ಚಿತ್ರದುರ್ಗ: ನಾಡಿನ ಸಾಂಸ್ಕೃತಿಕ ಕೊಂಡಿಯಾಗಿರುವ ಚಿತ್ರದುರ್ಗ ಆಕಾಶವಾಣಿ ಕೇಂದ್ರ ಮೇ 3ರಂದು 35 ವರ್ಷ ಪೂರ್ಣಗೊಳಿಸಿ 36ಕ್ಕೆ ಪಾದಾರ್ಪಣೆ ಮಾಡುತ್ತಿದೆ. ಈ ಐತಿಹಾಸಿಕ ಸಂದರ್ಭದ ಅಂಗವಾಗಿ ಆಕಾಶವಾಣಿಯು ವಿಶೇಷ ಕಾರ್ಯಕ್ರಮ ಆಯೋಜಿಸಿದೆ.

1991ರ ಮೇ 3ರಂದು ಆರಂಭ ಗೊಂಡ ಚಿತ್ರದುರ್ಗ ಕೇಂದ್ರವು ಕರ್ನಾಟಕದ ಮೊಟ್ಟಮೊದಲ ಎಫ್.ಎಂ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 102.6 ಕಂಪನಾಂಕದಲ್ಲಿ ಪ್ರಸಾರವಾಗುವ ಈ ಕೇಂದ್ರವು ಆಧುನಿಕ ತಂತ್ರಜ್ಞಾನದೊಂದಿಗೆ ನೆಟ್ವರ್ಕ್ ಲೈವ್ ಸ್ಟ್ರೀಮ್, ನ್ಯೂಸ್ ಆನ್ ಏರ್ ಆಪ್ ಹಾಗೂ ಡಿಟಿಎಚ್ ಸೇವೆಗಳ ಮೂಲಕ ವಿಶ್ವವ್ಯಾಪಿ ಜಾಲವನ್ನು ವಿಸ್ತರಿಸಿಕೊಂಡಿದೆ.

ಆಧುನಿಕ ಎಸ್ಎಂಎಸ್ ಸೌಲಭ್ಯಗಳು, ವ್ಯಾಟ್ಸ್ಆ್ಯಪ್ ಹಾಗೂ ಫೋನ್ ಇನ್ ಸಂವಹನದೊಂದಿಗೆ ನಿರಂತರ ಶ್ರೋತೃಗಳೊಂದಿಗೆ ನೇರ ಸಂಪರ್ಕ ಸಾಧಿಸಿದೆ. ಲೋಕಲ್ ರೇಡಿಯೊ ಸ್ಟೇಷನ್ ಆಗಿರುವ ಚಿತ್ರದುರ್ಗ ಆಕಾಶವಾಣಿ ಆರಂಭದಿಂದ ಇಂದಿನವರೆಗೂ ತನ್ನದೇ ಆದ ವಿಶಿಷ್ಟ ಪ್ರಯತ್ನದ ಮೂಲಕ ಸ್ಥಳೀಯ ಜನರ ಅವಶ್ಯಕತೆ ಪೂರೈಸಲು ಗಂಭೀರ ಪ್ರಯತ್ನ ಮಾಡುತ್ತಿದೆ. ಐತಿಹಾಸಿಕ ಕಲ್ಲಿನ ಕೋಟೆ ನಾಡಿನ ಬುಡಕಟ್ಟು ಸಂಸ್ಕೃತಿಗೆ ಬೆಳಕು ಚೆಲ್ಲಿ, ಜನಮಾನಸದಲ್ಲಿ ಇಂದಿಗೂ ಮನೆಮಾತಾಗಿದೆ.

ಈ ಕೇಂದ್ರವು ಹಲೋ ಡಾಕ್ಟರ್, ವಿವಿಧ ಇಲಾಖೆಯ ಅಧಿಕಾರಿಗಳಿಂದ ಸರ್ಕಾರದ ವಿವಿಧ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುವ ಹಲೋ ಆಕಾಶವಾಣಿ, ಜ್ಞಾನ ವಾಹಿನಿ ನೇರ ಫೋನ್ ಇನ್ ಕಾರ್ಯಕ್ರಮ, ವಿವಿಧ ಕ್ಷೇತ್ರದ ಸಾಧಕರನ್ನು ಪರಿಚಯಿಸುವ ಅರಳಿದ ಹೂಗಳ ಮಾಲಿಕೆ, ಕೃಷಿ ಬೆಳಕು, ಯುವವಾಣಿ ಹಾಗೂ ಚಿಣ್ಣರ ಕಲರವದಂತಹ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಜನರ ಮನ ಗೆದ್ದಿದೆ.

ಚಿತ್ರದುರ್ಗ ಆಕಾಶವಾಣಿಯ 36ನೇ ವರ್ಷಾಚರಣೆಯ ಅಂಗವಾಗಿ ಮೇ 3ರಂದು ಬೆಳಿಗ್ಗೆ 8.30ಕ್ಕೆ ಜಿಲ್ಲೆಯ ಕವಯತ್ರಿಯರಿಂದ ‘ಕಾವ್ಯಧಾರೆ’, 9.05ಕ್ಕೆ ಉದಯೋನ್ಮುಖ ಬರಹಗಾರ್ತಿ ದೀಪಿಕಾ ಮಾರಘಟ್ಟ ಅವರಿಂದ ‘ಆಕಾಶವಾಣಿ ನಮ್ಮೆಲ್ಲರ ವಾಣಿ’ ಕುರಿತು ವಿಚಾರ ಲಹರಿ, 10 ಗಂಟೆಗೆ ದಾವಣಗೆರೆಯ ಹಸೀನಾ ಬೇಗಂ ಮತ್ತು ಎಸ್.ಸಂಗೀತ ಅವರಿಂದ ವೈವಿಧ್ಯಮಯ ಸಂಗೀತ ಕಾರ್ಯಕ್ರಮ ಪ್ರಸಾರವಾಗಲಿವೆ.

ಬೆಳಿಗ್ಗೆ 11 ಗಂಟೆಗೆ ನಿಲಯದ ವೇದಿಕೆಯಲ್ಲಿ ಯುವವಾಣಿ ಕಲಾವಿದರಿಂದ ಭರತನಾಟ್ಯ ಪ್ರದರ್ಶನ ಏರ್ಪಡಿಸಲಾಗಿದೆ. ಮಧ್ಯಾಹ್ನ 1.20ಕ್ಕೆ ಕೇಳುಗರ ಅಭಿಪ್ರಾಯಗಳನ್ನಾಧರಿಸಿದ ಕಾರ್ಯಕ್ರಮ, ಸಂಜೆ 5.30ಕ್ಕೆ ಕಳೆದ ಸಾಲಿನ ಗುಣಾತ್ಮಕ ಕಾರ್ಯಕ್ರಮಗಳ ಸಿಂಹಾವಲೋಕನ ಇರಲಿದೆ. ಸಂಜೆ 6.50ಕ್ಕೆ ಕೃಷಿರಂಗದಲ್ಲಿ ಜಾಣೆ-ಜಾಣೆಯರ ವಾಣಿಯಲ್ಲಿ ಎಂ.ಶೋಭಾ ಆದ್ರಿಕಟ್ಟೆ, ಪಿ.ಎಂ.ಸುಮಾ ಆನಿವಾಳ, ಸಿ.ಹೇಮಲತಾ ಹಾಗೂ ಎಚ್.ಮಲ್ಲಿಕಾರ್ಜುನ ಆರಾಧ್ಯ ಸೋಮೇನಹಳ್ಳಿ ಅವರು ಭಾಗವಹಿಸಲಿದ್ದಾರೆ ಎಂದು ಚಿತ್ರದುರ್ಗ ಆಕಾಶವಾಣಿ ನಿಲಯದ ಕಾರ್ಯಕ್ರಮ ಮುಖ್ಯಸ್ಥ ಹನುಮಂತರಾಯಪ್ಪ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-44-525476598

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.