ಬೆಂಗಳೂರು: ‘ತಂದೆಯವರು ಎಲ್ಲ ರೀತಿಯ ಹಾಡುಗಳನ್ನು ಕೇಳುತ್ತಿದ್ದರು. ಅದರಲ್ಲಿ ಗಝಲ್ಗಳನ್ನು ಹೆಚ್ಚು ಇಷ್ಟಪಡುತ್ತಿದ್ದರು’ ಎಂದು ರಾಜ್ಕುಮಾರ್ ಅವರ ಮಗಳು ಪೂರ್ಣಿಮಾ ರಾಮ್ಕುಮಾರ್ ನೆನಪು ಮಾಡಿಕೊಂಡರು.

ಆರ್. ಮಂಜುನಾಥ್ ಚವಾಣ್ ಮತ್ತು ಸೌಮ್ಯಾ ಮಂಜುನಾಥ್ ಚವಾಣ್ ಅವರ ‘ನಾದಯೋಗಿ ಡಾ. ರಾಜಕುಮಾರ್’ ಕೃತಿ ಜನಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಮ್ಮ ಮನೆಯೇ ಸಂಗೀತಮಯವಾಗಿತ್ತು. ರಾಜ್ ಕುಮಾರ್ ಅವರು ಸರಳ ಮತ್ತು ಸುಲಭವಾಗಿ ಹಾಡುತ್ತಿದ್ದರು. ಹಾಗಾಗಿ ಯಾರೂ ಬೇಕಾದರೂ ಆಮೇಲೆ ಹಾಡಬಹುದಾಗಿತ್ತು’ ಎಂದು ಹೇಳಿದರು.

ಕೃತಿಕಾರ ಆರ್. ಮಂಜುನಾಥ್ ಮಾತನಾಡಿ, ‘1990ರಿಂದ ರಾಜ್ ಕುಮಾರ್ ಅವರ ಒಡನಾಟವಿತ್ತು. ಅವರು ಗಝಲ್, ತುಮರಿ, ಖಯಾಜ್, ಪಪಾನ್ ಸಹಿತ ವಿವಿಧ ಸಂಗೀತಗಳನ್ನು ಕೇಳುವುದಷ್ಟೇ ಅಲ್ಲ, ಅವುಗಳನ್ನು ಹಾಡಬೇಕು ಎಂದು ಬಯಸುತ್ತಿದ್ದರು. ಅವರೊಳಗಿನ ನಾದಯೋಗಿಯನ್ನು ಅಕ್ಷರರೂಪಕ್ಕೆ ಇಳಿಸಬೇಕು ಎಂದು ಹಿಂದೆಯೇ ಯೋಚನೆ ಮಾಡಲಾಗಿತ್ತು. ಈಗ ಕಾರ್ಯರೂಪಕ್ಕೆ ಬಂದಿದೆ’ ಎಂದು ತಿಳಿಸಿದರು.

ಸಂಗೀತ ಸಂಯೋಜಕರಾದ ಮಹೋಹರ್ ನಾಯ್ಡು, ಲಹರಿ ವೇಲು, ಚಲನಚಿತ್ರ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ತಾಂಜಾನಿಯದ ಗೌಡ ಸಿ.ಡಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-4-1733960778

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.