ಬೆಂಗಳೂರು: ಶಿಕ್ಷಣ ತಜ್ಞ ಬಿ.ಎನ್. ಗೋಪಾಲ್ ಅವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಅದ್ವೈತ ಫೌಂಡೇಷನ್ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹಿಂದೂಸ್ತಾನಿ ಸಂಗೀತ ಕಛೇರಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು.

ಹಿಂದೂಸ್ತಾನಿ ಗಾಯಕಿ ಪರ್ವೀನ್ ಸುಲ್ತಾನ್ ಅವರ ಗಾಯನಕ್ಕೆ ಪ್ರೇಕ್ಷಕರು ತಲೆದೂಗಿದರು. ಅವರಿಗೆ ತಬಲಾದಲ್ಲಿ ವಿಶ್ವನಾಥ ನಾಕೋಡ್ ಹಾಗೂ ಹಾರ್ಮೋನಿಯಂನಲ್ಲಿ ರವೀಂದ್ರ ಗುರುರಾಜ ಕಾಟೋಟಿ ಸಾಥ್ ನೀಡಿದರು. ಕಿಕ್ಕಿರಿದು ಸೇರಿದ್ದ ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ಸಂಗೀತ ಸುಧೆಯನ್ನು ಹರಿಸಿದರು.

ಮನಸೆಳೆಯುವ ಗಮಕಗಳು, ತಾನ್ಗಳಲ್ಲಿನ ವಿಶಿಷ್ಟ ಏರಿಳಿತವು ನೆರೆದಿದ್ದವರನ್ನು ಮಂತ್ರಮುಗ್ಧ ಗೊಳಿಸಿತು. ‘ಪದ್ಮಭೂಷಣ’ ಪುರಸ್ಕೃತ ಗಾಯಕಿಯಾಗಿರುವ ಅವರು, ಇಳಿ ವಯಸ್ಸಿನಲ್ಲಿಯೂ ಗಾಯನದ ಪ್ರಾರಂಭ ದಲ್ಲಿ ‘ತಾವು ಈಗಲೂ ಸಂಗೀತದ ವಿದ್ಯಾರ್ಥಿ’ ಎಂದು ಹೇಳುವ ಮೂಲಕ ಸರಳತೆ ಮೆರೆದರು.

ಇದಕ್ಕೂ ಮೊದಲು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಅವರನ್ನು ಗೌರವಿಸಲಾಯಿತು. ಕಾನೂನು ಸಚಿವ ಎಚ್.ಕೆ. ಪಾಟೀಲ, ಬಿ.ಎನ್. ಗೋಪಾಲ್ ಅವರ ಪುತ್ರರೂ ಆಗಿರುವ ಅದ್ವೈತ ಫೌಂಡೇಷನ್ ಅಧ್ಯಕ್ಷ ಬಿ.ಜಿ.ಅರುಣ್ ಕುಮಾರ್, ಭಾರತೀಯ ವಿದ್ಯಾಭವನದ ಅಧ್ಯಕ್ಷ ಕೆ.ಜಿ. ರಾಘವನ್ ಉಪಸ್ಥಿತರಿದ್ದರು.

ಬಿ.ಎನ್. ಗೋಪಾಲ್ ಅವರ ಸಂಗೀತ ಪ್ರೇಮದ ಬಗ್ಗೆ ವಿವರಿಸಿದ ಶಿಕ್ಷಣ ತಜ್ಞ ಕೆ.ಇ.ರಾಧಾಕೃಷ್ಣ, ‘ಬಿ.ಎನ್.ಗೋಪಾಲ್ ಅವರು ಬಹುಮುಖ ಪ್ರತಿಭೆ ಹೊಂದಿದ್ದ ವ್ಯಕ್ತಿಯಾಗಿದ್ದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ನಂತರ, ಅನೇಕ ಅತ್ಯುನ್ನತ ಸಾಧನೆ ಮಾಡುವ ಅವಕಾಶವನ್ನು ಹೊಂದಿದ್ದರು. ಆದರೆ, ಅವರು ವಿಭಿನ್ನ ಮಾರ್ಗವನ್ನು ಆಯ್ಕೆ ಮಾಡಿಕೊಂಡು, ಶಿಕ್ಷಣ ಕ್ಷೇತ್ರದಲ್ಲಿ ಮುಂದೆ ಸಾಗಿದರು. ಸಾವಿರಾರು ವಿದ್ಯಾರ್ಥಿಗಳ ಜೀವನವನ್ನು ರೂಪಿಸಿದರು. ಅವರು ಹಿಂದೂಸ್ತಾನಿ ಸಂಗೀತದ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ಮಿದುಳಿನ ಕ್ಯಾನ್ಸರ್ ಎದುರಿಸಿದ ಅವರಿಗೆ ಆ ವೇಳೆ ಸಂಗೀತವು ಶಕ್ತಿಯಾಯಿತು’ ಎಂದು ಸ್ಮರಿಸಿಕೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-4-1300296955

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.