದು ಅವಳ ಅರೆ ಬಿರಿದ ಕಣ್ಣುಗಳನ್ನು. ಕಣ್ಣುಗಳು ಅರೆಬಿರಿದಿದ್ದರ ಸಂಕೇತವಾದರೂ ಏನು? ರತಿ ಸುಖದ ಪರಮೋಚ್ಛ ಘಟ್ಟ ತಲುಪಿ, ಹಸಿದ ತುಟಿಗೆ ಜೇನ ರಸವನ್ನುಣಿಸಿದ ಆಕೆಯನ್ನು ಮುಗುದೆ ಎಂದೇ ಕವಿ ಬಣ್ಣಿಸುತ್ತಾನೆ. ಅಂದರೆ ಮುಗುದೆಯೊಬ್ಬಳನ್ನು ಪ್ರೀತಿಯ ಬಲೆಗೆ ಕೆಡವಿಕೊಂಡದ್ದು ತಾನೇ ಎಂಬ ಪಶ್ಚಾತ್ತಾಪ ಚಾಲಾಕಿ ಕವಿಗೆ ಕಾಡಿದೆ ಎಂದಾಯ್ತು!

ಹುಡುಗಿಯ ಹೃದಯ ಕದ್ದಷ್ಟು ಸುಲಭದಲ್ಲಿ, ಆಕೆಯ ದೇಹ ಸೂರೆಗೊಂಡ ಸಂಗತಿಯನ್ನು ಬಚ್ಚಿಡಲಾಗದೇ (ಎಷ್ಟುದಿನ ಬಸುರನ್ನು ಬಚ್ಚಿಡಲಾದೀತು?) ಸಿಕ್ಕುಬಿದ್ದ ಯುವ ಕವಿ ಕೊನೆಗೆ ಜೈಲಿನಲ್ಲಿ ಮರಣದ ದಿನಗಳನ್ನು ಎಣಿಸುವಂತಾಗುತ್ತದೆ. ಇನ್ನೇನು ಸಾವಿನ ಕ್ಷಣದವರೆಗೂ, ಆಕೆಯೊಂದಿಗೆ ಕೂಡಿದ ಕ್ಷಣಗಳನ್ನು ಮರೆಯಲಾರದ ಕವಿ ಅದನ್ನೇ, ಬಣ್ಣಿಸಿ ಕಾವ್ಯ ರಚನೆಗೆ ತೊಡಗುತ್ತಾನೆ. ಪ್ರೇಯಸಿಯೊಂದಿಗಿನ ಸುರತದ ಸವಿಯನ್ನು ಹಸಿಹಸಿಯಾಗಿ ಅಕ್ಷರಗಳಲ್ಲಿ ಮೂಡಿಸುತ್ತ ಹೋಗುತ್ತಾನೆ.

ಬಹುತೇಕ ಶೃಂಗಾರ ಕಾವ್ಯಗಳಿಗೆ ಕರ್ತೃವಿನ ವೈಯಕ್ತಿಕ ಬದುಕಿನ ವಿರಹದ ದಳ್ಳುರಿಯೇ ಪ್ರೇರಣೆ ಎಂಬ ಮಾತು ಈತನಿಗೂ ಅನ್ವಯ. ಪ್ರೇಯಸಿಯಿಂದ ದೂರ ತಳ್ಳಲ್ಪಟ್ಟು, ಆಶ್ರಿತನಿಂದಲೇ ಮರಣ ದಂಡನೆಗೆ ಗುರಿಯಾಗಿ ಸೆರೆಮನೆ ಹೊಕ್ಕ ಬಿಲ್ಹಣ ಗೆಳತಿಯೊಂದಿಗಿನ ರಸ ನಿಮಿಷಗಳನ್ನು ಮೆಲುಕುತ್ತಾ ಮರಣದ ದಿನಗಣನೆಗೆ ಶುರುವಿಟ್ಟುಕೊಳ್ಳುವ ಪ್ರಸಂಗ ಮನ ಕಲಕುತ್ತದೆ. ಹಾಗೆ ನೋಡಿದರೆ ವಿಕ್ರಮಾದಿತ್ಯ ಎಂಬ ಹೆಸರಿನ ಹಲವು ರಾಜರ ಪ್ರಸ್ತಾಪ ಪುರಾಣೇತಿಹಾಸದಲ್ಲಿ ಬರುತ್ತದೆ. ಆದರೆ ಬಿಲ್ಲಣ ಆಶ್ರಯಿಸಿದ್ದು ಶುದ್ಧ ಕರುನಾಡಿನ ಕಲ್ಯಾಣ ಚಾಳುಕ್ಯರ ಹೆಸರಾಂತ ದೊರೆ, ಆರನೆಯ ವಿಕ್ರಮಾದಿತ್ಯನನ್ನು. ಆತನ ಆಸ್ಥಾನ ಕವಿಯಾಗಿ ಗೌರವ, ರಾಜಾತಿಥ್ಯಕ್ಕೆ ಪಾತ್ರನಾದ ಈ ಸಂಸ್ಕೃತ ಕವಿ, ತನ್ನ ಐತಿಹಾಸಿಕ ಕಾವ್ಯ ’ವಿಕ್ರಮಾಂಕದೇವ-ಚರಿತ’ದಿಂದಲೇ ಪ್ರಸಿದ್ಧ. ’ಕರ್ಣಸುಂದರಿ’ ನಾಟಕ, ‘ಬಿಲ್ಹಣ ಚರಿತ’ವೆಂಬ ಆತ್ಮಕಥನಗಳಿತ್ಯಾದಿಗಳಿದ್ದರೂ ಆತನನ್ನು ಬಹುವಾಗಿ ಸಾರ್ವಕಾಲಿಕ ವಾಗಿಸಿದ್ದು ಆತನ ’ಚೌರ- ಪಂಚಾಶಿಕಾ’ ಎಂಬ ರಾಸಸ್ಮರಣೆಯ ಶೃಂಗಾರ ಕಾವ್ಯ.

ಅದ್ಯಾಪಿ ಮೇ ವರತರ್ನೋ ಮಧುರಾಣಿ ತಸ್ಯಾಃ

ಯಾನಿ ಅರ್ಥವನ್ತೀ ನ ಚ ಯಾನಿ ನಿರರ್ಥಕಾನಿ

ನಿದ್ರಾ-ನಿಮೀಲಿತ-ದೃಶೋ ಮದಂ ಅನ್ತರಾಯಾಸ್

ತಾನಿ ಅಕ್ಷರಾಣಿ ಹೃದಯೇ ಕಿಂ ಅಪಿ ಧ್ವನನ್ತಿ ॥5॥

ಹೌದು ಇದು ಪಕ್ಕಾ ಕಳ್ಳ ಪ್ರಣಯಿಯ ಕಲ್ಪನಾ ವಿಲಾಸವೇ.

ಮರೆಯಲಾರೆ, ಮರೆಯಲಾರೆ (ಅದ್ಯಾಪಿ) ಎನ್ನುತ್ತಲೇ ತನ್ನ ಬದುಕಿನ ಕೊನೆಯನ್ನು ಜೈಲಿನಲ್ಲಿ ಎದುರು ನೋಡುತ್ತಿರುತ್ತಾನೆ. ಅತ್ಯಂತ ಸಂದಿಗ್ಧ ಸನ್ನಿವೇಶವನ್ನೂ ರಸಗಳಿಗೆಯನ್ನಾಗಿಸಿಕೊಳ್ಳುವ ಕವಿಯ ಅಕ್ಷರ ಚಾತುರ್ಯಕ್ಕೆ ಬೆರಗಾಗದವರು ಯಾರು ತಾನೇ ಇದ್ದಾರು?

ಮತ್ತೊಮ್ಮೆ ಮೇಲಿನ ಶ್ಲೋಕಗಳನ್ನು ಅವಲೋಕಿಸಿ ಕೆಳಗಿನ ಭಾವಾರ್ಥಕ್ಕೆ ಕಣ್ಣಾಡಿಸಿ...

ಇಂದಿಗೂ ಹೃದಯದ ಕೋನಕೋನಗಳಲ್ಲೂ ಮಾರ್ದನಿಸುವ ಆ ಹಿತಕರ ನರಳಾಟದ ಧ್ವನಿ, ಅದನ್ನೆಂತು ಮರೆಯಲಿ? ಎದೆಮಿಡಿತಗಳು ಬೆರೆತ ಆ ಕ್ಷಣಗಳು ಮತ್ತೆ ಮತ್ತೆ ಧ್ವನಿಸುತ್ತಿದೆಯಲ್ಲಿ ಮರಳಿ! ಒಂದಾಗಿ ಕೂಡಿದ ಆ ಕ್ಷಣ ನಿನ್ನ ಕಣ್ಣು ಅರೆ ಮುಚ್ಚಿದ ಸೌಂದರ್ಯ, ಆ ಹಸಿ ಮಾತು, ಬಿಸಿ ಉಸಿರುಗಳ ನಡುವೆ ಮತ್ತೆ ನುಡಿಗಳಿಗೆಲ್ಲಿಯ ಅರ್ಥ, ಅಯ್ಯೋ ಯಾವತ್ತಿಗೂ (ಅದ್ಯಾಪಿ) ಮರೆಯಲಾರೆ...!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.