ಬೆಂಗಳೂರು: ಎಸಿಟಿಸಿ ಈವೆಂಟ್ಸ್ ಇದೇ 16ರಂದು ಸಂಜೆ 6.30ಕ್ಕೆ ಭಾರತೀಯ ಮಾಲ್ ಆಫ್ ಬೆಂಗಳೂರಿನಲ್ಲಿ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಅವರ ನೇತೃತ್ವದಲ್ಲಿ ಸಂಗೀತ ಕಛೇರಿ ಹಮ್ಮಿಕೊಂಡಿದೆ.

ಈ ಕಾರ್ಯಕ್ರಮ ‘ಪ್ರಜಾವಾಣಿ’ ಮಾಧ್ಯಮ ಸಹಯೋಗದಲ್ಲಿ ನಡೆಯಲಿದೆ. ಕನ್ನಡದ ಜನಪ್ರಿಯ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿರುವ ಅಜನೀಶ್ ಲೋಕನಾಥ್ ಅವರು, ‘ಕಾಂತಾರ’ ಸೇರಿದಂತೆ ಹಲವು ಯಶಸ್ವಿ ಚಲನಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಪ್ರಭಾವಶಾಲಿ ಸಂಗೀತ ಸಂಯೋಜಕರಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟಿರುವ ಅವರ ಚಿತ್ರರಂಗದ ಪಯಣ ವೇದಿಕೆ ಮೇಲೆ ಅನಾವರಣಗೊಳ್ಳಲಿದೆ.

ಈ ಸಂಗೀತ ಕಛೇರಿಯಲ್ಲಿ ವಿಜಯ್ ಪ್ರಕಾಶ್, ಮಂಗ್ಲಿ, ನಕಾಶ್ ಅಜೀಜ್, ಅನನ್ಯಾ ಭಟ್, ಸಾನ್ವಿ ಸುದೀಪ್, ಸಂಜಿತ್ ಹೆಗಡೆ, ಹರಿಶಂಕರ್, ಅಬ್ಬಿ ವಿ., ವಾಸುಕಿ ವೈಭವ್, ಅನಿರುದ್ಧ್, ಐಶ್ವರ್ಯ ರಂಗರಾಜನ್, ರಾಮ್ದಾಸ್, ಸಾಯಿ ವಿಘ್ನೇಶ್, ಹರ್ಷಿಕಾ, ಬಾಬಿ ಸೇರಿದಂತೆ ಹಲವು ಗಾಯಕರು ಪಾಲ್ಗೊಳ್ಳಲಿದ್ದಾರೆ.

ಟಿಕೆಟ್ಗಳು ‘ಬುಕ್ ಮೈ ಶೋ’ದಲ್ಲಿ ಲಭ್ಯವೆಂದು ಆಯೋಜಕರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-4-420563757

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.