ಮೇರು ಗಾಯಕಿ ಆಶಾ ಭೋಸ್ಲೆ ಅವರು ನಿಧನರಾಗಿರುವ ಇದೇ ಹೊತ್ತಿನಲ್ಲಿ, ಬರೇಲಿಯ ಸಾಂಪ್ರದಾಯಿಕ ಜುಮ್ಕಾ (ಕಿವಿಯೋಲೆ) ಮತ್ತೆ ಟ್ರೆಂಡ್ ಸೃಷ್ಟಿಸಿದೆ. ಅಕ್ಷಯ ತೃತೀಯ ಹಬ್ಬಕ್ಕೆ ಅನೇಕ ಯುವತಿಯರು ಈ ‘ಜುಮ್ಕಾ’ವನ್ನು ಖರೀದಿಸಲು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ ಎಂದು ಆಭರಣ ವ್ಯಾಪಾರಿಗಳು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ರವೀಂದ್ರ ಕುಮಾರ್ ಅವರು, ‘1966ರ ‘ಮೇರಾ ಸಾಯಾ’ ಚಿತ್ರದ ‘ಜುಮ್ಕಾ ಗಿರಾ ರೆ, ಬರೇಲಿ ಕೆ ಬಜಾರ್ ಮೇ’ ಹಾಡಿಗೆ ಆಶಾ ಅವರು ಧ್ವನಿ ನೀಡಿದ್ದರು. ಈ ಹಾಡು ಬರೇಲಿ ನಗರಕ್ಕೆ ಒಂದು ವಿಶಿಷ್ಟ ಸಾಂಸ್ಕೃತಿಕ ಗುರುತನ್ನು ನೀಡಿತ್ತು. ಅಷ್ಟೇ ಅಲ್ಲದೆ, ಭಾರತ ಮತ್ತು ವಿದೇಶಗಳಲ್ಲಿ ಈ ‘ಜುಮ್ಕಾ’ವು ಮಾರುಕಟ್ಟೆಗಳಲ್ಲಿ ಜನಪ್ರಿಯವಾಗಲು ಈ ಹಾಡು ಪ್ರಮುಖ ಕಾರಣವಾಗಿದೆ’ ಎಂದಿದ್ದಾರೆ.

‘ಆಶಾ ಅವರ ನಿಧನದ ಹೊತ್ತಿನಲ್ಲೇ ಈ ಹಾಡು ಮತ್ತೆ ಪ್ರಸಿದ್ಧಿ ಪಡೆದು, ಯುವತಿಯರು ಬರೇಲಿ ‘ಜುಮ್ಕಿ’ ಖರೀದಿಸಲು ಹೆಚ್ಚು ಒಲವು ತೋರುತ್ತಿದ್ದಾರೆ. ಅಲ್ಲದೆ, ಪ್ರವಾಸಿಗರು, ಯಾತ್ರಿಕರು ಮತ್ತು ಸಂದರ್ಶಕರು ಕೂಡ ಈ ಕಿವಿಯೋಲೆ ಬಗ್ಗೆ ತಿಳಿಯಲು ಆಸಕ್ತಿ ತೋರುತ್ತಿದ್ದಾರೆ. ಬರೇಲಿಯ ಈ ಸಾಂಪ್ರದಾಯಿಕ ಜುಮ್ಕಾಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಬೆಲೆಯೂ ದುಪ್ಪಟ್ಟಾಗುತ್ತಿದೆ ಎಂದು ರವೀಂದ್ರ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು, ಆಶಾ ಭೋಸ್ಲೆ ಅವರು ಎಂಟು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ ಕನ್ನಡ, ಹಿಂದಿ ಸೇರಿ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಸುಮಾರು 12,000ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಇವರ ಅಪ್ರತಿಮ ಸಾಧನೆಗಾಗಿ ಭಾರತ ಸರ್ಕಾರವು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-4-1794373361

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.