ದಾವಣಗೆರೆ: ನಗರದ ಪ್ರತಿಷ್ಠಿತ ಜೈನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಆಯೋಜಿಸಿದ್ದ ವಾರ್ಷಿಕ ಸಾಂಸ್ಕೃತಿಕ ಮಹೋತ್ಸವ ಶೃಂಗ –2026 ಕಾರ್ಯಕ್ರಮವು ಶುಕ್ರವಾರ ಹಾಗೂ ಶನಿವಾರ ಅದ್ದೂರಿಯಾಗಿ ನಡೆಯಿತು.

2 ದಿನಗಳ ಈ ಸಂಭ್ರಮಾಚರಣೆಯು ವಿದ್ಯಾರ್ಥಿಗಳ ಉತ್ಸಾಹ, ಪ್ರತಿಭೆ ಮತ್ತು ಸೃಜನಶೀಲತೆಯನ್ನು ಪ್ರತಿಬಿಂಬಿಸುವ ಮಹತ್ವದ ವೇದಿಕೆಯಾಗಿತ್ತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಎಸ್ಪಿ ಶೇಖರ್ ಎಚ್.ಟಿ., ಪದ್ಮಶ್ರೀ ಪುರಸ್ಕೃತ ಸುರೇಶ್ ಹನಗವಾಡಿ, ಜೆಜೆಎಂ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕರು, ಜೈನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಅಧ್ಯಕ್ಷ ಅಚಲಚಂದ್ ಜೈನ್ ಹಾಗೂ ಟ್ರಸ್ಟಿ ಕುನಾಲ್ ಬಿ. ಪರ್ಮಾರ್ ಅವರು ಉಪಸ್ಥಿತರಿದ್ದರು.

ಖ್ಯಾತ ಗಾಯಕ ಹಾಗೂ ನಟ ರಾಜೇಶ್ ಕೃಷ್ಣನ್ ಅವರು ಸೆಲೆಬ್ರಿಟಿ ಅತಿಥಿಯಾಗಿ ಭಾಗವಹಿಸಿದ್ದರು. ಸಂಗೀತ ಸಂಜೆನಲ್ಲಿ ರಾಜೇಶ್ ಕೃಷ್ಣನ್ ಅವರು ತಮ್ಮ ಗಾಯನದಿಂದ ಎಲ್ಲರನ್ನು ಮನರಂಜಿಸಿದರು.

ಶೃಂಗ ವಾರ್ಷಿಕ ವರದಿಯನ್ನು ಸಂಚಾಲಕ ರಾಹುಲ್ ಪಾಟೀಲ್ ಮಂಡಿಸಿದರು. ಅಕಾಡೆಮಿಕ್ ವರದಿಯನ್ನು ಡೀನ್ ಅಕಾಡೆಮಿಕ್ಸ್ ಪ್ರಕಾಶ್ ಕೆ.ಬಿ. ಮಂಡಿಸಿದರು. ಪ್ರಾಂಶುಪಾಲ ಗಣೇಶ್ ಡಿ.ಬಿ. ಅವರನ್ನು ಸನ್ಮಾನಿಸಲಾಯಿತು.

ಸಲಹೆಗಾರರಾದ ಮಂಜಪ್ಪ ಸಾರಥಿ, ಡೀನ್ ಅಕಾಡೆಮಿಕ್ಸ್ ಡಾ. ಪ್ರಕಾಶ್ ಕೆ.ಬಿ., ಸಂಚಾಲಕರಾದ ರಾಹುಲ್ ಪಾಟೀಲ್, ಸಾಂಸ್ಕೃತಿಕ ಸಂಯೋಜಕರಾದ ಪ್ರೊ. ಸವಿತಾ ಮಮದಾಪುರ ಹಾಗೂ ಕ್ರೀಡಾ ಸಂಯೋಜಕ ಚೇತನ್ ಎಚ್. ಆರ್. ಸೇರಿದಂತೆ ಹಲವಾರು ಅಧ್ಯಾಪಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-43-1727289801

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.