ನಟ ರವಿಚಂದ್ರನ್ ಹಾಗೂ ಸಂಗೀತ ನಿರ್ದೇಶಕ ಹಂಸಲೇಖ ಅವರ ನಾಲ್ಕು ದಶಕಗಳ ಸಿನಿಪಯಣವನ್ನು ಸಂಭ್ರಮಿಸುವ ‘ಕ್ರೇಜಿ ಬ್ರಹ್ಮ’ ಕಾರ್ಯಕ್ರಮ ಮೇ 30ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ಪ್ರಸ್ತುತ್ ಇನ್ನೋವೇಟಿವ್ ಸಂಸ್ಥೆಯು ಮೇ 30ರಂದು ಕೆಂಗೇರಿಯ ಜೆಕೆ ಗ್ರ್ಯಾಂಡ್ ಅರೇನಾದಲ್ಲಿ ಸಂಜೆ 6ರಿಂದ ರಾತ್ರಿ 12ರವರೆಗೂ ಈ ಕಾರ್ಯಕ್ರಮ ಆಯೋಜಿಸುತ್ತಿದ್ದು,ರವಿಚಂದ್ರನ್ ಮತ್ತು ಹಂಸಲೇಖ ಜೋಡಿಯ ಪ್ರಮುಖ ಹಾಡುಗಳ ಗಾಯನ ಹಾಗೂ ಮರುಸೃಷ್ಟಿ ಇರಲಿದೆ. ದಕ್ಷಿಣ ಭಾರತದ ಹಲವು ಜನಪ್ರಿಯ ಕಲಾವಿದರು ಭಾಗವಹಿಸುವುದರ ಜೊತೆಗೆ, ರವಿಚಂದ್ರನ್ ಅವರ ಜೊತೆಗೆ ನಟಿಸಿದ ಹಲವು ನಟಿಯರು ಭಾಗವಹಿಸಲಿದ್ದಾರೆ.

‘ಒಂದು ಸಂಬಂಧದಲ್ಲಿ ಬಿರುಕು ಬಿಟ್ಟಾಗ ಸಂಭ್ರಮಿಸುವವರೇ ಜಾಸ್ತಿ. ಆದರೆ, ನಮ್ಮನ್ನು ಸೇರಿಸುವುದಕ್ಕೆ ಹಲವರು ಪ್ರಯತ್ನ ಮಾಡುತ್ತಿದ್ದಾರೆ. ನಮ್ಮಿಬ್ಬರದ್ದು ಚಿತ್ರರಂಗ ಕಂಡ ಅತ್ಯುತ್ತಮ ಜೋಡಿ. ನನ್ನನ್ನು ‘ಕ್ರೇಜಿ ಸ್ಟಾರ್’ ಮಾಡಿದ್ದು ಅವರೇ’ ಎಂದರು ರವಿಚಂದ್ರನ್.

‘ಈ ನೆನಪಿನ ದೋಣಿಯಲ್ಲಿ ಅಭಿಮಾನಿಗಳನ್ನು ತೇಲಿಸುವ ಕೆಲಸವನ್ನು ಮಾಡುತ್ತೇವೆ. ಇದು ಯಶಸ್ವಿಯಾದರೆ ಇನ್ನಷ್ಟು ಕಾರ್ಯಕ್ರಮಗಳನ್ನು ಮಾಡಬಹುದು’ ಎಂದರು ಹಂಸಲೇಖ.v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-51-441868706

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.