ಭಾರತೀಯ ಚಿತ್ರರಂಗದ ದಿಗ್ಗಜ ಗಾಯಕಿ ಆಶಾ ಭೋಸ್ಲೆ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ್ದು ಕಡಿಮೆ. 1970ರ ದಶಕದಲ್ಲಿ ಐಟಂ ಸಾಂಗ್ಗೆ ಜನಪ್ರಿಯರಾಗಿದ್ದ ಅವರು ಕನ್ನಡದಲ್ಲಿ ಮೂರು ಹಾಡುಗಳನ್ನು ಹಾಡಿದ್ದಾರೆ.

1967ರಲ್ಲಿ ತೆರೆಕಂಡಿದ್ದ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಸಿನಿಮಾದ ‘ಯಾಕೋ ಏನೋ ಜಾರಿ’ ಎಂಬ ಹಾಡನ್ನು ಇವರು ಹಾಡಿದ್ದರು. ಚಿತ್ರಕ್ಕೆ ಲಕ್ಷ್ಮಣ್ ಬೆರಲೇಕರ್ ಸಂಗೀತವಿತ್ತು. 1973ರಲ್ಲಿ ತೆರೆಕಂಡ ರಾಜ್ಕುಮಾರ್ ನಟನೆಯ ‘ದೂರದ ಬೆಟ್ಟ’ ಸಿನಿಮಾದ ‘ಸವಾಲು ಹಾಕಿ ಸೋಲಿಸಿ..’ ಎಂಬ ಹಾಡನ್ನು ಪಿ.ಬಿ.ಶ್ರೀನಿವಾಸ್ ಜತೆಗೂಡಿ ಹಾಡಿದ್ದರು.

2010ರಲ್ಲಿ ತೆರೆಕಂಡ ‘ಮತ್ತೆ ಮುಂಗಾರು’ ಸಿನಿಮಾದ ‘ಹೇಳದೆ ಕಾರಣ..’ ಎಂಬ ಹಾಡನ್ನು ಹಾಡಿದ್ದಾರೆ. ಇದಕ್ಕೆ ಎಕ್ಸ್. ಪೌಲ್ರಾಜ್ ಸಂಗೀತವಿತ್ತು.

‘ಭಾರತೀಯ ಚಿತ್ರರಂಗದ ಮೇರುಧ್ವನಿಯನ್ನು ಕಳೆದುಕೊಂಡಿದ್ದೇವೆ. ಕನ್ನಡ ಚಿತ್ರರಂಗದೊಂದಿಗೆ ಆಶಾ ಅವರಿಗೆ ಒಡನಾಟ ಕಡಿಮೆ. ಕೆಲವೇ ಹಾಡುಗಳನ್ನು ಹಾಡಿದ್ದರು. ದಕ್ಷಿಣ ಭಾರತದಲ್ಲಿ ಇಳಯರಾಜ ಹೊರತಾಗಿ ಬೇರೆ ಸಂಗೀತ ನಿರ್ದೇಶಕರ ಜತೆ ಅವರ ಒಡನಾಟ ಕಡಿಮೆ’ ಎಂದರು ಸಂಗೀತ ನಿರ್ದೇಶಕ ವಿ.ಮನೋಹರ್.

‘15 ವರ್ಷಗಳ ಹಿಂದೆ ಲತಾ ಮಂಗೇಶ್ವರ್ ಅವರನ್ನು ಭೇಟಿ ಮಾಡಲು ಮುಂಬೈನ ಅವರ ಮನೆಗೆ ಹೋಗಿದ್ದೆ. ಆಗ ಆಶಾ ಭೋಸ್ಲೆ ಅವರನ್ನು ಭೇಟಿಯಾದೆ. ಅವರು ಮಾತನಾಡುವ ರೀತಿಯೇ ಮಗುವಿನ ಥರ ಇತ್ತು. ಇವರಿಬ್ಬರು ಸಹೋದರಿಯರಾದರೂ ಹಾಡಿರುವ ಜಾನರ್ ವಿಭಿನ್ನ. ಆ ಕಾಲಕ್ಕೆ ಐಟಂ ಸಾಂಗ್ಗಳನ್ನು ಹಾಡಿ ಜನಪ್ರಿಯರಾದವರು ಆಶಾ ಭೋಸ್ಲೆ. ಈಗ ಅವರ ಹಾಡುಗಳನ್ನು ರಿಮಿಕ್ಸ್ ಮಾಡಿದ್ದು ಕೂಡ ಸೂಪರ್ ಹಿಟ್ ಆಗುತ್ತಿವೆ. ಕನ್ನಡದಲ್ಲಿ ಅವರನ್ನು ಕರೆತಂದು ಹಾಡಿಸಿದ್ದು ಬಹಳ ಕಡಿಮೆ. ಸಂಗೀತ ಜಗತ್ತಿನಲ್ಲಿ ಅವರ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ’ ಎಂದು ಲಹರಿ ವೇಲು ಆಶಾ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-51-1832156311

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.