ಸರ್ವಜ್ಞ ಯಾರಿಗೆ ಗೊತ್ತಿಲ್ಲ ಹೇಳಿ? ಚಿಕ್ಕಂದಿನಿಂದಲೂ ಪಠ್ಯಗಳಲ್ಲಿ ಶುದ್ಧ ಕನ್ನಡದ ಈ ತ್ರಿಪದಿ ಕವಿಯನ್ನು ಓದಿಕೊಂಡು, ಅವನ ಬಗ್ಗೆ ತಿಳಿದುಕೊಂಡು ಬಂದಿದ್ದೇವಲ್ಲವೇ? ಆಡು ಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ಹೇಳದ ವಿಷಯಗಳಿಲ್ಲ ಎಂಬ ಮಾತು ಜನಜನಿತ. ಬಹುಶಃ ಬದುಕನ್ನು ಇಷ್ಟು ವಿಸ್ತಾರವಾಗಿ ಕಂಡ ಇನ್ನೊಬ್ಬ ಇತಿಹಾಸದಲ್ಲಿ ಇರಲಿಕ್ಕಿಲ್ಲ. ಹಾಗಾಗಿಯೇ ಆತ ಸರ್ವಜ್ಞ–ಸರ್ವನ್ನೂ ತಿಳಿದವನು.

ಕನ್ನಡದ ವರಕವಿ ಬೇಂದ್ರೆಯವರು ಬಹಳ ಸೊಗಸಾಗಿ ಸರ್ವಜ್ಞನ ಬಗೆಗೆ ಒಂದು ಸಾಲಿನ ವ್ಯಾಖ್ಯಾನವನ್ನು ನೀಡುತ್ತಾರೆ. ‘ಅವನ ಜಾತಿ ಮಾನವ, ಅವನ ಮತ ದೇವ ಮತ, ಅವನ ಕಾಲ ಸರ್ವಕಾಲ’. ಅಂದರೆ ಜಾತಿ-ಮತ ಕುಲಗಳನ್ನು ಮೀರಿದ ಸರ್ವಜ್ಞ ಒಟ್ಟಾರೆ ಮುನುಕುಲದ ಪ್ರಾತಿನಿಧಿಕ ವ್ಯಕ್ತಿಯಾಗಿ, ಬದುಕಿನ ಅಂತಿಮ ಸತ್ಯಗಳನ್ನು ನಿರ್ಬಿಢೆಯಿಂದ ಸಾರುತ್ತ ಸಾಗಿದವನು. ಹೀಗಾಗಿ ಆತನ ವಚನಗಳಿಗೆ ಶ್ಲೀಲಾಶ್ಲೀಲಗಳ ಭೇದವಿಲ್ಲ. ಸಾಮಾನ್ಯ ಜನರ ಭಾಷೆಯಲ್ಲೇ, ಹಲವು ಬಾರಿ ಶುದ್ಧ ಗ್ರಾಮ್ಯ ಮಾತುಗಳಲ್ಲಿ ಹೇಳಿದ್ದಾನೆ; ಈ ಸಾಹಿತ್ಯ ಸಂತ. ಎಲ್ಲ ದೃಷ್ಟಿಯಿಂದಲೂ ಆತ ಪರಿವ್ರಾಜಕ.
.ಸರಸ ಸಂಧಾನ: ಬಹುವಲ್ಲಭರಿಗೆ ಸಮಾನ ಸುಖ ಹಂಚಿದ ಬಳಿಕವೂ ಆಕೆ ಇನ್ನೂ ಅತೃಪ್ತಳೇ!.‘ಬೆಂಕಿ ಜೊತೆ ಸರಸ ಬೇಡ, ಎಚ್ಚರವಿರಲಿ’.
ಹಾಗೆಂದು ಆತನ ಅರಿವಿನ ಪರಿಧಿಗೆ ಮಿತಿಯಿಲ್ಲ. ಕುತೂಹಲದ ಕಣ್ಣಿನಿಂದ ಎಲ್ಲವನ್ನೂ ಕಂಡ ಸರ್ವಜ್ಞ ತ್ರಿಪದಿಗಳಲ್ಲೇ ಅತ್ಯಂತ ಸೂಕ್ಷ್ಮ, ಚಿಕಿತ್ಸಕ ದೃಷ್ಟಿಯಿಂದ ಜೀವನದ ಎಲ್ಲ ಸ್ತರಗಳ್ನೂ ವಿಶ್ಲೇಷಿಸಿದ್ದಾನೆ. ಹೀಗಾಗಿಯೇ ಆತ ಜನರ ಕವಿಯೆನಿಸಿದನೇನೋ.

ಇಂತಿಪ್ಪ ಸರ್ವಜ್ಞನ ವಚನಗಳಲ್ಲಿ ವೇಶ್ಯೆಯರ ಪ್ರಸ್ತಾಪವೂ ಢಾಳಾಗಿ ಬರುತ್ತವೆ. ಹಾಗಿದ್ದರೂ ಎಲ್ಲಿಯೂ ಕವಿ, ಹೆಣ್ಣಿನ ವ್ಯಕ್ತಿತ್ವಕ್ಕಾಗಲೀ, ವೃತ್ತಿಧರ್ಮಕ್ಕಾಗಲೀ ಮುಕ್ಕು ಬಾರದಂತೆ ಆಕೆಯನ್ನು ಚಿತ್ರಿಸಿದ್ದಾನೆ. ಅಷ್ಟಕ್ಕೂ ವಚನಗಳಲ್ಲಿನ ಸಾಲುಗಳು ಹಲವು ಒಳದನಿಗಳನ್ನುಹೊಮ್ಮಿಸುವುದು ಗ್ರಹಿಕೆಗೆ ಸಿಗದಿಲ್ಲ. ಜಗತ್ತಿನ ಚರಾಚರ ಸಾರ ಸರ್ವಸ್ವದ ಬಗ್ಗೆಯೂ ಬರೆದಿರುವ ಸರ್ವಜ್ಞ, ತನ್ನ ವಚನಗಳಲ್ಲಿ ಶೃಂಗಾರ, ಮಿಲನ, ಸಂಭೋಗದ ಬಗ್ಗೆಯೂ ಬರೆದಿದ್ದಾನೆ. ಹಾಗೆಯೇ ವೇಶ್ಯೆಯರ ಬಗ್ಗೆ, ಸ್ತ್ರೀ ಜಾತಿಗಳ (ಜಾತಿಯೆಂದರೆ ನಮ್ಮ ಭೌತಿಕ ಜಾತಿಗಳಲ್ಲ. ಸ್ತ್ರೀಯರ ದೇಹ ಸ್ವರೂಪ, ಮಾನಸಿಕ ಸ್ಥಿತಿಗಳನ್ವಯ ಕಾಮಿನಿ... ಎಂಬಿತ್ಯಾದಿ ವಿಂಗಡಣೆಗಳಿವೆಯಂತೆ) ಬಗ್ಗೆ ಧಾರಾಳವಾಗಿ ಚಿತ್ರಿಸಿದ್ದಾನೆ.

ಸ್ವತಃ ಬೈರಾಗಿಯಾಗಿದ್ದೂ ಇದನ್ನೆಲ್ಲ ಬರೆಯಲು ಹೇಗೆ ಸಾಧ್ಯವಾಯಿತು? ಹಾಗಿದ್ದ ಮೇಲೆ ‘ಆತ ವಿರಾಗಿ’ ಅನ್ನವುದು ಸುಳ್ಳೇ ಎಂಬಿತ್ಯಾದಿ ಅನುಮಾನಗಳು ಬಾರದಿರದು. ಆದರೆ ಬರೆದಿದ್ದೆಲ್ಲವೂ ಅನುಭವಿಸಿ ಬರೆದದ್ದಲ್ಲ, ಶಾಸ್ತ್ರಾಭ್ಯಾಸ ಅಥವಾ ಲೋಕಾನುಭವದಿಂದ ಹೇಳಿದ ಹಲವು ಸಂಗತಿಗಳಿವೆ. ಈ ವಚನವನ್ನು ನೋಡಿ...

ಅರಳಿಗೆ ಹೂವಿಲ್ಲ ಕುರುಳು ಕೋಡಗಕ್ಕಿಲ್ಲ

ಮರಣಗಾಲಕ್ಕೆ ಮದ್ದಿಲ್ಲ-ಸೂಳೆಗೆ

ಕರುಣವೇ ಇಲ್ಲ ಸರ್ವಜ್ಞ.

ಹೌದು, ವೇಶ್ಯಾ ವೃತ್ತಿಯೇ ಅಂಥದ್ದು. ಹಾಗೆಂದು ಸೂಳೆಯೂ ನಮ್ಮನಿಮ್ಮಂತೆಯೇ ಮನುಷ್ಯಳಲ್ಲವೇ. ಅವಳಿಗೆ ಭಾವನೆಗಳಿಲ್ಲವೇ? ಆಕೆ ಹೆಣ್ಣಾದ ಮೇಲೆ ಕರುಣೆ ಇರುವುದಿಲ್ಲವೇ ಎಂದು ನೀವು ಕೇಳಬಹುದು. ಇಲ್ಲಿ ‘ಕರುಣ’ ಎಂಬುದು ಕೇವಲ ‘ಕನಿಕರ’ ಎಂಬರ್ಥದಲ್ಲಿ ಅಥವಾ ‘ದಯೆ’ ಎಂಬುದಾಗಿ ಬಳಕೆಯಾಗಿಲ್ಲ. ನವರಸಗಳಲ್ಲಿ ಒಂದಾಗಿ ನಿಂತಿರುವ ಕರುಣ ರಸವನ್ನು ಪ್ರತಿನಿಧಿಸಿ ಕವಿ ಈ ಮಾತು ಹೇಳಿದ್ದಾನೆ. ಶೃಂಗಾರ ಆಧಾರಿತ ವೃತ್ತಿಯಲ್ಲಿ ದುಃಖ, ಬೇಸರಗಳನ್ನೆಲ್ಲ ಅವಡುಗಚ್ಚಿ ಅಡಗಿಸಿಟ್ಟು ನಗುತ್ತಲೇ, ತನ್ನ ಬಳಿ ಬರುವ ವಿಟ ಪುರುಷರನ್ನು ಓಲೈಸಬೇಕಾದ ಅನಿವಾರ್ಯಕ್ಕೆ ಸಿಲುಕುವ ವೇಶ್ಯೆಗೆಲ್ಲಿಯ ಕರುಣ?

ಒಳಗೆ ಎಂಥದ್ದೇ ನೋವಿರಲಿ, ತನ್ನ ಬಳಿ ಸುಖವನ್ನಷ್ಟೇ ಬಯಸಿ ಬಂದವರೆದುರು ಆಕೆ ತನ್ನ ಗೋಳನ್ನು ತೋಡಿಕೊಳ್ಳುತ್ತ ಕುಳಿತಳೆಂದಾದರೆ, ಆಕೆಯ ಬಳಿ ಮತ್ತೆ ಯಾರು ಸುಳಿದಾರು? ಹೀಗಾಗಿ ಎಂಥದ್ದೇ ಸನ್ನಿವೇಶವಿರಲಿ, ತಾನು ದೈಹಿಕ–ಮಾನಸಿಕವಾಗಿ ಯಾವುದೇ ರೀತಿಯ ವೇದನೆಯನ್ನು ಅನುಭವಿಸುತ್ತಿರಲಿ, ಅದನ್ನು ತೋರಗೊಡದೇ, ಅವುಡುಗಚ್ಚಿ ಸಹಿಸಿ, ಮೇಲಿಂದ ನಗುನಗುತ್ತಲೇ ತನ್ನ ಗಿರಾಕಿಗೆ ’ತೃಪ್ತಿಯನ್ನು‘ ಉಣಬಡಿಸಬೇಕಾದ ಅನಿವಾರ್ಯ ಅವಳದ್ದು. ಸೂಳೆಯೊಬ್ಬಳ ದುಃಖಕ್ಕೆ ಓಗೊಡುವವರೂ ಯಾರೂ ಇಲ್ಲ, ಆಕೆ ಯಾರೊಂದಿಗೂ ತನ್ನ ನೋವನ್ನೂ ತೋಡಿಕೊಳ್ಳಲಾರಳು ಎಂಬ ಹೃದ್ಯ ಕಳಕಳಿ ಈ ಸಾಲುಗಳಲ್ಲಿ ವ್ಯಕ್ತವಾಗುತ್ತವೆ.

‘ಕರುಣ’ ಎಂಬ ಒಂದೇ ಪದದಲ್ಲಿ ವೇಶ್ಯಾವೃತ್ತಿಯ ಒಳಬೇಗುದಿಯನ್ನು ಸರ್ವಜ್ಞ ಸಾದರ ಪಡಿಸುತ್ತಾನೆ. ಇಲ್ಲಿ ಇನ್ನೂ ಒಂದು ಒಳಾರ್ಥವಿದೆ. ಕರು-ಎಂಬುದಕ್ಕೆ ‘ಮರಿ’ ಎಂಬರ್ಥವೂ ಇದೆ. ‘ಣ’ ಅಂದರೆ ಗಣ ಸಮೂಹ ಎಂದಾಗುತ್ತದೆ. ಅಂದರೆ ವೇಶ್ಯೆಗೆ ಮಕ್ಕಳ-ಮರಿಗಳ ಹಂಗು ಇಲ್ಲವೆಂತಲೂ ಅರ್ಥೈಸಬಹುದು.

ಅವನದೇ ಇನ್ನೊಂದು ತ್ರಿಪದಿಯನ್ನು ನೋಡಿ. ಇದರಲ್ಲಿ ವೃತ್ತಿಪರತೆಯನ್ನು ಕವಿ ಇಷ್ಟು ನೇರವಾಗಿ ಪ್ರತಿಪಾದಿಸಿದ್ದಾನೆಂದರೆ ಎಲ್ಲ ವೃತ್ತಿಗಳಿಗೂ ಇದು ಅನ್ವಯವಾಗುತ್ತದೆ.

ಅರಳೆಗೆ ರಸವಿಲ್ಲ ಮರುಳಿಗೆ ನಿಜವಿಲ್ಲ

ದುರುಳರಿಗೆ ಆರು ಹಿತರಿಲ್ಲ-ಸೂಳೆಗೆ

ಸುರುಳುಗಳಿಲ್ಲ ಸರ್ವಜ್ಞ

ಅಂದರೆ ಮೇಲ್ನೋಟಕ್ಕೆ ನಾವು ಅರ್ಥ ಮಾಡಿಕೊಳ್ಳುವುದು ಸಂಭೋಗಕ್ಕಿಳಿದ ಹೆಣ್ಣು–ಗಂಡುಗಳು ಪರಸ್ಪರ ಒಬ್ಬರನ್ನೊಬ್ಬರು ಅರ್ಪಿಸಿಕೊಂಡು, ಆ ಕ್ಷಣದಲ್ಲಿ ಎರಡು ದೇಹಗಳೂ ಬೆಸೆದುಕೊಂಡು ‘ಸುರಳಿ‘ಯಾಗಿ, ಒಂದೇ ಆಗಿಬಿಡುವುದು. ಆ ಹಂತದಲ್ಲಿ ಮಾನಸಿಕ ಸಮರ್ಪಣೆ ಅತ್ಯಂತ ಮುಖ್ಯ. ಮನಸೋ ಇಚ್ಛೆ ಸರಸಕ್ಕೆ ಇಳಿದಾಗ ಮಾತ್ರವೇ ಅಂಥ ಸಮರ್ಪಣೆ ಸಾಧ್ಯ. ಅದಿಲ್ಲದಿದ್ದರೆ, ಅದು ಶುಷ್ಕ ಕ್ರಿಯೆಯಾಗುತ್ತದೆ. ಸೂಳೆ ಎಲ್ಲರಿಗೂ ಹೀಗೆ ಮನಸನ್ನು ಕೊಡಲು ಸಾಧ್ಯವಿಲ್ಲದೇ ಯಾಂತ್ರಿಕವಾಗಿ ತನ್ನನ್ನು ಸಂಭೋಗಕ್ಕೆ ಒಪ್ಪಿಸಿಕೊಳ್ಳುತ್ತಳೆ ಎಂಬ ಅರ್ಥ ಇಲ್ಲಿ ಧ್ವನಿಸುತ್ತದೆ.

ಆದರೆ, ನಿಜವಾಗಿ ಸರ್ವಜ್ಞ ಹೇಳಿದ್ದು ಅದನ್ನಲ್ಲ. ಇಲ್ಲಿ ‘ಸೂಳೆ-ಸುರುಳಿ’ ಎಂಬುದು ಕೇವಲ ಆದಿ ಪ್ರಾಸಕ್ಕೆ ಬಳಸಿದ ಪದಗಳಲ್ಲ. ಸೂಳೆ ಕೇವಲ ವೇಶ್ಯೆಯೂ ಅಲ್ಲ. ಸುರುಳೆಂದರೆ ಕೇವಲ ಸುತ್ತಿಕೊಳ್ಳುವುದಷ್ಟೇ ಅಲ್ಲ, ಅದು ಬೆದರಿಕೆಯ ಸಂಕೇತ. ಭಯದ ಧ್ವನಿತ. ಮಾನಸಿಕ ವ್ಯಭಿಚಾರಕ್ಕೊಳಗಾದ ಪ್ರತಿ ವ್ಯಕ್ತಿಗಳಲ್ಲಿ ಭಂಡತನ ಸಹಜ. ಸಮಾಜದ ಯಾವ ನೈತಿಕತೆಯೂ ಅವರನ್ನು ಕಾಡದು. ಮರುಳುತನಕ್ಕೆ ತುತ್ತಾದವರು ನಿರ್ಲಜ್ಜರಾಗಿಯೇ ವರ್ತಿಸುವುದಲ್ಲವೇ? ಹಾಗೆಯೇ ಸೂಳೆಯರು ಸಹ ಸನ್ನಿವೇಶದ ಅನಿವಾರ್ಯಕ್ಕೆ ಸಿಲುಕಿ, ಯಾವ ಭಾವ ಪ್ರವಾಹಕ್ಕೂ ಸಿಲುಕದೇ ಕೇವಲ ಕೊರಡಾಗಿಬಿಟ್ಟಿರುತ್ತಾರೆ ಎಂಬ ಒಳಾರ್ಥವನ್ನು ಕವಿ ಈ ಸಾಲುಗಳ ಮೂಲಕ ಧ್ವನಿಸುತ್ತಾನೆ.

ಇಂಥ ಒಳತೋಟಿಗಳಿಂದಲೇ, ಅವನ ಮಾತುಗಳು ಜನಮನವನ್ನು ನೇರವಾಗಿ ತಟ್ಟಿದವು. ತಟ್ಟಿ ಎಚ್ಚರಿಸಿದವು. ತನ್ನ ಆಳವಾದ ಅನುಭವಗಳನ್ನು ತ್ರಿಪದಿಗಳ ಮುಖಾಂತರ ಹೊರಹೊಮ್ಮಿಸಿದನು. ಸರ್ವಜ್ಞನಿಗೆ ಸಮಾಜದ ಹಾಗೂ ಭಯ ಇರಲಿಲ್ಲ. ಅದರಿಂದಲೇ ಕಂಡದ್ದನ್ನೂ ಕಂಡ ಹಾಗೆ ಹೇಳಿದನು. ಮುಚ್ಚಿ ಹೇಳುವುದರಲ್ಲಿ ಅವನಿಗೆ ಆಸಕ್ತಿ ಇರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.