ಆಲಮೇಲ: ‘ಸುಗಮ ಸಂಗೀತಕ್ಕೆ ಶಾಂತಿ ವೃದ್ಧಿ ಮಾಡುವ ಶಕ್ತಿಇದೆ. ಸಂಗೀತ, ಜಾನಪದ ಮತ್ತು ನಾಟಕದ ಮೂಲಕ ಗ್ರಾಮೀಣ ಭಾಗದಲ್ಲಿ ಯುವಕರಿಗೆ ಜ್ಞಾನ ತುಂಬುತ್ತಿರುವ ಭಾಗ್ಯವಂತಿ ಸಂಸ್ಕೃತಿ ನಾಟ್ಯ ಕಲಾ ಸಂಘದ ಕಾರ್ಯ ಶ್ಲಾಘನೀಯ’ ಎಂದು ಜೇರಟಗಿ ವಿರಕ್ತಮಠದ ಮಹಾಂತ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಕುಳೇಕುಮಟಗಿ ಗ್ರಾಮದ ಶ್ರೀರಾಮಗಿರಿ ಮಠದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶ್ರೀ ಭಾಗ್ಯವಂತಿ ಕಲಾ ನಾಟ್ಯಸಂಘ ಹಮ್ಮಿಕೊಂಡಿದ್ದ ಸಂಗೀತ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಯುವಕರಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿದ್ದು, ಅವರಲ್ಲಿ ಸಂಗೀತ, ನಾಟಕ, ಪ್ರವಚನ, ಪುರಾಣ, ಜಾನಪದ ಕುರಿತು ಆಸಕ್ತಿ ಇಲ್ಲವಾಗಿದೆ. ಯುವಕರು ಶಿಕ್ಷಣದ ಅವಶ್ಯಕತೆಗೆ ಮಾತ್ರ ಮೊಬೈಲ್ ಬಳಸಬೇಕು. ಬಿಡುವಿನ ಸಮಯದಲ್ಲಿ ಒಳ್ಳೆಯ ಸಂಗೀತ ಕೇಳಬೇಕು, ಪುಸ್ತಕಗಳನ್ನು ಓದಬೇಕು. ಪೋಷಕರು ಮಕ್ಕಳಲ್ಲಿ ಸಂಗೀತ ಆಸಕ್ತಿ ಬೆಳೆಸಿ’ ಎಂದರು.

ಕಲಾವಿದರಿಂದ ಕಥಾ ಕೀರ್ತನೆ, ಜಾನಪದ ಸಂಗೀತ, ಸುಗಮ ಸಂಗೀತ, ವಚನ ಗಾಯನ, ಭಾವಗೀತೆ, ದಾಸವಾಣಿ, ಗಜಲ್ ಗಾಯನಗಳು ಜರುಗಿದವು. ರಾಮಗಿರಿಮಠದ ಬಸಯ್ಯ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ರಾಜೂಗೌಡ ಪಾಟೀಲ, ಬಸಲಿಂಗಪ್ಪ ಬೋನಾಳ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-26-1382472253

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.