ಬುಧವಾರ, 20 ಮೇ 2026
×
ADVERTISEMENT

ಲಯದ ಮುದದ ಅಧ್ಯಾಯ: ಸೂರ್ಯ ಪ್ರಭೆಯ ‘ಆಶಾ ತಾಯಿ’

ಸಂಗೀತಾ ಕಟ್ಟಿ
Published : 12 ಏಪ್ರಿಲ್ 2026, 21:30 IST
Last Updated : 12 ಏಪ್ರಿಲ್ 2026, 23:49 IST
ADVERTISEMENT
ಫಾಲೋ ಮಾಡಿ
Comments
ಆಶಾ ಭೋಸ್ಲೆ

ಆಶಾ ಭೋಸ್ಲೆ

ಕಠಿಣ ತಪಸ್ಸು, ಸ್ವ ಪ್ರಯತ್ನ ಕಿಶೋರ್‌ ಕುಮಾರ್‌ ಜೊತೆ ಆಶಾ ಭೋಸ್ಲೆ ಸ್ಟುಡಿಯೊಕ್ಕೆ ಹೋದಾಗ ಅವರ ಸ್ವರ ಸರಿಯಿಲ್ಲ ವೆಂದು ತಿರಸ್ಕರಿಸಿದ್ದರಂತೆ. ಒಂದು ಸಂದರ್ಶನದಲ್ಲಿಇದನ್ನು ಅವರು ಹೇಳಿಕೊಂಡಿದ್ದರು. ಕಠಿಣ ತಪಸ್ಸು, ಸ್ವ ಪ್ರಯತ್ನವೇ ಅವರನ್ನು ಔನ್ನತ್ಯಕ್ಕೆ ಕೊಂಡೊಯ್ಯಿತು. ಭಾರತದಲ್ಲಿ ಮಾತ್ರವಲ್ಲ, ಇಟಲಿ, ಸ್ಪ್ಯಾನಿಷ್, ಲ್ಯಾಟಿನ್, ಜರ್ಮನ್ ಭಾಷೆಯ ಸಂಗೀತಗಾರರಿಗೂ ಆಶಾ ಭೋಸ್ಲೆ ಚಿರ ಪರಿಚಿತರಾದರು. ಶಾಸ್ತ್ರೀಯ ಸಂಗೀತದದ ಬಗೆಗೆ ಅವರಿಗೆ ಅಪಾರ ಗೌರವವಿತ್ತು, ಕಳಕಳಿ ಇತ್ತು.
‘ಸಂಗೀತ ಕ್ಷೇತ್ರದಲ್ಲಿ ಶೂನ್ಯ ಸೃಷ್ಟಿ’: ಗಾಯಕಿ ಆಶಾ ಭೋಸ್ಲೆ ಅವರ ನಿಧನವು ಸಂಗೀತ ಕ್ಷೇತ್ರದಲ್ಲಿ ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ. ಸಂಗೀತ ಪ್ರಿಯರಿಗೆ ತುಂಬಲಾರದ ನಷ್ಟವಾಗಿದೆ. ಅವರ ಸಂಗೀತವು ಸದಾ ಕಾಲ ಜೀವಂತ. ಅವರೊಂದಿಗಿನ ವೈಯಕ್ತಿಕ ಒಡನಾಟದ ನೆನಪುಗಳು ಅಚ್ಚಳಿಯದೆ ಉಳಿಯುತ್ತವೆ
-ದ್ರೌಪದಿ ಮುರ್ಮು, ರಾಷ್ಟ್ರಪತಿ
‘ಭೋಸ್ಲೆ ಗೀತೆಗಳು ಚಿರಸ್ಥಾಯಿ’: ಆಶಾ ಭೋಸ್ಲೆ ಅವರ ಅಸಾಧಾರಣ ಸಂಗೀತ ಪಯಣವು ದಶಕಗಳ ಕಾಲ ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿತ್ತು ಹಾಗೂ ಜಗತ್ತಿನಾದ್ಯಂತ ಅಸಂಖ್ಯಾತ ಹೃದಯಗಳನ್ನು ಮುಟ್ಟಿತ್ತು. ಅವರ ಗೀತೆಗಳು ಜನಮಾನಸದಲ್ಲಿ ಸದಾಕಾಲ ಅನುರಣಿಸುತ್ತಿರುತ್ತವೆ. ಭಾರತ ಕಂಡ ಅಪರೂಪದ ವಿಶಿಷ್ಟ ಧ್ವನಿ ಅವರದ್ದು. ಅವರೊಂದಿಗಿನ ಮಾತುಕತೆಯು ನನ್ನ ನೆನಪಿನಾಳದಲ್ಲಿ ಉಳಿಯಲಿದೆ
ನರೇಂದ್ರ ಮೋದಿ, ಪ್ರಧಾನಿ
‘ಭೋಸ್ಲೆ ಧ್ವನಿ, ಕಲೆ ಅಮರ’: ಆಶಾ ಭೋಸ್ಲೆ ಅವರು ತಮ್ಮ ವಿಶಿಷ್ಟ ಧ್ವನಿ ಹಾಗೂ ಕಲೆಯ ಮೂಲಕ ನಮ್ಮ ನಡುವೆ ಅಮರರಾಗಿರುತ್ತಾರೆ.ಈ ದುಃಖದ ಸಮಯದಲ್ಲಿ, ಅವರ ಪ್ರೀತಿಪಾತ್ರರು ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು
ರಾಹುಲ್‌ ಗಾಂಧಿ, ಲೋಕಸಭೆಯ ವಿರೋಧ ಪಕ್ಷದ ನಾಯಕ
‘ಭಾರತೀಯ ಸಂಗೀತಕ್ಕೆ ದುಃಖದ ದಿನ: ನಮ್ಮ ಪ್ರೀತಿಯ ಆಶಾ ತಾಯಿ ಇನ್ನಿಲ್ಲ ಎಂಬುದನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಭಾರತೀಯ ಸಂಗೀತಕ್ಕೆ ಅತ್ಯಂತ ದುಃಖದ ದಿನವಿದು. ಸಂಗೀತಗಾರನಾಗಿ, ದೀದಿಯ ಆರಾಧಕನಾಗಿ, ಅವರ ಕುಟುಂಬದ ಆಪ್ತ ಸ್ನೇಹಿತನಾಗಿ ಮತ್ತು ಅವರನ್ನು ಸರಸ್ವತಿ ದೇವಿಯಂತೆ ಕಾಣುತ್ತಿದ್ದ ನನಗೆ ಆಗುತ್ತಿರುವ ದುಃಖವನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ಪ್ರತಿಯೊಬ್ಬ ಭಾರತೀಯನ ಹೃದಯ ಒಡೆದುಹೋಗಿದೆ
ಶಂಕರ್‌ ಮಹದೇವನ್‌, ಹಿನ್ನೆಲೆ ಗಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT